ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಗ್ರಾಮಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ನೇತೃತ್ವದಲ್ಲಿ ಪಂಚವರ್ಣ ಸಂಘಟನೆ ಕೋಟ, ಗೀತಾನಂದಾ ಫೌಂಡೇಶನ್ ಮಣೂರು ಅನ್ನಪೂರ್ಣ ನರ್ಸರಿ ಇವರ ಮಾರ್ಗದರ್ಶನದಲ್ಲಿ ಕೋಡಿಕನ್ಯಾನದಲ್ಲಿ 3ನೇ ವರ್ಷದ ಪರಿಸರಸ್ನೇಹಿ ಹಸಿರು ಹೆಜ್ಜೆ ಅಭಿಯಾನ ಭಾನುವಾರ ಜರಗಿತು.
ಕೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರು ಪ್ರಭಾಕರ್ ಮೆಂಡನ್ ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ. ಉಪಸ್ಥಿತಿಯಲ್ಲಿ ಕೋಡಿಕನ್ಯಾನ ಶಂಕರ್ ಬಂಗೇರ ಮನೆಯಿಂದ ಚಾಲನೆ ನೀಡಲಾಯಿತು.
ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್., ಸಹಾಯಕಿ ಸಂಗೀತಾ ಕೋಡಿತಲೆ, ಸಹಾಯಕಿ ಅನಿತಾ, ಸಂಜೀವಿನಿ ಸಂಜೀವಿನಿ ಒಕ್ಕೂಟದ ಎಲ್‌ಸಿಆರ್‌ಪಿ ಸುಮಿತ್ರ, ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು.











