ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ರೀಡೆ ಬದುಕಿನಲ್ಲಿ ನವೋಲ್ಲಾಸವನ್ನು ನೀಡುತ್ತದೆ. ಯುವ ಸಮುದಾಯವು ಶಿಕ್ಷಣದೊಂದಿಗೆ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕ್ರೀಯಾಶೀಲರಾಗಿರುವುದು ಬಹುಮುಖ್ಯ ಎಂದು ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು.
ಅವರು ಕಳವಾಡಿಯ ಫ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್ಸ್ ನೇತೃತ್ವದಲ್ಲಿ ಆಯೋಜಿಸಲಾದ ಎರಡು ದಿನಗಳ ಕೆಪಿಎಲ್ – 2024 ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿ ಕ್ರಿಕೆಟ್ ಹಲವರ ನೆಚ್ಚಿನ ಕ್ರೀಡೆ. ಪ್ರತಿ ಊರುಗಳಲ್ಲಿಯೂ ಕ್ರಿಕೆಟ್ ಆಯೋಜಿಸುವುದು, ಆ ಮೂಲಕ ಸಂಘಟನಾತ್ಮಕವಾಗಿ ತೊಡಗಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಪ್ರವೀಣ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಡೆಫ್ ಕ್ರಿಕೆಟ್ತಂಡದ ಆಟಗಾರ ಪ್ರಥ್ವಿರಾಜ್ ಶೆಟ್ಟಿ ಹುಂಚನಿ, ಕುಂದಾಪುರ ಚಕ್ರವರ್ತಿ ಕ್ರಿಕೆಟರ್ಸ್ನ ಮನೋಜ್ ನಾಯರ್, ಬೈಂದೂರು ರೈತ ಸಂಘದ ದೀಪಕ್ ಕುಮಾರ್ ಶೆಟ್ಟಿ, ಯಾದಗಿರಿಯ ಕೃಷ್ಣರೆಡ್ಡಿ, ಕಳವಾಡಿ ಮಾರಿಕಾಂಬಾ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರರಾದ ವಸಂತ್ ಶೆಟ್ಟಿ ಕಾರಿಕಟ್ಟೆ, ಸಂಸ್ಥೆಯ ಕಾರ್ಯದರ್ಶಿ ಪೂರ್ಣಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಕ್ರೀಡಾಪಟು ಪ್ರಥ್ವಿರಾಜ್ ಶೆಟ್ಟಿ ಹುಂಚನಿ ಅವರನ್ನು ಸನ್ಮಾನಿಸಲಾಯಿತು. ದಾನಿ ರವೀಶ್ ಪೂಜಾರಿ ಯಡ್ತರೆ, ಕ್ರೀಡಾಂಗಣದ ಮಾಲಿಕ ರವಿ ಮಯ್ಯಾಡಿ ಅವರನ್ನು ಗೌರವಿಸಲಾಯಿತು.
ಫ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್ಸ್‍ನ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಗೇಶ್ ಕಳವಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.