ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಸಂಸ್ಥೆಯ ರಜತ ವರ್ಷದ ಅಧ್ಯಕ್ಷರಾಗಿ ಆನಂದ ಮದ್ದೋಡಿ, ಕಾರ್ಯದರ್ಶಿಯಾಗಿ ರಾಮಕೃಷ್ಣ ದೇವಾಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉಪಾಧ್ಯಕ್ಷರುಗಳಾಗಿ ಅಬ್ದುಲ್ ರವೂಫ್, ಲಕ್ಷ್ಮಣ ಕೊರಗ ಬೈಂದೂರು, ಭಾಸ್ಕರ ಭಾಡ, ಸುರೇಶ್ ಹುದಾರ್, ಖಜಾಂಚಿಯಾಗಿ ರಾಘವೇಂದ್ರ ಕೆ. ಪಡುವರಿ, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಹೆಚ್. ಜಿ. ಬೈಂದೂರು, ನಿಶ್ಚಿತಾ ಪಡುವರಿ, ಸುಬ್ರಹ್ಮಣ್ಯ ಗಾಣಿಗ, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟರಮಣ ಡಿ. ಮಯ್ಯಾಡಿ, ಶ್ರೀಧರ್ ಆಚಾರ್ಯ ಪಡುವರಿ, ಕಾವೇರಿ ಗಾಣಿಗ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತ್ಯನಾ ಕೊಡೇರಿ, ಉದಯ ಗಾಣಿಗ ಬೈಂದೂರು, ವಿನೋದಾ ಗಜೇಂದ್ರ ನಾಯ್ಕ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಹೊಳ್ಳ ಉಪ್ಪುಂದ, ನಿರ್ದೇಶಕರುಗಳಾಗಿ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್, ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ ಕಬ್ಸೆ ಮುಂದುವರಿಯಲಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನಾಗರಾಜ ಪಿ. ಯಡ್ತರೆ, ಗಣೇಶ್ ಪೂಜಾರಿ ಬೈಂದೂರು, ರಾಘವೇಂದ್ರ ಅರ್ಚಕ ಕಾಲ್ತೋಡು, ಗಣೇಶ್ ಟೈಲರ್, ನಾಗರಾಜ ಬಾಡ, ಚಂದ್ರಶೇಖರ ಶೆಟ್ಟಿ, ಶಾಂತಿ ಟೀಚರ್, ಮಂಜುನಾಥ ದೇವಾಡಿಗ ಬಿಜೂರು, ವಾಸುದೇವ ಪಡುವರಿ, ನಾಗೇಂದ್ರ ಮೊಗೇರಿ, ಸಂದೀಪ್ ದೇವಾಡಿಗ, ನಾಗರತ್ನ ರಾಘವೇಂದ್ರ, ಜ್ಯೋತಿ ಮಂಜುನಾಥ ಡಿ.ಕೆ ಆಯ್ಕೆಯಾಗಿದ್ದಾರೆ.