ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ: ಜಗದೀಶ್‌ ಪೂಜಾರಿ ನೇತೃತ್ವದ ತಂಡಕ್ಕೆ 13 ಗೆಲುವು

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ,ಡಿ.29:
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜಗದೀಶ್‌ ಪೂಜಾರಿ ನೇತೃತ್ವದ 13 ಮಂದಿಯ ತಂಡ ಗೆಲುವು ಸಾಧಿಸಿದೆ.

Call us

Click Here

ಸಾಮಾನ್ಯ ಮೀಸಲು ಕ್ಷೇತ್ರದಿಂದ ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ಸತೀಶ್‌ ಕುಮಾರ್‌ ಶೆಟಿ, ಶ್ರೀನಿವಾಸ ಪೂಜಾರಿ, ಗಣೇಶ್‌ ಪೂಜಾರಿ, ಪ್ರಭಾಕರ ಎಂ. ಖಾರ್ವಿ, ಹರಿಶ್ಚಂದ್ರ ಆಚಾರ್ಯ ಆಯ್ಕೆಗೊಂಡರು. ಮಹಿಳಾ ಮೀಸಲು ಕ್ಷೇತ್ರದಿಂದ ಲಕ್ಷ್ಮೀ, ಶಕುಂತಲಾ ಆಯ್ಕೆಗೊಂಡರು. ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಗಣೇಶ್‌ ಪೂಜಾರಿ, ಪ್ರವರ್ಗ ಬಿ. ಮೀಸಲು ಕ್ಷೇತ್ರದಿಂದ ವೀರೇಂದ್ರ ಹೆಗ್ಡೆ ಆಯ್ಕೆಗೊಂಡರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಮ ಕಂತಿಹೊಂಡ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸುರೇಶ್‌ ನಾಯ್ಕ್‌ ಆಯ್ಕೆಗೊಂಡರು.

ಸಹಕಾರ ಅಭಿವೃದ್ಧಿ ಅಧಿಕಾರಿಯಾದ ಸುನೀಲ್ ಕುಮಾರ್ ಸಿ. ಎಮ್ ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್‌ ಅಳ್ವೆಗದ್ದೆ ಸಹಕರಿಸಿದರು. ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಸಂಘದಲ್ಲಿ ಒಂದಿಷ್ಟು ಸದಸ್ಯರಿಗೆ ಮತ ಚಲಾಯಿಸುವ ಅವಕಾಶ ಮಾಡಿಕೊಡಲಾಗಿತ್ತು. ಅಂತಿಮ ತೀರ್ಪು ಭಾರದ ಕಾರಣ ಸದಸ್ಯರ ಗೆಲುವನ್ನು ಅಂತಿಮವಾಗಿ ಘೋಷಿಸಿಲ್ಲ.

Leave a Reply