ಕುಂದಾಪುರ ತಾಲೂಕಿನಲ್ಲಿ 5 ತಿಂಗಳಿನಲ್ಲಿ 6ಕ್ಕೂ ಹೆಚ್ಚು ದೇವಾಲಗಳ ಕಳ್ಳತನ. ಈವರೆಗೂ ಕಳ್ಳರ ಸುಳಿವಿಲ್ಲ

Call us

Call us

Call us

ಕುಂದಾಪುರ: ಕಳೆದ ಜೂನ್ ತಿಂಗಳಿನಿಂದಿಚೆಗೆ ಕುಂದಾಪುರ ತಾಲೂಕಿನಲ್ಲಿ ಆರಕ್ಕೂ ಹೆಚ್ಚು ದೇವಾಲಯಗಳ ಕಳ್ಳತನ ಪ್ರಕರಣ ವರದಿಯಾಗಿದೆ. ಆದರೆ ಈವರೆಗೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಕಳ್ಳತನ ಶುರುವಿಟ್ಟುಕೊಂಡಿದ್ದ ಚೋರರು ಪ್ರಮುಖ ದೇವಾಲಯಗಳನ್ನೇ ಟಾರ್ಗೇಟ್ ಮಾಡಿ ದೇವರ ಆಭರಣ, ಹುಂಡಿಯಲ್ಲಿದ್ದ ದುಡ್ಡು ಹಾಗೂ ಇತರೆ ಸೊತ್ತುಗಳನ್ನು ಎಗರಾಯಿಸಿದ್ದರು. ಹೀಗೆ ಒಂದರ ಹಿಂದೊಂದು ಸರಣಿ ಕಳ್ಳತನ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ಪೊಲೀಸ್ ಇಲಾಖೆ ಶೀಘ್ರವೇ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Call us

Click Here

ತಾಲೂಕಿನ ಎಲ್ಲೆಲ್ಲಿ ಕಳ್ಳತನ?

ಕುಂದಾಪುರ ತಾಲೂಕಿನ ಕಾಲ್ತೋಡು ಮಹಾಲಸಾ ಮಾರಿಕಾಂಬ ದೇವಸ್ಥಾನ, ಕಿರಿಮಂಜೇಶ್ವರದ ಅಗಸ್ತೇಶ್ವರ ದೇವಸ್ಥಾನ, ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಸಮೀಪದ ದೈವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ, ತಲ್ಲೂರು ರಕ್ತೇಶ್ವರ ದೇವಸ್ಥಾನ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಕಳವು ನಡೆದಿತ್ತು. ಲೆಕ್ಕಕ್ಕೆ ಸಿಕ್ಕವು ಇವಿಷ್ಟು ಮಾತ್ರ. ಇನ್ನು ಸಣ್ಣ ದೇವಸ್ಥಾನಗಳಲ್ಲಾದ ಸಣ್ಣ-ಪುಟ್ಟ ಕಳವಿನ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ. ಕಳೆದ ವರ್ಷ ತಾಲೂಕಿನ ಕಟ್ಕೆರೆ ಸಮೀಪದ ಕಾಳಿಕಾಂಬ ದೇವಸ್ಥಾನದಲ್ಲಿ ನಡೆದ ದೊಡ್ಡ ಕಳ್ಳತನದ ಸುಳಿವೂ ಕೂಡ ಈವರೆಗೆ ಪತ್ತೆಯಾಗಿಲ್ಲ. (ಕುಂದಾಪ್ರ ಡಾಟ್ ಕಾಂ ವರದಿ)

ಇಲಾಖೆ ಏನು ಮಾಡುತ್ತಿದೆ?

