ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವರ ಸನ್ನಿದಿಯಲ್ಲಿ ನ.30ರ ಶನಿವಾರ ಕಾರ್ತಿಕ ಬಹುಳ ಅಮಾವಾಸ್ಯೆಯಂದು ಲಕ್ಷದೀಪೋತ್ಸವ ಹಾಗೂ ರಥೋತ್ಸವ ನಡೆಯಲಿದೆ.
ಬೆಳಿಗ್ಗೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆ – ಕಲಾಭಿವೃದ್ಧಿ ಹೋಮ – ಶತರುದ್ರಾಭಿಷೇಕ – ಕಲಶಾಭಿಷೇಕ ಮಹಾಪೂಜೆ- ಅನ್ನಸಂತರ್ಪಣೆ – ಪ್ರಸಾದ ವಿತರಣೆ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನಾ ಮಂಡಳಿಗಳ ಒಕ್ಕೂಟ ಅವರಿಂದ ಶ್ರೀ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ನಡೆಯಲಿದೆ.
ಸಂಜೆ ರಂಗಪೂಜೆ – ಮಹಾಮಂಗಳಾರತಿ ಪ್ರಸಾದ ವಿನಿಯೋಗ – ಲಕ್ಷ ದೀಪೋತ್ಸವ – ಪುಷ್ಪಕ ರಥದಲ್ಲಿ ಶ್ರೀ ದೇವರ ಪುರ ಮೆರವಣಿಗೆ – ಕಟ್ಟೆ ಪೂಜೆ – ಕೆರೆದೀಪ ಇತ್ಯಾದಿ ನಡೆಯಲಿದೆ. ಶ್ರೀ ದೇವರ ಪುಷ್ಪಕ ರಥೋತ್ಸವದುದ್ದಕ್ಕೂ ಜಾನಪದ ಮತ್ತು ಸಾಂಸ್ರೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಸಂಜೆ 7.00ರಿಂದ ನೃತ್ಯವಿದುಷಿ ಪ್ರವಿತಾ ಅಶೋಕ ಅವರ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.