ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಸಮಾನ ಮನಸ್ಕ ಸದಸ್ಯರು ಮುಖ್ಯವಾಗಿರಬೇಕು. ಅವರೆಲ್ಲರ ಸತ್‌ಚಿಂತನೆಗಳ ಜತೆಗೆ ಆಸಕ್ತಿ ಹಾಗೂ ಛಲವಿದ್ದರೆ ಅಸಾಧ್ಯವೆಂಬುವುದು ಯಾವುದೂ ಇಲ್ಲ. ಮನಸ್ಸಿಗೆ ತೃಪ್ತಿ ನೀಡುವ ಉತ್ತಮ ಸೇವೆಗಳಿಂದ ಸಿಗುವ ಸಂತೋಷ ಶಾಶ್ವತವಾಗಿರುತ್ತದೆ ಎಂದು ಡಾ. ರೂಪಶ್ರೀ ಮರವಂತೆ ಹೇಳಿದರು.
ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಇನ್ನರ್‌ವೀಲ್ ಕ್ಲಬ್‌ನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ರಕ್ಷಣೆ ಹಾಗೂ ಆರೋಗ್ಯದ ಬಗ್ಗೆ ಅಲ್ಲಲ್ಲಿ ಜಾಗೃತಿ ಸಮಾವೇಶ, ಕಷ್ಟದಲ್ಲಿರುವವರಿಗೆ, ನೊಂದವರಿಗೆ ತಕ್ಷಣ ಸ್ಪಂದಿಸುವ ಹಾಗೂ ಮಕ್ಕಳಿಗೆ ಪ್ರಕೃತಿ ರಕ್ಷಣೆ, ನೀರಿನ ಮಿತ ಬಳಕೆ ಮತ್ತು ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುವ ಶೈಕ್ಷಣಿಕ ಕಾರ್ಯಕ್ರಮ ನಡೆಸುವ ಮೂಲಕ ಮಾನವೀಯತೆಯ ಸೇವೆ ನಿಮ್ಮಿಂದಾಗಲಿ ಎಂದು ಶುಭಹಾರೈಸಿದರು.
ಈ ಸಾಲಿನ ನೂತನ ಅಧ್ಯಕ್ಷೆ ಗುಲಾಬಿ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಹೋಬಳಿದಾರ್ ಮತ್ತು ಆಯುಕ್ತಾ ಯಡ್ತರೆ ನೂತನ ಸದಸ್ಯರಾಗಿ ಕ್ಲಬ್ಬಿಗೆ ಸೇರ್ಪಡೆಗೊಂಡರು. ಅರ್ಹರಿಗೆ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಆರ್ಥಿಕ ಸಹಕಾರ ನೀಡಲಾಯಿತು. ರೋಟರಿ ಅಧ್ಯಕ್ಷ ಮೋಹನ ರೇವಣ್ಕರ್ ಸ್ಪಂದನಾ ಬುಲೆಟಿನ್ ಬಿಡುಗಡೆ ಮಾಡಿದರು.
ಇದನ್ನೂ ಓದಿ ► ರೋಟರಿ ಕ್ಲಬ್ ಬೈಂದೂರು: 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ – https://kundapraa.com/?p=74181 .
ಕ್ಲಬ್ ಸದಸ್ಯೆ ಗೌರಿ ದೇವಾಡಿಗ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷೆ ಚಂದ್ರಿಕಾ ರಾಮು ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಮಾನಸ ರಾವ್ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಚೈತ್ರಾ ಯಡ್ತರೆ ಸಂದೇಶ ವಾಚಿಸಿದರು. ಎಂ. ರಾಜೀವಿ ಗೋವಿಂದ್ ನಿರೂಪಿಸಿ, ಕೆ. ಶಾರದಾ ವಂದಿಸಿದರು.
ಕಳೆದ 26 ವರ್ಷಗಳಿಂದ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಯಿಂದ ಬೈಂದೂರು ಇನ್ನರ್‌ವೀಲ್ ಕ್ಲಬ್ ಬಹಳ ಎತ್ತರಕ್ಕೆ ಬೆಳೆದಿದೆ. ಈ ವರ್ಷದ ಸಂಸ್ಥೆಯ ಧ್ಯೇಯವಾಕ್ಯ ’ಹಾರ್ಟ್ ಬೀಟ್ ಆಫ್ ಹ್ಯುಮಾನಿಟಿ’ ಅದರಂತೆಯೇ ಒಂದು ಜೀವಕ್ಕೆ ಹೃದಯ ಬಡಿತ ಎಷ್ಟು ಮುಖ್ಯವೋ ಮನುಕುಲದ ಒಳಿತಿಗಾಗಿ ನಾವು ಮಾಡುವ ಪ್ರತಿ ಕಾರ್ಯವು ಚಿಕ್ಕದಿರಲಿ ದೊಡ್ಡದಿರಲಿ ಅಷ್ಟೇ ಮುಖ್ಯ ಎಂಬುದನ್ನು ಬಲವಾಗಿ ನಂಬಬೇಕು ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಗುಲಾಬಿ ಮರವಂತೆ ಹೇಳಿದರು: – ಗುಲಾಬಿ ಮರವಂತೆ ಅಧ್ಯಕ್ಷರು ಇನ್ನರ್‌ವೀಲ್ ಕ್ಲಬ್ ಬೈಂದೂರು