ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳವಾಡಿಯ ಫ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್ಸ್ ನೇತೃತ್ವದಲ್ಲಿ ಜ.27 ಹಾಗೂ 28ರಂದು ನಡೆಯಲಿರುವ ಕೆಪಿಎಲ್ – 2024 ಕ್ರಿಕೆಟ್ ಪಂದ್ಯಾಟದ ಪೋಸ್ಟರ್ ಬಿಡುಗಡೆ ಹಾಗೂ ಹರಾಜು ಪ್ರಕ್ರಿಯೆ ಇತ್ತಿಚಿಗೆ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜರುಗಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಮಾರ್ ಶೆಟ್ಟಿ ಕಾರಿಕಟ್ಟೆ ಕೆಪಿಎಲ್ ಪೋಸ್ಟರ್ ಬಿಡುಗಡೆ ಮಾಡಿದರು. ಅನುದೀಪ್ ಹೆಗ್ಡೆ ಕಳವಾಡಿ ಬಿಡ್ಡಿಂಗ್ ಬಾಕ್ಸ್ ತೆರೆದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಎನ್.ಎಸ್ ಮಾಲೀಕರಾದ ನಾಗೇಂದ್ರ ಮಯ್ಯಾಡಿ ಹಾಗೂ ಫ್ರೆಂಡ್ಸ್ ಮಾರಿಕಾಂಬಾ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಕಾರ್ಯದರ್ಶಿ ಪೂರ್ಣಚಂದ್ರ ಮತ್ತು ಸಂಸ್ಥೆಯ ಸರ್ವ ಸದಸ್ಯರು ಎಲ್ಲ ತಂಡದ ಮಾಲೀಕರು ಐಕಾನ್ ಆಟಗಾರರು ಉಪಸ್ಥಿತರಿದ್ದರು.
ಸಂಸ್ಥೆಯ ನಾಗೇಶ್ ಕಳವಾಡಿ ನಿರೂಪಿಸಿದರು. ಶಿವಕುಮಾರ್ ಹರಾಜು ಪ್ರಕ್ರಿಯೆ ನಡೆಸಿದರು