ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವ-2024ರ ಲಾಂಛನ ಬಿಡುಗಡೆ ಸಮಾರಂಭದ ಪ್ರಯುಕ್ತ ಉತ್ತಮ ಮಳೆ, ಮತ್ಸ್ಯಕ್ಷಾಮ ನಿವಾರಣೆಗಾಗಿ ಮತ್ತು ಗ್ರಾಮ ಸುಭಿಕ್ಷೆಗಾಗಿ ಗಂಗೊಳ್ಳಿಯಿಂದ ಕುಂಭಾಶಿವರೆಗೆ ಬೃಹತ್ ಪಾದಯಾತ್ರೆ ಭಾನುವಾರ ನಡೆಯಿತು.
ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ದೇವಸ್ಥಾನದ ಸಮೀಪ ಚಂದ್ರ ಖಾರ್ವಿ ಗಂಗೊಳ್ಳಿ ಪಾದಯಾತ್ರೆಗೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಭಾಸ್ಕರ ಕಲೈಕಾರ್ ದೀಪ ಪ್ರಜ್ವಲಿಸಿದರು.
ಗಂಗೊಳ್ಳಿಯಿಂದ ಆರಂಭಗೊಂಡ ಪಾದಯಾತ್ರೆ ಕುಂಭಾಶಿಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಸಮಾಪನಗೊಂಡಿತು.
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಅಧ್ಯಕ್ಷ ಸತೀಶ್ ಜಿ., ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ, ಪುರೋಹಿತರಾದ ಜಿ.ರಾಘವೇಂದ್ರ ನಾರಾಯಣ ಆಚಾರ್ಯ, ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು, ಭಜಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.