Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಮೃದ್ಧ ಬೈಂದೂರು 300 ಟ್ರೀಸ್ ಯೋಜನೆಯಲ್ಲಿ ಸ್ವಯಂ ಸ್ಪೂರ್ತಿ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಬೈಂದೂರು ಕ್ಷೇತ್ರದ ವಿವಿಧ ಸರಕಾರಿ ಶಾಲೆಗಳಲ್ಲಿ ಕೌಶಲ್ಯ ಕೇಂದ್ರವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಗಿಹಕ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿ ಇಲ್ಲಿ ಕಂಪ್ಯೂಟರ್ ಲ್ಯಾಬ್, ಮಿನಿ ಲೈಬ್ರರಿ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒಳಗೊಂಡ ಕೌಶಲ್ಯ ಕೇಂದ್ರವನ್ನು ವಿವಿಧ ಕಂಪನಿಗಳ ಸಿಎಸ್ಆರ್ ಸಹಕಾರದಿಂದ ಸ್ವಯಂ ಸ್ಫೂರ್ತಿ ಫೌಂಡೇಶನ್ ಸಂಸ್ಥೆಯು ನಿರ್ಮಿಸಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಸರಕಾರಿ ಶಾಲೆಯ ಉಳಿವಿಗಾಗಿ ಆರಂಭಿಸಿದ 300 ಟ್ರೀಸ್ ಯೋಜನೆಯಿಂದ ಇಂದು ಸುಮಾರು 150ಕ್ಕೂ ಹೆಚ್ಚು ಶಾಲೆಗಳು ಯಾವುದಾದರೂ ಒಂದು ಸೌಲಭ್ಯವನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ. ಈ ಯೋಜನೆಗೆ ಶ್ರಮಿಸುತ್ತಿರುವ ಎಲ್ಲಾ ವಿದ್ಯಾಭಿಮಾನಿಗಳಿಗೂ ಧನ್ಯವಾದವನ್ನು ಸಮರ್ಪಿಸಿದರು. ಕಾಂತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಸರಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಎರಡನೇ ಮಾರಣಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ಕಾರಣಿಕ ಸ್ಥಳ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಗಳ ದೈವಸ್ಥಾನ. ಈ ಸನ್ನಿಧಿಯಲ್ಲಿ ಜಾತಿ, ಮತ ಭೇದವಿಲ್ಲದೇ ಭಕ್ತರೇ ಸ್ವತಃ ತಾವೇ ಮುಟ್ಟಿ ಪೂಜೆಯನ್ನು ಮಾಡುವ ಪದ್ಧತಿ ಇರುವುದು ಇನ್ನೊಂದು ವಿಶೇಷವಾಗಿದೆ. ನಿತ್ಯ ಜೀವನದ ಕಷ್ಟಗಳಿಗೆ ಮುಕ್ತಿ ದೊರಕಿಸಿ, ಬಾಳ ದಾರಿಗೆ ಶಕ್ತಿ ನೀಡಿ ಬೆಳಕು ತೋರುತ್ತಿರುವ ವಿಶೇಷ ಸ್ಥಳವಾಗಿ ಗುರುತಿಸಿಕೊಂಡಿದೆ. ಇಲ್ಲಿ ಎ.12ರಿಂದ18ರ ವರೆಗೆ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಮತ್ತು ನಾಗ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಸುವರ್ಣಮಹೋತ್ಸವ ಹಾಗೂ ಶ್ರೀ ರಾಮ ನಾಮ ಕೋಟಿ ಜಪ ಯಜ್ಞ ಹಾಗೂ ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿದೆ. ಎ.12ರಂದು ಸಂಜೆ ಗಂಟೆ 6ರಿಂದ ರಾಕ್ಷೋಘ್ನ ಹೋಮ, 1008 ಅಷ್ಟೋತ್ತರ ಸಹಸ್ರ ಬ್ರಹ್ಮಕಲಶ, ಕಲಶ ಸ್ಥಾಪನಾ ಪೂಜೆ ನಡೆಯಲಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಸಾರಥ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿ ವಾರದ ಪರಿಸರಸ್ನೇಹಿ ಆಂದೋಲನಕ್ಕೆ 300ನೇ ವಾರದ ಸಂಭ್ರಮ. ಈ ಹಿನ್ನಲ್ಲೆಯಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ ಹಾಗೂ ವಿವಿಧ ಸಂಘಸಂಸ್ಥೆ,ಸ್ಥಳೀಯ ಶಿಕ್ಷಣ ಸಂಸ್ಥೆಗಳ ನೆರವಿನೊಂದಿಗೆ ಸಮಾಜಸೇವಕ ಆನಂದ್ ಸಿ. ಕುಂದರ್ ರವರ 78ನೇ ಹುಟ್ಟುಹಬ್ಬದ ಅಂಗವಾಗಿ ಮೇ.3ರಂದು ಕೋಡಿ ಗ್ರಾಮಪಂಚಾಯತ್ ನಿಂದ ಕೋಟ ಗ್ರಾಮಪಂಚಾಯತ್ ವರೆಗಿನ ಸುಮಾರು 5ವರೆ ಕೀ.