ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿಯು ನೀಡುವ ‘ಡಾ. ಶ್ಯಾಮ್ ಪ್ರಸಾದ್ ವಾರ್ಷಿಕ ಶ್ರೇಷ್ಠ ವೈದೈತರ ಸಾಹಿತ್ಯ ಕೃತಿ ಪ್ರಶಸ್ತಿ 2025-26’ ಕ್ಕೆ ಕುಂದಾಪುರದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ “ನೆನಪಿನಾಳದಿಂದ”_ ಕೃತಿ ಆಯ್ಕೆಯಾಗಿದೆ.
ಕಳೆದ 6 ವರ್ಷಗಳಿಂದ ಮಂಗಳೂರು, ಬೆಂಗಳೂರು, ಧಾರವಾಡ, ಶಿವಮೊಗ್ಗ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ಯಶಸ್ವಿಯಾಗಿ ನಡೆದಿರುವ ಕನ್ನಡ ವೈದ್ಯ ಬರಹಗಾರರ ಸಮ್ಮೇಳನದ 7ನೇ ಆವೃತ್ತಿಯು ಆಗಸ್ಟ್ 22 ಮತ್ತು 23, 2026 ರಂದು ದೊಡ್ಡಬಳ್ಳಾಪುರದ ನವೋದಯ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.
ಸಮ್ಮೇಳನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಿದ್ಧ ಹೃದ್ರೋಗ ತಜ್ಞರು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್ ಹನಗವಾಡಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.











