ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇವರ ನೇತೃತ್ವದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಇವರ ಸಹಯೋಗದೊಂದಿಗೆ ಶಿಕ್ಷಕ ದಿನಾಚರಣೆ ಪ್ರಯುಕ್ತ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಗಣೇಶ್ ಮೊಗವೀರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ರಿ., ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷರಾದ ಎಂ.ಎ೦ ಸುವರ್ಣ, ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಬಿಆರ್ ನಾಯ್ಕ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ ಗೌರವಾಧ್ಯಕ್ಷ ಲೋಹಿತಾಶ್ವ ಆರ್ ಕುಂದರ್, ಕಾರ್ಯದರ್ಶಿ ಜಗದೀಶ ನೆಂಪು, ಮಾಜಿ ಅಧ್ಯಕ್ಷ ರಾಘವೇಂದ್ರ ನೆಂಪು, ಸಾಂಸ್ಕೃತಿಕ ಕಾರ್ಯದರ್ಶಿ ಜಯಂತ್ ಕುಂದರ್, ಜನಾರ್ದನ ಮೊಗವೀರ ತೊಪ್ಪು, ಗಣೇಶ್ ಕಾಂಚನ್, ರಾಘವೇ೦ದ್ರ ಚಂದನ್ ಹಾಗೂ ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷರಾದ ಶ್ಯಾಮಲ ಜಿ. ಚಂದನ್, ಸುಮತಿ ಉದಯ್ ಹಟ್ಟಿಯಂಗಡಿ, ಸುಮತಿ ಬಿ. ಮೊಗವೀರ, ಬೇಬಿ ಜಿ ನಾಯ್ಕ ಉಪಸ್ಥಿತರಿದ್ದರು.
ಕಾಲೇಜಿನ ಭೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಘಟಕದ ಉಪಾಧ್ಯಕ್ಷರಾದ ಪ್ರವೀಣ್ ಮೊಗವೀರ್ ಗಂಗೊಳ್ಳಿ ನಿರೂಪಿಸಿದರು.