ಮೀ ಬೀಚ್ ಕ್ಲಿನಿಂಗ್ ಬೃಹತ್ ದಾಖಲೆಯ ಅಭಿಯಾನಕ್ಕೆ ಮುನ್ನುಡಿ ಬರೆಯಲಿದೆ. ಇದರ ಅಂಗವಾಗಿ ಸೋಮವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಆನಂದ್ ಸಿ ಕುಂದರ್ ಅಧ್ಯಕ್ಷತೆಯಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸುವ ಪೂರ್ವಭಾವಿ ಸಭೆ ಏರ್ಪಡಿಸಲಾಯಿತು. ಸಭೆಯಲ್ಲಿ ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ಬೀಚ್ ಕ್ಲಿನಿಂಗ್ ಅಭಿಯಾನದ ತಯಾರಿಗಳ ಕುರಿತು ಸಭೆಗೆ ಮಾಹಿತಿ ತಿಳಿಸಿದರು. ಇದೇ ವೇಳೆ ವಿವಿಧ ಗಣ್ಯರು ಹಾಗೂ ಸಂಘಸಂಸ್ಥೆಗಳ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಗೀತಾನಂದ ಫೌಂಡೇಶನ್ ಪ್ರವರ್ತಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಾತಿ, ಭೌಗೋಳಿಕ, ವರ್ಣ, ಭಾಷೆ, ಲಿಂಗ ಮುಂತಾದ ಅಸಮಾನತೆಗಳು ಭಾರತದ ಸೌಹಾರ್ದತೆಯನ್ನು ಛಿದ್ರಗೊಳಿಸಿವೆ. ಇಂತಹ ಹಲವು ಅಸಮಾನತೆಗಳನ್ನು ಸೃಷ್ಠಿ ಮಾಡಿಕೊಂಡಿರುವ ನಮ್ಮ ಸಮಾಜದಲ್ಲಿ ಸೌಹಾರ್ದತೆಯ ಸ್ಥಾಪನೆ ಎನ್ನುವುದು ಒಂದು ಸವಾಲೇ ಸರಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಮಂಗಳವಾರ ತಾಲೂಕು ಸದ್ಭಾವನಾ ವೇದಿಕೆ ಹಾಗೂ ಕನ್ಯಾನದ ನಮ್ಮ ಭೂಮಿ ಸಂಸ್ಥೆಯ ಆಶ್ರಯದಲ್ಲಿ ಹಟ್ಟಿಯಂಗಡಿ ಸಮೀಪದ ಕನ್ಯಾನದ ನಮ್ಮ ಭೂಮಿ ಸಂಸ್ಥೆಯಲ್ಲಿ ʼಸಂವಿಧಾನದ ಆಶಯಗಳಿಗೆ ಸೌಹಾರ್ದವೇ ಮೆಟ್ಟಿಲುʼ ಎಂಬ ವಿಚಾರ ಸಂಕಿರಣ – ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಕಟ್ಟಿದ ಇದರ ಗೋಡೆಯನ್ನು ಒಮ್ಮೆಲೆ ಹೊಡೆದು ಹಾಕುವುದು ಅಷ್ಟೊಂದು ಸುಲಭವಲ್ಲ. ಆದರೆ ನಾವೆಲ್ಲ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕೆಡವಬಹುದು. ಸೌಹಾರ್ದತೆಯನ್ನು ಸಾಧಿಸುವ ಹೆಜ್ಜೆಯನ್ನು ಇಡಬಹುದು ಎಂದರು. ಇದಕ್ಕೆ ಪೂರಕವಾಗಿ ನಮ್ಮೊಂದಿಗೆ ನಮ್ಮ ಸಂವಿಧಾನವಿದೆ. ಎಲ್ಲಾ ರೀತಿಯ ಅಸಮಾನತೆಗಳನ್ನು ತೊಡೆದು ಹಾಕುವ, ಸಮಾನತೆಯನ್ನು ಎತ್ತಿ ಹಿಡಿಯುವ ಎಲ್ಲವನ್ನೂ ಸಂವಿಧಾನ ಒಳಗೊಂಡಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರೇಡಿಯೋ ಮಾಧ್ಯಮವು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದು ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ನ ವಾರ್ಷಿಕೋತ್ಸವ “ಹೌಂದೇರಾಯ್ನ ವಾಲ್ಗವಾ” ಸಮಾರಂಭವನ್ನು ದೀಪ ಬೆಳಗಿಸಿ ಮತ್ತು ಗುರು ಮಾರುತಿ ಹೌಂದೇರಾಯ್ನ ವಾಲ್ಗವಾ ತಂಡ ರಿ, ಪಾರಂಪಳ್ಳಿ ಸಾಲಿಗ್ರಾಮ ಅವರಿಗೆ ಸಿಂಗಾರ ಹೂವನ್ನು ನೀಡುವುದರ ಮೂಲಕ ವಿಭಿನ್ನವಾಗಿ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕತೆ ಎನ್ನುವುದು ಹಾಸುಹೊಕ್ಕಾಗಿದೆ. ಆದರೆ ನಾವು ಎಷ್ಟೇ ಆಧುನಿಕೃತಗೊಂಡರೂ ಮೂಲ ಸಂಸ್ಕೃತಿಯನ್ನು ನಾವು ಉಳಿಸಿಕೊಂಡು ಹೋಗಬೇಕು. ಸಾಮಾಜಿಕವಾಗಿ ಚರ್ಚೆಗಳಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಹಳವಿದೆ. ಮಾಧ್ಯಮಗಳು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮುಖ್ಯ ಅತಿಥಿಗಳಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜೇಸಿಐ ಕಟಪಾಡಿ ಆತಿಥ್ಯದಲ್ಲಿ ಮಟ್ಟು ಬೀಚ್‌ನಲ್ಲಿ ಕಡಲೋತ್ಸವ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನೆರವೇರಿದ್ದು ಈ ಸಂದರ್ಭದಲ್ಲಿ ಜೇಸಿಐ ಹಾಲಾಡಿ ವಾರಾಹಿ ಘಟಕವು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಗದು ಬಹುಮಾನ ಹಾಗೂ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ. ವಲಯ 15ರ ವಲಯಧಿಕಾರಿ ಜೆಎಫ್ಎಫ್ ಸಂತೋಷ್ ಶೆಟ್ಟಿ,  ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಜೇಸಿ ಪ್ರದೀಪ್ ಹಾಲಾಡಿ ಅವರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು  ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಜೇಸಿಐ ಹಾಲಾಡಿ ವಾರಾಹಿ ಘಟಕದ ಉಪಾಧ್ಯಕ್ಷರಾದ ಜೇಸಿ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜೇಸಿ ಅಶೋಕ್ ಆಚಾರ್ಯ, ಲೇಡಿ ಜೇಸಿ ಅಧ್ಯಕ್ಷೆ ಜೇಸಿ ಅವಶ್ಯ ಶೆಟ್ಟಿ,ಜೇಸಿ ರಾಘವೇಂದ್ರ ಕುದ್ರುಮನೆ, ಜೇಸಿ ನಾಗೇಶ್, ಜೇಸಿ ಕಿರಣ್, ಜೇಸಿ ಪ್ರಶಾಂತ್, ಜೆಸಿ ಶ್ರೀಕಾಂತ್ ಆಚಾರಿ, ಜೇಸಿ ಮಂಜುಳಾ ಶೆಟ್ಟಿ, ಜೇಸಿ ದೀಪ ಶೆಟ್ಟಿ, ಜೇಸಿ ಆಶಾ ರಾಜೀವ ಕುಲಾಲ್, ದೀಪಾ ಪ್ರದೀಪ್, ವಲಯ ಉಪಾಧ್ಯಕ್ಷರು, ವಲಯ ನಿರ್ದೇಶಕರು, ಘಟಕಧ್ಯಕ್ಷರು, ಸದಸ್ಯರು ಮತ್ತಿತರರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಘಟಕದ ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಸಂತ್ ಅವರು ಪ್ರತಿಷ್ಠಿತ ‘ಲೆಫ್ಟಿನೆಂಟ್’ (Lieutenant) ಪದವಿಗೆ ಭಾಜನರಾಗುವ ಮೂಲಕ ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಒಟ್ಟು ಮೂರು ತಿಂಗಳ ಕಾಲ ನಡೆದ ‘ಪ್ರಿ-ಕಮಿಷನ್’ (PRCN – Pre-Commission) ಕಠಿಣ ಸೇನಾ ತರಬೇತಿಯಲ್ಲಿ ಅವರು ಪಾಲ್ಗೊಂಡಿದ್ದರು. ಸೇನಾ ಪಡೆಯ ಅತ್ಯುನ್ನತ ಶಿಸ್ತು, ನಾಯಕತ್ವಗುಣಗಳು, ಶಸ್ತ್ರಾಸ್ತ್ರ ಬಳಕೆ ಹಾಗೂ ದೈಹಿಕ-ಮಾನಸಿಕ ಸಾಮರ್ಥ್ಯವನ್ನು ರೂಪಿಸುವ ಈ ತರಬೇತಿಯನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಲೆಫ್ಟಿನೆಂಟ್ ಶ್ರೇಣಿಯನ್ನು