ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಸರಕಾರ ಕೊಂಕಣ ರೈಲ್ವೆ ಯನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತ ರಿಸುವ ಮೂಲಕ ಪ್ರಗತಿಗೆ ಸಹಕರಿಸಬೇಕು ಎಂದು ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಕೊಂಕಣ ರೈಲ್ವೆ ನಿಗಮದ ಎರಡನೇ ದೊಡ್ಡ ಆಡಳಿತ ಪಾಲುದಾರನಾಗಿರುವ ಕರ್ನಾಟಕ ಸರಕಾರ ಕೊಂಕಣ ರೈಲ್ವೆ ಡಬ್ಲಿಂಗ್ ಮಾಡಲು ತನ್ನ ಪಾಲಿನ ಹಣಕಾಸು ನೆರವು ನೀಡಲು ಒಪ್ಪದ ಕಾರಣ ಡಬ್ಲಿಂಗ್ ಯೋಜನೆಯೇ ರದ್ದಾಗಿರುವ ಮಾಹಿತಿ ಈಗ ಹೊರಬಿದ್ದಿದೆ ಎಂದು ಸಮಿತಿ ಹೇಳಿದೆ.
ಸ್ಟೇಶನ್, ಟರ್ಮಿನಲ್ ಸೌಲಭ್ಯಗಳಿಗೆ ಅಗಾಧ ಹಣಕಾಸಿನ ನೆರವು ಬೇಕಾಗಿದ್ದು ಕೇವಲ ಭಾರತೀಯ ರೈಲ್ವೇ ಮಾತ್ರವೇ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತಿದ್ದು ಕರ್ನಾಟಕ ಸರಕಾರ ಶೇರು ಖರೀದಿ ಬಿಟ್ಟರೆ ಇನ್ನುಳಿದ ಯಾವುದೇ ಪ್ರಮುಖ ಮೂಲ ಸೌಲಭ್ಯಗಳಿಗೆ ಹಣಕಾಸು ನೆರವು ನೀಡುತ್ತಿಲ್ಲ ಎಂದು ಸಮಿತಿ ಆರೋಪಿಸಿದೆ.
ಕರ್ನಾಟಕ ರಾಜ್ಯ ನೀಡಬೇಕಾದ ಸುಮಾರು ಐದು ಸಾವಿರ ಕೋಟಿ ಹಣ ನೀಡಲು ಸಾಧ್ಯವಿಲ್ಲವಾದರೆ ಕೇಂದ್ರ ಸರಕಾರವೇ ಆ ಹಣಕಾಸು ಪೂರೈಕೆ ಮಾಡಿ ಡಬ್ಬಿಂಗ್ ಮಾಡಿ ಕೊಡಲಿದ್ದು, ಇದಕ್ಕೆ ಪೂರಕವಾಗಿ ಕೊಂಕಣ ರೈಲ್ವೆಯಲ್ಲಿರುವ ತನ್ನ ಪಾಲನ್ನಾದರೂ ಕೇಂದ್ರಕ್ಕೆ ಹಿಂದಿರುಗಿಸಿ ಎಂದು ಹಲವು ತಿಂಗಳ ಹಿಂದೆ ಕೇಂದ್ರ ಮನವಿ ಮಾಡಿದ್ದರೂ ಅದಕ್ಕೂ ರಾಜ್ಯ ಸರಕಾರ ಯಾವುದೇ ಉತ್ತರ ನೀಡಿಲ್ಲ. ತನ್ನ ಪಾಲಿನ 250 ಕೋಟಿ ಮೂಲ ಬಂಡವಾಳವನ್ನು ಕೇಂದ್ರಕ್ಕೆ ನೀಡಿ ಕೈತೊಳೆದು ಕೊಂಡರೆ ಸಂಪೂರ್ಣ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯ ಜತೆ ವಿಲೀನವಾಗಲಿದ್ದು ಕೇಂದ್ರ ಸರಕಾರ ತನ್ನ ರೈಲ್ವೆ ಬಜೆಟ್ ಪಾಲಿನ ಅನುದಾನದ ಮೂಲಕ ಸಂಪೂರ್ಣ ಮಾರ್ಗವನ್ನೇ ಡಬಲ್ ಮಾಡಿ ಆಧುನಿಕರಣ ಮಾಡಲಿದೆ ಎಂದು ಸಮಿತಿ ತಿಳಿಸಿದೆ.
ಕೊಂಕಣ ರೈಲ್ವೆ ಹಳಿ ಡಬ್ಬಿಂಗ್ ಮಾಡಲು 5000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡ ಬೇಕಾದ ಸ್ಥಿತಿಗೆ ತಲುಪಬಹುದು ಎಂಬುದಾಗಿ ಸಾರ್ವ ಜನಿಕ ಸಂಸ್ಥೆಗಳು ಎಚ್ಚರಿಸಿವೆ. ಈ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರ ಶೇರು ಹಸ್ತಾಂತರ ನಿರ್ಧಾರ ತೆಗೆದುಕೊಳ್ಳಬೇಕು ಅಥವಾ ಕೊಂಕಣ ರೈಲ್ವೆಯನ್ನು ಕೇಂದ್ರಕ್ಕೆ ಹಸ್ತಾಂತ ರಿಸಬೇಕು ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.