ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂತರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಘಟನೆ ರಿ. ಉಡುಪಿ, ಕುಂದಾಪುರ ಘಟಕದ ವತಿಯಿಂದ ಕುಂದಾಪುರದ ಹೆಸರಾಂತ ವೈದ್ಯರಾದ ಡಾ. ಉಮೇಶ್ ಪುತ್ರನ್(MBBS, MD, PGDHA) ಅವರನ್ನು ಹಾಗೂ ಕುಂದಾಪುರದ ಪ್ರಸಿದ್ಧ ವೈದ್ಯರಾಗಿರುವ ಡಾ. ನಾಗೇಶ್ (MBBS, MD, gen med ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಘಟಕದ ಅಧ್ಯಕ್ಷರಾಗಿರುವ ನಾಗೇಶ ಹಳ್ನಾಡು , ಕಾರ್ಯದರ್ಶಿ ಮಾಧವ,ಪೂರ್ವ ಅಧ್ಯಕ್ಷರಾಗಿರುವ ಪ್ರಕಾಶ ಆನಗಳ್ಳಿ, ಸುರೇಶ್ ವಿಠಲವಾಡಿ, ಉಡುಪಿ ಜಿಲ್ಲಾ ಅಧ್ಯಕ್ಷರಾಗಿರುವ ರವೀಶ್ ಕೊರವಾಡಿ, ಕಾರ್ಯದರ್ಶಿ ಶೇಖರ್ ತೋಳಾರ್, ಪೂರ್ವ ಜಿಲ್ಲಾಧ್ಯಕ್ಷರಾಗಿರುವ ರಾಜೇಂದ್ರ ಹಿರಿಯಡ್ಕ, ಮತ್ತು ಕುಂದಾಪುರ ಘಟಕದ ಪದಾಧಿಕಾರಿಗಳಾಗಿರುವ ಮಧುಕರ್ ಟಿ.ಕೆ., ದಿನೇಶ್ ಪುತ್ರನ್ ವಿಠಲವಾಡಿ, ವಿಜಯಕುಮಾರ್, ಸಂತೋಷ್ ಮದ್ದುಗುಡ್ಡೆ, ಶಾಂತ ಪುತ್ರನ್, ಕಿರಣ್ ಹಲ್ನಾಡ್, ಪ್ರವೀಣ್ ಬಂಗೇರ ಉಪಸ್ಥಿತರಿದ್ದರು.











