ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಿಲ್ಲಾಡಿ ಗ್ರಾಮದ ನಿವಾಸಿ ಶೇಖರ (54)ಅವರು ವಿಪರೀತ ಮಧ್ಯ ಸೇವನೆ ಚಟ ಹೊಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಶಾಸ್ತ್ರೀ ಸರ್ಕಲ್‍ನ ಬಸ್ ನಿಲ್ದಾಣ ಬಳಿ ಮಲಗಿದ್ದಲೇ ಸಾವನ್ನಪ್ಪಿಸ ಘಟನೆ ಜ.2 ರಂದು ನಡೆದಿದೆ.
ಹೋಟೇಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಶೇಖರ ಅವರು ಕಿಡ್ನಿ ಸಮಸ್ಯಗೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಮಧ್ಯ ಸೇವನೆಯ ಚಟ ಹೊಂದಿದ್ದ ಅವರು ಸರಿಯಾಗಿ ಆಹಾರ ಸೇವನೆ ಮಾಡದೆಯೂ ಇರುತ್ತಿದ್ದರು.
ಅದೇ ಕಾರಣಕ್ಕೆ ಸಾವನ್ನಪ್ಪಿರಬಹುದು ಎಂದು ಪುತ್ರ ರಿತೇಶ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.