ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ – ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಜಿ. ವೆಂಕಟೇಶ ಶೆಣೈ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ – ಆಪರೇಟಿವ್ ಸೊಸೈಟಿಯ 2024 – 26 ನೇ ಸಾಲಿನ ಅಧ್ಯಕ್ಷರಾಗಿ ಜಿ. ವೆಂಕಟೇಶ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Call us

Click Here

ಸಹಕಾರಿಯ ಸಭಾ ಭವನದಲ್ಲಿ ಸೋಮವಾರ ನಡೆದ ಅಧ್ಯಕ್ಷರ ಸ್ಥಾನಕ್ಕೆ ಒಂದು ನಾಮಪತ್ರ ಮಾತ್ರ ಸಲ್ಲಿಕೆ ಆದ ಕಾರಣ ಜಿ. ವೆಂಕಟೇಶ ಶೆಣೈ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ನಿರ್ವಾಚನಾಧಿಕಾರಿ ಜಯರಾಮ ಕೆ. ಘೋಷಿಸಿದರು. ಸಹಕಾರಿಯ ಅಧ್ಯಕ್ಷರಾಗಿದ್ದ ಎಚ್. ಗಣೇಶ ಕಾಮತ್ ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಸಹಕಾರಿಯ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎಚ್. ಗಣೇಶ ಕಾಮತ್, ಎನ್. ಮಾಧವ ಕಿಣಿ, ಎಸ್. ವೆಂಕಟರಮಣ ಆಚಾರ್ಯ, ಬಿ. ರಾಘವೇಂದ್ರ ಪೈ, ಜಿ. ವೇದವ್ಯಾಸ ಆಚಾರ್ಯ, ಕೆ. ಪರಮೇಶ್ವರ ನಾಯಕ್, ನಾಗಪ್ರಸಾದ ಪೈ. ಎಂ. ಜಿ., ಕೆ. ಗೋಪಾಲಕೃಷ್ಣ ನಾಯಕ್, ಮಹಾಬಲ ಪೂಜಾರಿ, ಕಿರಣ್ ಫಿಲಿಪ್ ಪಿಂಟೊ, ಮಾಲಾ ಕೆ. ನಾಯಕ್, ಗೀತಾ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿ. ವೆಂಕಟೇಶ ಶೆಣೈ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

Leave a Reply