ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಜನರ ಸಮಸ್ಯೆ ಪರಿಹರಿಸಲು ವಿಫಲರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.
ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಅಕ್ರಮ-ಸಕ್ರಮ, ಅರ್ಜಿ ನಮೂನೆ 94ಸಿ ಹಾಗೂ 94ಸಿಸಿ ಯಡಿ ಭೂ ಮಂಜೂರಾತಿ, ಸರಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ಪಶ್ಚಿಮ ವಾಹಿನಿ ಯೋಜನೆಯಡಿ ನಡೆದ ಕಿಂಡಿ ಅಣೆಕಟ್ಟುಗಳ ಅಸಮರ್ಪಕ ನಿರ್ವ ಹಣೆ ಹಾಗೂ ಕೋಟ್ಯಂತರ ರೂ. ಅವ್ಯವಹಾರ, ಮರಳು, ಜಲ್ಲಿ, ಕಲ್ಲು ಇತ್ಯಾದಿ ಪೂರೈಕೆಯಲ್ಲಿ ಸಮಸ್ಯೆ, ಸ್ಥಳೀಯ ಸಂಸ್ಥೆಗಳಲ್ಲಿ ದೈನಂದಿನ ಜನಸಾಮಾನ್ಯರ ವ್ಯವಹಾರಗಳಲ್ಲಿ ಅನಗತ್ಯ ಕಿರುಕುಳ, ಪ್ರವಾಸೋದ್ಯಮದಲ್ಲಿ ಹಿನ್ನಡೆ, ಸಿಆರ್ ಝಡ್ ಸಮಸ್ಯೆ, ಡೀಮ್ಸ್ ಅರಣ್ಯ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯದ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರಕಾರ ಹಾಗೂ ಬಿಜೆಪಿ ಜನಪ್ರತಿನಿಧಿಗಳೇ ಕಾರಣ. ಉಡುಪಿ ಬಿಜೆಪಿ ಜನಪ್ರತಿನಿಧಿ ಗಳು ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿ ಕಾಂಗ್ರೆಸ್ ಸರಕಾರ ಹಾಗೂ ಉಸ್ತುವಾರಿ ಸಚಿವರನ್ನು ಟೀಕಿಸುವುದು ಅವರ ರಾಜ ಕೀಯ ದಿವಾಳಿತನವಾಗಿದೆ. ಈಗ ಜಿಲ್ಲೆಯ ಜನರಿಗೂ ಅರ್ಥವಾಗಿದೆ ಎಂದರು.