ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೆಹಲಿಯ ಜಂತರ್ ಮಂತರ್ ನಲ್ಲಿ ನೀಟ್ ಪೇಪರ್ ಲೀಕ್ ಔಟ್ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆರೋಪಿಸಿದ್ದಾರೆ.
ನೀಟ್ ಅಕ್ರಮದಲ್ಲಿ ತೊಡಗಿದ ಆರೋಪಿಗಳನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಹಾಗೂ ಉನ್ನತ ಮಟ್ಟದ ತನಿಕೆ ಕೂಡ ನಡೆಯುತ್ತಿದೆ ಈತನ್ಮಧ್ಯೆ ಸಿಜೆಪಿ ಪಾರ್ಟಿ ನೀಟ್ ವಿದ್ಯಾರ್ಥಿಗಳ ಹೆಸರಿನಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದು, ಪ್ರತಿಭಟನೆಯ ಹೆಸರಿನಲ್ಲಿ ದೇಶದ್ರೋಹಿ ಚಟುವಟಿಕೆಗಳು, ದೇಶ ವಿರೋಧಿ ಹೇಳಿಕೆಗಳು, ನಿಷೇಧಿತ ಸಂಘಟನೆಗಳ ಭಾಗವಹಿಸುವಿಕೆ,ಮಾರಕಾಸ್ತ್ರ ಗಳನ್ನು ಹಿಡಿದು ಹಿಂಸಾಚಾರದಲ್ಲಿ ತೊಡಗಿರುವುದು ದೇಶದಲ್ಲಿ ಅಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುತಿದ್ದು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿದೆ ಎಂದರು.
ಈ ಎಲ್ಲಾ ಚಟುವಟಿಕೆಗಳ ಮೂಲ ಸೂತ್ರದಾರ ಕಾಂಗ್ರೆಸ್ ಪಕ್ಷ ಎಂಬುದು ಜಗಜ್ಜಾಹೀರಾಗಿದೆ ಇನ್ನಾದರೂ ಕಾಂಗ್ರೆಸ್ ಇಂತಹ ವ್ಯರ್ಥ ಪ್ರಯತ್ನ ನಿಲ್ಲಿಸಲಿ ಎಂದು ಆರೋಪಿಸಿದರು.











