ಹೊಸ್ಕೋಟೆ ಹಾಲು ಉತ್ಪಾದಕರ ಸೊಸೈಟಿ: ಆಡಳಿತ ಮಂಡಳಿ ಸದಸ್ಯರ ಚುನಾವಣೆ ರದ್ದುಗೊಳಿಸಿ ತೀರ್ಪು

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ,ಜು.28:
ಹೊಸ್ಕೋಟೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಆಡಳಿತ ಮಂಡಳಿ ಚುನಾವಣೆಯು ನ್ಯಾಯಸಮ್ಮತವಾಗಿ ನಡೆದಿಲ್ಲವೆಂದು, 2023ರ ಅಗಸ್ಟ್‌ 27ರಂದು ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯನ್ನು ರದ್ದುಗೊಳಿಸಿ  ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ತೀರ್ಪು ನೀಡಿದೆ.

Call us

Click Here

ಹೊಸ್ಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯು ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಹೊಸ್ಕೋಟೆ ನಿವಾಸಿ, ಸಂಘದ ಸದಸ್ಯ ಗೋಪಾಲ ಪೂಜಾರಿ ಎಂಬುವವರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ನೀಡಿದ್ದರು. 123 ಜನ ಅರ್ಹ ಮತದಾರರಿದ್ದರೂ ಮತದಾನದ ದಿನದಂದು ಕೇವಲ 75 ಜನರ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಿದ್ದು, 43 ಜನರನ್ನು ಕೈಬಿಡಲಾಗಿತ್ತು. ಇದಕ್ಕೆ ಯಾವುದೇ ನೋಟಿಸು ನೀಡಿರಲಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿದ ಪ್ರಕ್ರಿಯೆ ಎಂದು ಹೊಸ್ಕೋಟೆಯ ಗೋಪಾಲ ಪೂಜಾರಿ ದೂರಿದ್ದರು.

ಸಂಘದ ಆಡಳಿತ ಮಂಡಳಿಯ ಚುನಾವಣೆ ಪೂರ್ವದಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮ 13-ಡಿ ಪ್ರಕಾರ ನೋಟೀಸು ನೀಡಿಲ್ಲ. ಸಂಘದ ದಿ.27-08-2023ರಂದು ನಡೆದ ಆಡಳಿತ ಮಂಡಳಿ ಚುನಾವಣೆಯು ನ್ಯಾಯಸಮ್ಮತವಾಗಿ, ಮುಕ್ತವಾಗಿ ನಡೆಯಲ್ಲ. ಅರ್ಹ 43 ಸದಸ್ಯರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ವಂಚಿತರನ್ನಾಗಿ ಮಾಡಿ, ಚುನಾವಣೆ ನಡೆಸಲಾಗಿದೆ. 75 ಜನ ಸದಸ್ಯರ ಅರ್ಹ ಮತದಾರರ ಪಟ್ಟಿಗೆ ಜಿಲ್ಲಾ ಚುನಾವಣಾಧಿಕಾರಿಯಿಂದ ಮೇಲು ರುಜು ಪಡೆದಿಲ್ಲ. ಜಿಲ್ಲಾ ಚುನಾವಣಾಧಿಕಾರಿಯವರು ಪರಿಶೀಲಿಸಿ, ಪ್ರಕಟಣೆ ನೀಡಿರುವ ದಾಖಲೆ ಹಾಜರುಪಡಿಸಿರುವುದಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ತೀರ್ಪು ನೀಡಲಾಗಿದೆ. ಅದರಂತೆ 27-08-2023ರಂದು ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯನ್ನು ರದ್ದುಗೊಳಿ ತೀರ್ಪಿ ನೀಡಲಾಗಿದೆ. ಮುಂದಿನ ಚುನಾವಣೆಯ ತನಕ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳಲು ಆಡಳಿತಾಧಿಕಾರಿಯನನು ನೇಮಕ ಮಾಡಲು ಆದೇಶಿಸಲಾಗಿದೆ.

Leave a Reply