ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ಸೈಂಟ್ ಜೋಸೆಫ್ ಸ್ಕೂಲ್ ಹೈದರಾಬಾದಿನ ಹಬ್ಸಿಗೋಡಾದಲ್ಲಿ ನಡೆದ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಕರ್ನಾಟಕ ತಂಡದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಈ ತಂಡದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯ 9ನೇಯ ತರಗತಿಯ ವಿದ್ಯಾರ್ಥಿ ಸಚೇತ್ ಎ ಪಿ ಪಾಲ್ಗೊಂಡಿದ್ದು ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ. ಅವನು ಬಾಗಲಕೋಟೆಯ ನಿವಾಸಿಗಳಾದ ಅದೀವೆಪ್ಪ ಎಸ್. ಪಡದಾಲಿ ಮತ್ತು ಕಮಲ ಕೆ ದಂಪತಿಗಳ ಸುಪುತ್ರನಾಗಿದ್ದಾನೆ.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಯನ್ನು ಹಾಗೂ ತರಬೇತಿ ನೀಡಿ ಪ್ರೋತ್ಸಾಹಿಸಿದ ದೈಹಿಕ ಶಿಕ್ಷಣ ಶಿಕ್ಷಕರನ್ನೂ, ಅಭಿನಂದನೆ ಸಲ್ಲಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯೇ ಶಾಲೆಯ ಸಾಧನೆ. ಶಾಲೆಯ ಪ್ರತಿಯೊಬ್ಬ ಸದಸ್ಯನೂ ಸದಾ ವಿದ್ಯಾರ್ಥಿಗಳ ಹಿತಚಿಂತನೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧಕರಾದ ಮಿತ್ರರಿಂದ ಸಾಧನೆಯ ಹೆಜ್ಜೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.










