Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗಾಣಿಗ ಪ್ರತಿಷ್ಠಾನ ಬೈಂದೂರು: ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ
    ಊರ್ಮನೆ ಸಮಾಚಾರ

    ಗಾಣಿಗ ಪ್ರತಿಷ್ಠಾನ ಬೈಂದೂರು: ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು
    : ಗಾಣಿಗ ಪ್ರತಿಷ್ಠಾನ ರಿ. ಬೈಂದೂರು ಇದರ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಾಗ್ರ ವಿತರಣೆ ಕಾರ್ಯಕ್ರಮ ಹಾಗೂ ಸಮಾಜದ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಇಲ್ಲಿನ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆಯಲ್ಲಿ ಜರುಗಿತು. 

    Click Here

    Call us

    Click Here

    ಕಾರ್ಯಕ್ರಮದ ಉದ್ಘಾಟನೆಯನ್ನು ಬೈಂದೂರು ಗಂಗನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮ ಪಟ್ಟು ಅಭ್ಯಾಸ ಮಾಡಬೇಕಾಗಿದೆ. ಉನ್ನತ ವ್ಯಾಸಂಗ ಮಾಡುವತ್ತ ಎಲ್ಲ ವಿದ್ಯಾರ್ಥಿಗಳು ಗಮನ ಹರಿಸಬೇಕು. ದುಶ್ಚಟಗಳಿಂದ ದೂರವಾಗಿ ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿಸಿಟ್ಟುಕೊಳ್ಳಬೇಕು ಎಂದರು.

    ಗಾಣಿಗ ಪ್ರತಿಷ್ಠಾನ ರಿ. ಬೈಂದೂರು ಇದರ ಅಧ್ಯಕ್ಷರಾದ ಕೆ. ರಮೇಶ್ ಗಾಣಿಗ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಷ್ಟ ಸ್ಥಾಪಿಸಿ ಕಾರ್ಯಕ್ರಮ ಮಾಡಲಾಗುತ್ತದೆ. ಸಮಜದಲ್ಲಿರುವ ಅಸಾಯಕರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದು, ಸಾಧಕರನ್ನು ಗುರುತಿಸುವ ಕೆಲಸ ಆಗ ಬೇಕಾಗಿದೆ ಆ ನಿಟ್ಟಿನಲ್ಲಿ ಮುಂದೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.  

    ಮುಖ್ಯ ಅತಿಥಿಗಳಾಗಿ ತಾಲೂಕು ಗಾಣಿಗ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಸತೀಶ್ ಗಾಣಿಗ, ಮುಂಬೈನ ಉದ್ಯಮಿಗಳಾದ ದಿನೇಶ್ ಗಾಣಿಗ, ಚರುಮಕ್ಕಿ, ಶಶೀಸ್ ಮೋಟಾರ್ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರರಾದ ಶಶಿಧರ ಗಾಣಿಗ, ಬೆಂಗಳೂರು ಉದ್ಯಮಿಗಳಾದ ಪಿ.ಎನ್. ಶ್ರೀಧರ ಉಪಸ್ಥಿತರಿದ್ದರು.

    ಕಲಿಕಾ ಸಾಮಾಗ್ರಿಯನ್ನು  ತ್ರಾಸಿಯ ಓಂಕಾರ್ ಡೆಂಟಲ್ ನ ದಂತ ವೈದ್ಯರಾದ ಡಾ. ಪ್ರಜ್ವಲ್ ಆರ್.ವಿ. ವಿತರಿಸಿದರು. ಬೆಂಗಳೂರು ಸಿಟಿ ಸಿಸ್ಟಮ್ ಅಡ್ಮಿನ್ ಪೋಲೀಸ್ ಹೆಡ್ ಕಾನ್ಸ್‌ಟೆಬಲ್ ಮಹಾಲಿಂಗ ಗಾಣಿಗ ಪ್ರತಿಭಾ ಪುರಸ್ಕಾರವನ್ನು ವಿತರಿಸಿದರು.

    Click here

    Click here

    Click here

    Call us

    Call us

    ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಪುರಸ್ಕೃತರಾದ ತಿಮ್ಮಪ್ಪ ಗಾಣಿಗ ತಗ್ಗರ್ಸೆ, ಐ.ಪಿ.ಎಸ್. ಡಾ| ಶ್ರೇಯಸ್ ರಾವ್, ಉಪ್ಪುಂದ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸುಮಂಗಲ ಗಾಣಿಗ, ಕೊಡಪಾಡಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಭಾಸ್ಕರ ಗಾಣಿಗೆ ಕೊಡಪಾಡಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಗೋವಿಂದ ಗಾಣಿಗ ಉಪ್ಪುಂದ, ತಗ್ಗರ್ಸೆ ಹೆಗ್ಗೇರಿ ಕುಲ ಕಸಬುದಾರರು ಹಾಗೂ ಕೃಷಿಕರಾದ ಗೋವಿಂದ ಗಾಣಿಗೆ ಹೆಗ್ಗೇರಿ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ನಿವೃತ್ತ ಶಾಖಾಧಿಕಾರಿ ತಗ್ಗರ್ಸೆ ಕಳವಾಡಿಮನೆ ಆನಂದ ಗಾಣಿಗ, ನಾಡ ಹಾಲು ಉತ್ಪಾದಕರ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಟರಮಣ ಗಾಣಿಗ ಕಡ್ಕೆ , ನಿವೃತ್ತ ಬಿ.ಎಸ್.ಎನ್.ಎಲ್. ಟೆಲಿಫೋನ್ ಟೆಕ್ನಿಷಿಯನ್ ಬಾಬು ಗಾಣಿಗೆ ಮುಳ್ಳಿಕಟ್ಟೆ, ಕುಂದಾಪುರ ಕಾವೇರಿ ಗ್ರಾಮೀಣ ಮಹಿಳಾ ಸಹಕಾರ ಸಂಘ ನಿ, ಇದರ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಕೆ., ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಆದ ರಾಜು ಗಾಣಿಗ ಬೈಂದೂರು, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಸೀತಾರಾಮ ಗಾಣಿಗ, ಬೈಂದೂರು ನೀರಾವರಿ ಇಲಾಖೆ ನಿವೃತ್ತ ನೌಕರರಾದ ಸುರೇಶ್ ಗಾಣಿಗ ಬೈಂದೂರು, ಕೋಟೇಶ್ವರ ಸುಜ್ನಾನ ಪಿ.ಯು. ಕಾಲೇಜಿನ ಚಿತ್ರಕಲಾ ಶಿಕ್ಷಕರಾದ ಗಿರೀಶ್ ಗಾಣಿಗ ತಗ್ಗರ್ಸೆ, ಉದ್ಯಮಿಗಳಾದ ಸೀತಾರಾಮ ಗಾಣಿಗ ತ್ರಾಸಿ, ಸಮಾಜ ಸೇವಕರಾದ ಬಿ ಬಾಬುರಾವ್ ಅರೆಕಲ್ಲು, ಬಿಜೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಗಾಣಿಗ ಪ್ರತಿಷ್ಠಾನ ರಿ. ಬೈಂದೂರಿನ ಖಜಾಂಚಿ ಆನಂದ ಗಾಣಿಗ, ಕಾವೇರಿ ಗ್ರಾಮೀಣ ಮಹಿಳಾ ಸೇವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಮನ ಕೆ. ಅತಿಥಿಗಳನ್ನು ಪರಿಚಯಿಸಿದರು. ಟ್ರಷ್ಟಿಗಳಾದ ಪುಟ್ಟಯ್ಯಾ ಗಾಣಿಗ, ನಾಗಪ್ಪ ಗಾಣಿಗ ಶಿರೂರು, ಪ್ರೇಮಾ ವಿ, ಬಾಬುರಾವ್, ರಾಜುಗಾಣಿಗ ಹುಳುವಾಡಿ, ಸೀತರಾಮ ಗಾಣಿಗ, ಗೋವಿಂದ ಗಾಣಿಗ, ಅರುಣ ಗಾಣಿಗ ಹಾಲಂಬೇರು, ಶ್ರೀಧರ ಗಾಣಿಗ ಉಪ್ಪುಂದ, ಸುಬ್ಬಣ್ಣ ಗಾಣಿಗ ಬಂಕೇಶ್ವರ, ಗಣೇಶ್ ಟೈಲರ್, ಸ್ವಾತಿ. ಯೋಗೀಶ್, ವಸಂತಿ, ನಾಗೇಶ್, ಬಾಬು ಗಾಣಿಗ, ಪ್ರಶಾಂತ್ ಗಾಣಿಗ ಮುಂತಾದವರು ಉಪಸ್ಥಿತರಿದ್ದರು. 

    ಗಾಣಿಗ ಪ್ರತಿಷ್ಠಾನ ರಿ. ಬೈಂದೂರಿನ ಇದರ ಸಂಚಾಲಕರಾದ ಶಿವಾನಂದ ಗಾಣಿಗ ಸ್ವಾಗತಿಸಿ, ಪ್ರೇಮಾ ವಿ., ನಾಗರತ್ನ, ಮೂಕಾಂಬು ಹುಳುವಾಡಿ ಕಾರ್ಯಕ್ರಮ ಸಂಯೋಜಿಸಿದರು. ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    Byndoor
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗುರುಪೂರ್ಣಿಮೆಯ ಸಂಭ್ರಮಾಚರಣೆ

    30/07/2026

    ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ಜ್ಞಾನದ ಬೆಳಕಿನಿಂದ ಮಾತ್ರ ಸಾಧ್ಯ: ಡಾ. ರಘು ನಾಯ್ಕ್

    30/07/2026

    ಕುಂದಾಪುರ: ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

    30/07/2026
    Leave A Reply Cancel Reply

    14 − two =

    Call us

    Click Here

    Call us

    Call us

    Call us
    Highest Viewed Recently
    • ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗುರುಪೂರ್ಣಿಮೆಯ ಸಂಭ್ರಮಾಚರಣೆ
    • ಡಾ. ಶಾಂತಾರಾಮ ಸಾಹಿತ್ಯ ಪ್ರಶಸ್ತಿಗೆ ಶ್ರೀಧರ ಬಳಗಾರರ ʼಮಾರ ಮಿಂದನುʼಕಥಾ ಸಂಕಲನ ಆಯ್ಕೆ
    • ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ಜ್ಞಾನದ ಬೆಳಕಿನಿಂದ ಮಾತ್ರ ಸಾಧ್ಯ: ಡಾ. ರಘು ನಾಯ್ಕ್
    • ಕುಂದಾಪುರ: ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ
    • ಯೋಗಾಸನ ಸ್ಪರ್ಧೆ: ವಿದ್ಯಾರಣ್ಯ ಶಾಲೆಯ ಲಾಸ್ಯ ಮಧ್ಯಸ್ಥ ಜಿಲ್ಲಾ ಮಟ್ಟಕ್ಕೆ ಆಯ್ಕೆ 

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.