ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.29:
ಬೈಕ್‌ ಹಾಗೂ ಬುಲೆಟ್‌ ಮುಖಾಮುಖಿ ಢಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟ ಘಟನೆ ಹಂಗಳೂರಿನ ನಗು ಪ್ಯಾಲೇಸ್‌ ಎದುರುಗಡೆಯ ಸರ್ವೀಸ್‌ ರಸ್ತೆಯಲ್ಲಿ ಘಟನೆ ನಡೆದಿದೆ. ಕುಂದಾಪುರ ಬಾಳೆಹಿತ್ಲು ನಿವಾಸಿಯಾದ ವೆಂಕಟೇಶ್‌ ಎಂಬುವವರ ಪುತ್ರ ಶಶಾಂಕ್‌ ಮೊಗವೀರ (22) ಎಂದು ಗುರುತಿಸಲಾಗಿದೆ.

Call us

Click Here

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ ಮೊಗವೀರ ರಾತ್ರಿ 11.00 ರ ವೇಳೆಗೆ ರಿಲಯನ್ಸ್‌ ಪೆಟ್ರೋಲ್‌ ಬಂಕಿನಲ್ಲಿ ಪೆಟ್ರೋಲ್‌ ತುಂಬಿಸಿಕೊಂಡು ಮನೆಗೆ ಹಿಂತಿರುಗುವ ಸಮಯದಲ್ಲಿ ಅಪಘಾತವಾಗಿದ್ದು ತಕ್ಷಣ ಅವರನ್ನು ಮಣಿಪಾಲದ ಕೆಏಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಅವರು ಕೊನೆರುಸಿರೆಳೆದಿದ್ದಾರೆ.

ಬುಲೆಟ್‌ ಸವಾರ ಮತ್ತು ಹಿಂದೆ ಕುಳಿತಿದ್ದ ಮಹಿಳೆಯೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕುಂದಾಪುರ ನಗರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply