ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಜಪ್ತಿ ಇಂಬಾಳಿಯ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ನೂತನ ಶಿಲಾಮಯ ಗುಡಿ ಲೋಕಾರ್ಪಣೆ, ಪುನಃ ಪ್ರತಿಷ್ಠಾ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಫೆ.28 ರಿಂದ ಮಾ.03 ರ ತನಕ ಸನ್ನಿಧಾನದಲ್ಲಿ ನಡೆಯಲಿದೆ.
ಫೆ.28 ಶುಕ್ರವಾರ ಬೆಳಿಗ್ಗೆ 8.00ರಿಂದ ಫಲನ್ಯಾಸ, ಪ್ರಾರ್ಥನೆ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗರಣ, ಮಧುಪರ್ಕಪೂಜೆ, ವೇದ ಪಾರಾಯಣ ಪ್ರಾರಂಭ, ಮಹಾಗಣಪತಿ ಹೋಮ, ನವಗ್ರಹ ಹೋಮ ಸಂಜೆ 5.00ರಿಂದ ಶಸ್ತ್ರ ಪೂಜೆ, ಗೇಹ ಪರಿಗ್ರಹ, ಸ್ಥಾನ ಶುದ್ದಿ, ಪ್ರಾಸಾದ ಶುದ್ದಿ, ವಾಸ್ತು ಪೂಜೆ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ಬಲಿದಾನ ನಡೆಯಲಿದೆ.
ಫೆ.01 ಶನಿವಾರ ಬೆಳಿಗ್ಗೆ 8.00 ರಿಂದ ಗುರುಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನ. ಮಂಟಪ ಸಂಸ್ಕಾರ, ಬಿಂಬಶುದ್ದಿ ಕಲಶಸ್ಥಾಪನೆ, ಬಿಂಬಶುದ್ಧಿ ಹೋಮ, ಅಗ್ನಿ ಜನನ, ಶಯ್ಯಾ ಕಲ್ಪನ, ಸಂಜೆ 5.00 ರಿಂದ ಬಿಂಬಧ್ಯಾನಾಧಿವಾಸ ಪೂಜೆ, ಅಧಿವಾಸಾಧಿ ಹೋಮಗಳು, ಚಕ್ರಾಬ್ಬ ಮಂಡಲ ಪೂಜೆ, ಗೋದೋಹನ, ಪಾಯಸ ಪೂಜೆ ನಡೆಯಲಿದೆ.
ಫೆ.02 ಭಾನುವಾರ ಬೆಳಿಗ್ಗೆ 8-00 ರಿಂದ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದೀ ಸಮಾರಾಧನೆ, ಕೃಚ್ಛಾ ಚರಣೆ, ದೈವಜ್ಞ ಪೂಜನ, ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹೋಮ, ನವಗೃಹ ಧಾನ್ಯಾದಿ ದಾನಗಳು, ಆಚಾರ್ಯ ಪೂಜೆ, ದಂಪತಿ ಪೂಜೆ, ದಿವಾ ಗಂಟೆ 11.40ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಸ್ಥಾಪನ ಪೂರ್ವಕ ಶ್ರೀ ಲಕ್ಷ್ಮೀ ಜನಾರ್ದನ ದೇವರ ಮೂರ್ತಿ ಪ್ರತಿಷ್ಠೆ, ಜೀವ ಕುಂಭ ಸೇಚನ, ತತ್ವ ಹೋಮ, ಕಲಶಾಭಿಷೇಕ ಪೂಜೆ, ಪ್ರಸಾದ
ವಿತರಣೆ. ಸಂಜೆ 5.00 ರಿಂದ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಅಷ್ಟೋ ತರ ಶತಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಸ್ವಪನಾಧಿವಾಸ ಹೋಮ, ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ.03 ಸೋಮವಾರ ಬೆಳಿಗ್ಗೆ 8-00 ರಿಂದ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಪವಮಾನ ಹೋಮ, ಪೂರ್ಣಾ ಹುತಿ ಹೋಮ, ಪಂಚಾಮೃತ ಪೂಜೆ, ಶಾಂತಿ ಪ್ರಾಯಶ್ಚಿತ್ತ ಕಲಶಾಭಿಷೇಕ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ, ಮಂಗಲೋಪನ್ಯಾಸ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12.30 ರಿಂದ ಮಹಾಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ರಿಂದ ರಂಗೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. ನಂತರ ಸಭಾ
ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ಗಂಟೆ 11 ರಿಂದ ಧೂಳಿ ಪಾದುಕಾ ಪೂಜಾ ಶ್ರೀಗಳವರಿಂದ ಅನುಗ್ರಹ ಭಾಷಣ, ಫಲ ಮಂತ್ರಾಕ್ಷತೆ, ಮಹಾ ಪ್ರಸಾದ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಾ.01 ರಂದು ಬೆಳಿಗ್ಗೆ 11 ಗಂಟೆಗೆ ಭರತನಾಟ್ಯ ಕಾರ್ಯಕ್ರಮ, ರಾತ್ರಿ 8.30 ಕೈ ಯಕ್ಷಗಾನ ಮಾರುತಿ ಪ್ರತಾಪ, ಮಾ.02 ರಂದು ಬೆಳಿಗ್ಗೆ 10.00 ಗಂಟೆಗೆ ಭಜನಾ ಕಾರ್ಯಕ್ರಮ, ರಾತ್ರಿ 8.30ಕ್ಕೆ ಭಕ್ತಿ ರಸಮಂಜರಿ ಕಾರ್ಯಕ್ರಮ, ಸ್ಥಳೀಯ ಮಕ್ಕಳಿಂದ ನಾಟ್ಯ ಕಾರ್ಯಕ್ರಮ, ಮಾ.03 ಬೆಳಿಗ್ಗೆ 9 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 2.00 ಗಂಟೆಗೆ ಇತಿಹಾಸ ದರ್ಶನ, ರಾತ್ರಿ 8.30 ಕ್ಕೆ ಮಂತ್ರದೇವತೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಕಟ ಣೆಯಲ್ಲಿ ತಿಳಿಸಿದೆ.