ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಕಾರ್ಯಕ್ರಮ ಗಂಗೊಳ್ಳಿಯ ಎಸ್.ವಿ. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ ಅವರನ್ನು ಸನ್ಮಾನಿಸಲಾಯಿತು.
ಡಿಸ್ಟ್ರಿಕ್ಟ್ ಲೀಡರ್ ಕೆ. ರಾಮನಾಥ್ ನಾಯಕ್, ಜೋನಲ್ ಲೀಡರ್ ಪ್ರದೀಪ್ ಡಿ. ಕೆ., ಉಮೇಶ್ ಮೇಸ್ತ, ನಿಕಟಪೂರ್ವ ಅಧ್ಯಕ್ಷೆ ಚಂದ್ರಕಲಾ ತಾಂಡೇಲ್, ಸದಸ್ಯರಾದ ಉದಯಶಂಕರ್ ರಾವ್, ವಾಸುದೇವ್ ಶೇರುಗಾರ್, ದಯಾನಂದ ಗಾಣಿಗ, ಗೋಪಾಲ್ ಬಿಲ್ಲವ, ಟಿ.ದಿನಕರ ಶೆಣೈ, ನಾರಾಯಣ ನಾಯ್ಕ್, ಗಿರೀಶ್ ಖಾರ್ವಿ, ಎಂ. ನಾಗೇಂದ್ರ ಪೈ, ಜಗದೀಶ್ ಪೂಜಾರಿ, ರತ್ನ ದೇವಾಡಿಗ, ಸುಮಾ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೃಷ್ಣ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಮನಾಥ ಚಿತ್ತಾಲ್ ವಂದಿಸಿದರು.















