ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶೈಕ್ಷಣಿಕ ಸಂಸ್ಥೆಗಳ ಅದರಲ್ಲೂ ಸರಕಾರಿ ಶಾಲೆಗಳ ಉನ್ನತಿಗೆ ದಾನಿಗಳ ಸಹಕಾರ ಮಹತ್ತರ ಪಾತ್ರ ವಹಿಸುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಗುರುವಾರ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ದಾನಿಗಳ ನೆರವಿನಿಂದ ನೀಡಲಾದ ಅಕ್ಷರ ರಥ ವಾಹನವನ್ನು ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿ, ತಾವು ಕಲಿತ ಸರಕಾರಿ ಶಾಲೆಗಳ ಬಗ್ಗೆ ಶಾಲಾ ಹಳೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಅದರ ಉಳಿವಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ವಾಹನಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೆರಿಸಲಾಯಿತು. ಶಾಲಾ ವಾಹನದ ಕೀ ಅನ್ನು ಶಾಲಾ ಆಡಳಿತ ಮಂಡಳಿಗೆ ದಾನಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಸಭೆಯಲ್ಲಿ ದಾನಿಗಳಾದ ಮೇಬಿಲ್ ಥಾಮಸ್ ಡಿಸಿಲ್ವ,ಐರಿನ್ ಲೂಹಿಸ್, ಬಾಬು ಕುಂದರ್,ರಾಮದೇವ್ ಹಂದೆ,ಸವಿತಾ ಸೂಡಾ,ಅನ್ಯೋನ್ಯತಾ ವಾಹನ ಸಂಘ ಸಾಸ್ತಾನ ಇದರ ಉಪಾಧ್ಯಕ್ಷ ಉದಯ್ ಬಿ,ಪವಿತ್ರಾ ಇವರುಗಳ ಸಹಕಾರವನ್ನು ಸ್ಮರಿಸಿ ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿ ಸಮವಸ್ತ್ರ ಕೊಡುಗೆಯಾಗಿ ನೀಡಿದ ಉಡುಪಿ ಪೋಲಿಸ್ ಇಲಾಖೆಯ ಜಯಕರ್ ಐರೋಡಿ, ವಿದ್ಯಾರ್ಥಿಗಳಿಗೆ ಬೇಲ್ಟ್,ಐಡಿಕಾಡ್೯,ಬ್ಯಾಗ್ ಅನ್ನು ನೀಡಿದ ಬಾಂಧವ್ಯ ಕರ್ನಾಟಕ ಇದರ ದಿನೇಶ್ ಬಾಂಧವ್ಯ ಇವರುಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷೆ ರೇಖಾ ಉಡುಪ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ,ಶಿಕ್ಷಣ ಸಂಯೋಜಕಿ ಅನ್ನಪೂರ್ಣೇಶ್ವರಿ ,ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಹಂಗಾರಕಟ್ಟೆ ಕ್ಲಸ್ಟರ್ ಮಾಲಿನಿ,ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್,ಐರೋಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಶೆಟ್ಟಿ,ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಆನಂದ್ ಗಾಣಿಗ,ಶಾಲಾ ಎಸ್ ಡಿ ಎಂಸಿ ಉಪಾಧ್ಯಕ್ಷ ಶೇಖರ್ ಪೂಜಾರಿ,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರಣೀತಾ ಶೆಟ್ಟಿ, ಉಪಸ್ಥಿತರಿದ್ದರು.
ಶಾಲಾಮುಖ್ಯ ಶಿಕ್ಷಕಿ ಪ್ರಸ್ಲಿಲ್ಲಾ ಸ್ವಾಗತಿಸಿ,ಶಿಕ್ಷಕಿ ವೀಣಾ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ,ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಉಷಾರಾಣಿ ನಿರೂಪಿಸಿ,ವಿದ್ಯಾಶ್ರೀ ಎಂ.ಬಿ ವಂದಿಸಿದರು.

















