ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಮೂಲಕ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಹೆಚ್. ಎಸ್. ಶೆಟ್ಟಿ ಅವರು ಜನ್ನಾಡಿಯ ಕೊರಗ ಕುಟುಂಬಗಳಿಗೆ 14 ಮನೆ ನಿರ್ಮಿಸಿ ಇತ್ತೀಚೆಗೆ ಹಸ್ತಾಂತರಿಸಲಾದ ಮನೆಗಳ ಗೃಹ ಪ್ರವೇಶ ಸೋಮವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿಯವರ ಮುಂದಾಳತ್ವದಲ್ಲಿ ಶಾಸ್ತ್ರೋಕ್ತ ವಾಗಿ ನೆಡೆಯಿತು.

ಪುರೋಹಿತರಾದ ಉದಯ ಐತಾಳ ಸೌಡ ಹಾಗೂ ಶ್ರೀಧರ ಉಡುಪ ಮೊಳಹಳ್ಳಿಯವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪುರೋಹಿತರು ಗೃಹ ಪ್ರವೇಶದ ಪೂಜಾ ವಿಧಿ ವಿಧಾನ ನೆರವೇರಿಸಿದರು. ನಂತರ ಸಹಬೋಜನ ಕಾರ್ಯಕ್ರಮ ನಡೆಯಿತು.
ಸ್ಥಳೀಯರಾದ ಲವಕರ ಶೆಟ್ಟಿ ಮಾಲಾಡಿ, ರಂಜಿತ್ ಸೌಡ, ದೀಕ್ಷಿತ ಮಡಿವಾಳ, ವೆಂಕಟೇಶ ಪ್ರಭು, ಗಣೇಶ್ ಮಡಿವಾಳ, ಶರತ ಕಾನ್ಮಕ್ಕಿ ಮಂಜುನಾಥ ಜನ್ನಾಡಿ, ಶರತ ಮೊಗವೀರ, ಸುನಿಲ್ ಶೆಟ್ಟಿ ಹಾಗೂ ನೂತನ ಗೃಹದ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.










