ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟ ಗೊಬ್ಬರಬೆಟ್ಟು ಬೆಲ್ಲದ ಗಣಪತಿ ದೇಗುಲದ ಸಮೀಪ ನಡೆದಿದೆ. ಸಾಲಿಗ್ರಾಮ ಬಡಾಹೋಳಿ ನಿವಾಸಿ, ಮಣೂರು ಜನತಾ ಫಿಶ್‌ಮಿಲ್‌ನ ಉದ್ಯೋಗಿ ಸುರೇಶ್ ಮರಕಾಲ (48) ಸಾವನ್ನಪ್ಪಿದ್ದಾರೆ.
ಸುರೇಶ್ ಅವರು ಅಪರಾಹ್ನ ಕೆಲಸ ಮುಗಿಸಿ ಕೋಟದಿಂದ- ಸಾಲಿಗ್ರಾಮದ ಮನೆ ಕಡೆ ಸೈಕಲ್‌ನಲ್ಲಿ ತೆರಳು ತ್ತಿರುವಾಗ ಮುಡೇಶ್ವರದಿಂದ ಆಗಮಿಸುತ್ತಿದ್ದ ಕಾರು ವೇಗವಾಗಿ ಬಂದು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಅವರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.