ಮಳೆಗಾಲ ಪ್ರಾರಂಭವಾದ ಕೂಡಲೇ ದೇವಸ್ಥಾನಗಳ ಕಳ್ಳತನ ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ತಾಲೂಕಿನಲ್ಲಾದ ದೇವಾಲಯಗಳ ಕಳ್ಳತನದ ಯಾವೊಬ್ಬ ಆರೋಪಿಯನ್ನು ಬಂಧಿಸಲು ನಮ್ಮ ಪೋಲೀಸರು ಯಶಸ್ವಿಯಾಗಿಲ್ಲ ಎನ್ನುವುದು ಬೇಸರದ ಸಂಗತಿ. ಹಾಗಾಗಿ ದಿನೇದಿನೇ ದೇವಸ್ಥಾನಗಳೇ ಕಳ್ಳರ ಟಾರ್ಗೆಟ್ ಆಗುತ್ತಿವೆ. ದೇವಸ್ಥಾನಗಳಲ್ಲಿ ರಾತ್ರಿಯ ಹೊತ್ತು ಕಾವಲು ವ್ಯವಸ್ಥೆ ಇಲ್ಲದಿರುವುದು. ಬಹುತೇಕ ಹೆಚ್ಚಿನ ದೇಗುಲಗಳಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿಲ್ಲದಿರುವುದು. ಜನ ಸಂಚಾರ ಕಡಿಮೆ ಇರುವುದು, ಮಳೆಗಾಲದಲ್ಲಿ ದಿನಗೂಲಿ ಕೆಲಸದ ತೊಂದರೆಯಾಗುವುದು ಕಳ್ಳತನಕ್ಕೆ ವರವಾಗಿ ಪರಿಣಮಿಸಿದೆ. ದೇವಸ್ಥಾನಗಳಲ್ಲಿ ಚಿನ್ನ-ಬೆಳ್ಳಿ, ನಗದುಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳ ಬೇಕಾದುದು ಸಂಬಂಧಪಟ್ಟವರ ಜವಾಬ್ದಾರಿ. ಸೂಕ್ತ ಭದ್ರತೆ ಹಾಗೂ ಸಿಸಿ ಕ್ಯಾಮರಾವನ್ನು ಅಳವಡಿಸಿಕೊಳ್ಳಿ ಎಂದು ಪೊಲೀಸರು ಸೂಚನೆ ನೀಡುತ್ತಾರೆ. ಅದು ಸರಿ. ಆದರೆ ಕಳ್ಳರನ್ನು ಹಿಡಿಯುವವರ್ಯಾರು ಎಂಬುದಕ್ಕೆ ಉತ್ತರವಿಲ್ಲ. ಸಾರ್ವಜನಿಕ ದುಡ್ಡು ಹೀಗೆ ಕಳ್ಳರ ಪಾಲಾರದರೇ ಗತಿಏನು ಎಂಬ ಚಿಂತೆ ಎದುರಾಗಿದೆ.  (ಕುಂದಾಪ್ರ ಡಾಟ್ ಕಾಂ ವರದಿ)

Click here

Click here

Click here

Click Here

Call us

Call us

ಈ ನಡುವೆ ಸಮಾಧಾನಕರ ಸಂಗತಿಯೆಂದರೇ ಜಿಲ್ಲಾ ಪೊಲೀಸ್ ತಂಡ ಮೂವರು ಅಂತರ್ಜಿಲ್ಲಾ ಕಳ್ಳರನ್ನು ಬಂಧಿಸಿ 28,01,370 ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಕಾರ್ಕಳ, ಹಿರಿಯಡಕ, ಶಿರ್ವ, ತಮಕೂರಿನ ಹಲವು ದೇವಾಲಯ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಗಳಾದ ನರಸಿಂಹ ರಾಜು(37), ಮೊಹಮ್ಮದ್ ಶಬ್ಬೀರ್(20) ಹಾಗೂ ಪೈರೋಜ್ ಪಾಷಾ(22) ಬಂಧಿತರು. ಆದರೆ ಕುಂದಾಪುರ ತಾಲೂಕಿನ ದೇವಸ್ಥಾದ ಸೊತ್ತು ದೋಚಿದವರ ಬಂಧನವೂ ಶೀಘ್ರವೇ ಆಗಬೇಕೆಂಬುದು ಜನತೆಯ ಅಹವಾಲು.

Leave a Reply