ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಮಲಶಿಲೆಯ ಗಣೇಶ್ ಐತಾಳ ಎಂಬುವವರ ಮನೆಯ ಸಮೀಪ ದೊಡ್ಡದಾದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು.
ಉರಗಪ್ರೇಮಿ ಅಂಪಾರು ಶಂಕರ ಅವರು ಕಮಲಶಿಲೆಗೆ ತೆರಳಿ ಸುಮಾರು 10ಕೆಜಿಗೂ ಹೆಚ್ಚಿನ ತೂಕದ 8 ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಅವರಿಗೆ ಕಮಲಶಿಲೆ ದೇಗುಲದ ಗುಹಾಲಯ ಅರ್ಚಕ ರಾಘವೇಂದ್ರ ಜೋಗಿ ಅವರು ಸಹಕರಿಸಿದರು. ಬಳಿಕ ಅದನ್ನು ಕಾಡಿಗೆ ಬಿಡಲಾಗಿದೆ.











