ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ಕೋಡಿಂಗ್ ಮತ್ತು ರೊಬೊಟಿಕ್ಸ್ ತತ್ವದ ಆಧಾರದಲ್ಲಿ ತಯಾರಿಸಿದ ಎಲೆಕ್ಟ್ರಾನಿಕ್ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು.
ಐದನೇ ತರಗತಿಯಿಂದ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಒಟ್ಟು 40 ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು. ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ವಿದ್ಯಾರ್ಥಿಗಳ ಸಂಶೋಧನಾ ಮನೋಭಾವವನ್ನು ಪ್ರಶಂಸಿಸಿದರು. ಶಿಕ್ಷಕ ಹಾಗೂ ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಬಹುದು ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲ ನಿತಿನ್ ಡಿ’ಆಲ್ಮೇಡಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೋಡಿಂಗ್ ಹಾಗೂ ರೊಬೊಟಿಕ್ಸ್ ತಂತ್ರಜ್ಞಾನದ ಕಲಿಕೆ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ವಿಜ್ಞಾನ ಮಾದರಿ ಪ್ರದರ್ಶನವನ್ನು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೆರೆದಿಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿ, ಶಾಲಾ ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಟಿಂಕರ್ ಸ್ಪೇಸ್ ಸಂಸ್ಥೆಯ ತರಭೇತುದಾರರಾದ ಪ್ರಣಮ್ ಆಚಾರ್ಯ, ಸಮರ್ಥ್, ಮತ್ತು ಗಿರೀಶ್ ಅವರ ಮಾರ್ಗದರ್ಶನದಲ್ಲಿ ವಿವಿಧ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾನವ ನಿರ್ಮಿತ ಉಪಕರಣವನ್ನು ಕೃತಕ ಉಪಗ್ರಹಗಳ ಮೂಲಕ ಅಂತರೀಕ್ಷದಲ್ಲಿ ಬಿಟ್ಟು ಭೂಮಿ ಮೇಲಿನ ಮನುಷ್ಯರಿಗೆ ಬೇಕಾಗುವ ಎಲ್ಲ ಸೇವೆಗಳನ್ನು ಇಸ್ರೋ ಸಂಸ್ಥೆ ನೀಡುತ್ತಿದೆ. ಇಂಟರ್ನೆಟ್ ಸೌಲಭ್ಯ, ಜಿ.ಪಿಎಸ್, ಲೋಕೇಶನ್ ಸರ್ಚ್, ಹವಾಮಾನ ವರದಿಯಂಥ ಮಾಹಿತಿಗಳನ್ನು ಆ ಉಪಗ್ರಹದಲ್ಲಿ ಅಳವಡಿಸಿದ ವಾಹಕಗಳಿಂದ ಪಡೆಯಲಾಗುತ್ತಿದೆ. ಕಮ್ಯೂನಿಕೇಶನ್ಸ್ ಕೇಂದ್ರಿತ ಜಿಯೋಸಿಂಕ್ರನೈಝ್ ಉಪಗ್ರಹವು ಭೂಮಿ ಮೇಲಿನ ಯಾವುದೋ ಒಂದು ಭಾಗದಲ್ಲಿ ಅಡೆತಡೆಗಳಿಲ್ಲದೇ 36,000 ಕಿ.ಮೀ. ದೂರದಿಂದ ದೂರದರ್ಶನ, ಜಾಲತಾಣಗಳ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದ ಜರುಗಿತು. ಉಪನ್ಯಾಸರ ಶ್ರೀನಾಥ್ ರಾವ್ ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಳಕೆಂಬ ಜ್ಞಾನದಿಂದ ಕತ್ತಲೆಂಬ ಅಜ್ಞಾನವನ್ನು ತೊಲಗಿಸಿ ಮುಂದುವರಿಯಬೇಕು. ಈ ವಿದ್ಯಾರ್ಥಿಯ ಜೀವನ ಒತ್ತಡದಿಂದ ಕೂಡಿಲ್ಲ. ಈ ಸಮಯವೇ ಜ್ಞಾನವನ್ನು ಪಡೆಯಲಿಕ್ಕೆ ಸೂಕ್ತವಾಗಿದೆ. ಗುರುಕುಲದಲ್ಲಿ 166 ವಿಜ್ಞಾನ ಮಾದರಿ ಅಚ್ಚುಕಟ್ಟಾಗಿದ್ದು, ಮಕ್ಕಳು ವಿವರಿಸಿದ ರೀತಿ ತುಂಬಾ ಚೆನ್ನಾಗಿತ್ತು. ನನಗೆ…
ಕುಂದಾಪುರ: ಕಲಿಕೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ವಿಜ್ಞಾನದೆಡೆಗೆ ಆಸಕ್ತಿ ತಳೆಯಬೇಕಾದ ಅಗತ್ಯತೆ ಇದೆ ಎಂದು ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ್ ಹೇಳಿದರು. ಅವರು ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್ಇ ಸ್ಕೂಲ್ನಲ್ಲಿ ನಡೆದ ವಿಶ್ವ ವಿಜ್ಞಾನ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದರು. ಸತ್ಯವನ್ನು ಹುಡುಕುವುದೇ ವಿಜ್ಞಾನ ಆದರೆ ಸತ್ಯ, ಸುಳ್ಳು, ನಂಬಿಕೆಯ ನಡುವೆ ವಿಜ್ಞಾನವು ಶೇ.೬೦ ರಷ್ಟು ಅಭಿವೃದ್ಧಿಗೊಂಡಿದ್ದು ಇಂದಿನ ಡಿಜಿಟಲ್ ಪ್ರಪಂಚದ ಮೊದಲೇ ನಮ್ಮ ಮೆದುಳಿನಲ್ಲಿ…