ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೆಕ್ಕಟ್ಟೆ ಲಯನ್ಸ್ ಕ್ಲಬ್ ವತಿಯಿಂದ ಕನ್ಯಾಕುಮಾರಿಯ ಖಾಸಗಿ ಹೋಟೆಲ್‌ನಲ್ಲಿ ಅಂತರಾಜ್ಯ ಟ್ವಿನ್ನಿಂಗ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಗ್ಯಾಬ್ರಿಯಲ್ ಮಾತನಾಡಿ, ತೆಕ್ಕಟ್ಟೆ ಲಯನ್ಸ್ ಕ್ಲಬ್ ಸದಸ್ಯರು ಕನ್ಯಾಕುಮಾರಿಗೆ ಬಂದು ಲಯನ್ಸ್ ಕ್ಲಬ್ ಮೂಲಕ ನಾವೆಲ್ಲರೂ ಒಂದೇ ಕುಟುಂಬದವರಾಗಿದ್ದೇವೆ ಎನ್ನುವುದನ್ನು ತೋರಿಸಿಕೊಟ್ಟಿರುತ್ತಾರೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷವರ್ಧನ್ ಶೆಟ್ಟಿ ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಮನಾಥನ್, ವೇಲ್ ಮುತ್ತುರಾಮನ್, ಗ್ಯಾಬ್ರಿಯಲ್ ಕಮಲೇಶ್, ಪೊನ್ನಸಕ್ಕೆ, ಕಿಶೋರ್ ಶೆಟ್ಟಿ, ರಮೇಶ್ ಕೆ. ಶೆಟ್ಟಿ, ಉಪಸ್ಥಿತರಿದ್ದರು.
ಜ್ಯೋತಿ ಕೆ. ಶೆಟ್ಟಿ ಪ್ರಾರ್ಥಿಸಿ, ಶಂಕರ ಶೆಟ್ಟಿ ಬವಳಾಡಿ ಧ್ವಜವಂದನೆ ನೆರವೇರಿಸಿದರು. ಶೋಭಾ ಎಸ್. ಶೆಟ್ಟಿ ನೀತಿ ಸಂಹಿತೆಯನ್ನು ವಾಚಿಸಿದರು.
ಸ್ಥಾಪಕಾಧ್ಯಕ್ಷ ಸೀತಾರಾಮ್ ಶೆಟ್ಟಿ ಅವರು ಪ್ರಾಸ್ಥಾವಿಸಿ, ಲಯನ್ಸ್ ಧರ್ಮರಾಜ್ ಮುದಲಿಯಾರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ತಿರುನಲ್ವೇಲಿಯ ಮೂರು ಕ್ಲಬ್‌ಗಳಾದ ಲಯನ್ಸ್ ಕ್ಲಬ್ ಪಾಲಾಯಂ ಕೋಟೆ ಕಿಂಗ್ಸ್, ಲಯನ್ಸ್ ಕ್ಲಬ್ ತಿರುನೆಲ್ವೇಲಿ ಮೆಟ್ರೋ ಹಾಗೂ ಲಯನ್ಸ್ ಕ್ಲಬ್ ಪಾಲಾಯಂ ಕೋಟೈ ಸ್ಟಾರ್ ಕ್ಲಬ್‌ಗಳು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ತೆಕ್ಕಟ್ಟೆಯ ಎಲ್ಲಾ ಸದಸ್ಯರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಿಮಿಕ್ ತಾನೇಶ್ ಮಣಿ ಮ್ಯೂಸಿಕಲ್ ಎಂಟರ್‌ಟೈ್ರನೈಂಟ್ ತಂಡದಿಂದ ಸಂಗೀತ ರಸಮಂಜರಿ ಹಾಗೂ ತೆಕ್ಕಟ್ಟೆ ಲಯನ್ಸ್ ಕ್ಲಬ್ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ನಡೆಸಲಾಯಿತು.