ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟೊಯೊಟ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಪ್ರಾಯೋಜಿತ 2025ರ ಸಾಲಿನ ರಾಜ್ಯ ಮಟ್ಟದ ಸುರಕ್ಷಾ ಮಾಸಾಚರಣೆ ಸ್ಪರ್ಧೆಯಲ್ಲಿ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ತಿಪಟೂರು ಪ್ರಥಮ ಸ್ಥಾನವನ್ನು ಹಾಗೂ ಬಿದ್ಕಲ್ಕಟ್ಟೆ ಐಟಿಐ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ.
ಬಿದ್ಕಲ್ಕಟ್ಟೆ ಕಾರ್ಯಕ್ರಮವನ್ನು ಕೋಟ ಆರಕ್ಷಕ ಠಾಣೆಯ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿತ್ತು. ತೃತೀಯ ಸ್ಥಾನವನ್ನು ಪೀಣ್ಯ ಐಟಿಐ ಪಡೆದಿದೆ. ರಾಜ್ಯದಾದ್ಯಂತ 60 ಐಟಿಐ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.