ಬೈಂದೂರು ರತ್ತೂಬಾಯಿ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಾಯಕತ್ವ ಹಾಗೂ ಸೇವೆ ಮನೋಭಾವನೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಅಳವಡಿಸಿಕೊಳ್ಳಲು ಇಂಟರ್ಯಾಕ್ಟ್ ಕ್ಲಬ್ ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯ ಆಧಾರದ ಮೇಲೆ ಗುಣಾತ್ಮಕ ಬದಲಾವಣೆಯೂ ಸಾಧ್ಯವಿದೆ ಎಂದು ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಹೇಳಿದರು.

Call us

Click Here

ಅವರು ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಬೈಂದೂರು ರೋಟರಿ ಕ್ಲಬ್ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಇದರ ನೂತನ ಅಧ್ಯಕ್ಷರಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರತ್ತೂಬಾಯಿ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಮದ್ದೋಡಿ, ರೋಟರಿಯ ಮಾಜಿ ಸಹಾಯಕ ಗವರ್ನರ್ ಸೋಮನಾಥನ್ ಆರ್., ಪೂರ್ವಾಧ್ಯಕ್ಷರುಗಳಾದ ಐ. ನಾರಾಯಣ್, ಮಂಜುನಾಥ ಮಹಾಲೆ, ಡಾ. ಪ್ರವೀಣ್ ಶೆಟ್ಟಿ, ಪ್ರಸಾದ್ ಪ್ರಭು, ಇನ್ನರ್ವೀಲ್ ಅಧ್ಯಕ್ಷರಾದ ಗುಲಾಬಿ ಮರವಂತೆ, ಬೈಂದೂರು ರೋಟರಿ ಇಂಟರ್ಯಾಕ್ಟ್ ಸಂಯೋಜಕ ರಾಘವೇಂದ್ರ ಉಪ್ಪುಂದ, ಇಂಟರ್ಯಾಕ್ಟ್‌ ಕ್ಲಬ್‌ ಅಧ್ಯಕ್ಷ ಅಮ್ಜದ್‌, ಕಾರ್ಯದರ್ಶಿ ಪ್ರಕೃತಿ ಉಪಸ್ಥಿತರಿದ್ದರು.

ರತ್ತೂಬಾಯಿ ಜನತಾ ಪ್ರೌಢಶಾಲೆಯ ಇಂಟರ್ಯಾಕ್ಟ್ ಸಂಯೋಜಕ ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರೂಪಿಸಿ, ಬೈಂದೂರು ರೋಟರಿ ಕಾರ್ಯದರ್ಶಿ ಸುನಿಲ್ ಹೆಚ್. ಜಿ. ವಂದಿಸಿದರು.

Leave a Reply