ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ಬೈಂದೂರು, ಪ್ರಾದೇಶಿಕ ಸಾರಿಗೆ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೈಂದೂರು ವಲಯದ ಎಲ್ಲಾ ಶಾಲೆಗಳ ಶಾಲಾವಾಹನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ “ರೋಟರಿ ಜಿಲ್ಲಾ ಕಾರ್ಯಕ್ರಮ ರಸ್ತೆ ಸುರಕ್ಷತೆಯ ” ಅಂಗವಾಗಿ ಶಾಲಾ ವಾಹನದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಒಂದು ದಿನದ ತರಬೇತಿ ಕಾರ್ಯಗಾರ ಉಪ್ಪಂದದ ರೈತ ಸಿರಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಬೈಂದೂರು ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಅವರು ಉದ್ಘಾಟಿಸಿ ಮಾತನಾಡಿ, “ಮಕ್ಕಳು ಬಹಳ ಸೂಕ್ಷ್ಮ ಮತ್ತು ಅವರೇ ನಮ್ಮ ಭವಿಷ್ಯ ; ಅವರ ಸುರಕ್ಷತೆಯ ಬಗ್ಗೆ ನಾವು ಎಷ್ಟು ಕಾಳಜಿ ವಹಿಸಿದರು ಕೂಡ ಅದು ಕಡಿಮೆಯೇ ,ಪ್ರತಿದಿನ ಪ್ರತಿ ಕ್ಷಣ ಮೈಯೆಲ್ಲಾ ಕಣ್ಣಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಬೈಂದೂರು ತಹಶೀಲ್ದಾರರಾದ ಪ್ರದೀಪ್ ಆರ್ ಅವರು ಉಡುಪಿ ಜಿಲ್ಲಾ ಆರ್.ಟಿ.ಓ ರವಿಶಂಕರ್ ಪಿ ವಿರಚಿತ ರಸ್ತೆ ಸುರಕ್ಷತಾ ಮಾಹಿತಿ ಪುಸ್ತಕ ಹಾಗೂ ಸಂಚಾರಿ ನಿಯಮದ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಉಡುಪಿ ಜಿಲ್ಲೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಂಕರ್ ಪಿ ಅವರು ಶಾಲಾ ವಾಹನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಸುಧೀರ್ಘವಾದ ತರಬೇತಿ ನೀಡಿದರು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್, ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿಗಳಾದ ಚಂದ್ರಶೇಖರ್ ಶೆ̧ಟ್ಟಿ ಬೈಂದೂರು ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಕಂಬಿ, ಆರ್.ಟಿ.ಓ ಕಚೇರಿಯ ಅಧಿಕಾರಿ ಮಾರುತಿ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷ ಪ್ರಸಾದ್ ಪ್ರಭು ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿ ಮತ್ತು ಪ್ರಸ್ತಾವಿಕ ಮಾತುಗಳನ್ನಡಿದರು. ಮಂಜುನಾಥ ಮಹಾಲೆ ಧನ್ಯವಾದ ಸಮರ್ಪಿಸಿದರು ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. 120 ಮಂದಿ ಶಾಲಾವಾಹನ ಚಾಲಕರು 25 ಮಂದಿ ಶಾಲಾ ಮುಖ್ಯಸ್ಥರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.