ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿ.ಬಿ.ಎಸ್.ಇ ಬೋರ್ಡ್ ಹಾಗೂ ಪಿ.ಎಸ್.ಎಸ್.ಇ.ಎಂ.ಆರ್ ಶಾಲೆ ದಾವಣಗೆರೆ ಆಯೋಜಿಸಿರುವ ರಾಜ್ಯಮಟ್ಟದ ಸಿಬಿಎಸ್ಇ ಶಾಲಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಕ್ರೀಡಾಪಟು ಧನ್ವೀನ್ ರಾಮಕೃಷ್ಣ ಪೂಜಾರಿ ಅವರು ಹದಿನಾಲ್ಕು ವರ್ಷದ ಒಳಗಿನ ಬಾಲಕರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ವಿಜೇತ ಕ್ರೀಡಾಪಟುವಿಗೆ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೆಟಿಕ್ಸ್ ಅಕಾಡೆಮಿಯ ಮುಖ್ಯಸ್ಥ ಪ್ರಶಾಂತ್ ಶೆಟ್ಟಿಯವರು ಅಭಿನಂದನೆ ತಿಳಿಸಿದ್ದಾರೆ