ಪ್ರದಾನ ಮಾಡಲಾಗಿದೆ. ಈ ತರಬೇತಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ, ಡಾ. ವಸಂತ್ ಅವರು ಇದೀಗ ‘ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿ’ಯಾಗಿ (Associate NCC Officer -ANO) ಭಡ್ತಿ ಪಡೆದಿದ್ದಾರೆ. ಒಬ್ಬ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಜವಾಬ್ದಾರಿಯ ಜೊತೆಗೆ ಸೇನಾ ತರಬೇತಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳು ಸೃಜನಶೀಲ ಚಿಂತನೆಗಳನ್ನು ಹೊಂದಿರಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಿ, ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಠೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ. ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಹೇಳಿದರು. ಅವರು ಎಸ್. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯಲ್ಲಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಎಟಿಎಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ’ಎಟಿಎಲ್ ಬೇಸಿಗೆ ಶಿಬಿರ’ವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಎನ್. ಸದಾಶಿವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸ.ವಿ. ಆಂಗ್ಲ ಮಾಧ್ಯಮ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ಟ, ಸಂಪನ್ಮೂಲ ವ್ಯಕ್ತಿ ನಿಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಇಂದಿನ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರದಲ್ಲೇ ಅಪಾರ ಮಾಹಿತಿಯಿದ್ದು, ಅದನ್ನು ಅರಿಯಲು ಸದಾ ಮೊಬೈಲ್ ಅಥವಾ ಇಂಟರ್‌ನೆಟ್ ಅವಶ್ಯಕವಿಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ವಸ್ತುಗಳನ್ನು ಗಮನಿಸುವ ಮೂಲಕವೇ ಬಹಳಷ್ಟು ಕಲಿಯಬಹುದು ಎಂದು ಮಾಹೆಯ ಸೌರ ಭೌತಶಾಸ್ತ್ರ ಸಂಶೋಧಕ ಅತುಲ್ ಭಟ್ ಹೇಳಿದರು. ಆಳ್ವಾಸ್ ಶಾಲೆ ಆಯೋಜಿಸಿದ್ದ ‘ಖಗೋಳಶಾಸ್ತ್ರ ಬೇಸಿಗೆ ಶಿಬಿರ 2026ʼ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನವನ್ನು ಬಳಸುವ ವೇಳೆ ವಿದ್ಯಾರ್ಥಿಗಳು ತಮ್ಮ ಚಿಂತನಾ ಶಕ್ತಿ ಮತ್ತು ನೆನಪಿನ ಸಾಮರ್ಥ್ಯವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದರು.ಹಿಂದಿನ ದಿನಗಳಲ್ಲಿ ಮೊಬೈಲ್‌ಗಳಿಲ್ಲದೆ ಅನೇಕ ದೂರವಾಣಿ ಸಂಖ್ಯೆಗಳನ್ನೇ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಈಗ ತಂತ್ರಜ್ಞಾನಕ್ಕೆ ಅತಿಯಾಗಿ ಅವಲಂಬಿತರಾಗಿರುವುದರಿಂದ ನೆನಪಿನ ಶಕ್ತಿ ಕುಂದುತ್ತಿದೆ ಎಂದರು. ತಮ್ಮ ಬಾಲ್ಯಯದ ಅನುಭವವನ್ನು ಹಂಚಿಕೊಂಡ ಅವರು, ಖಗೋಳಶಾಸ್ತ್ರ ಕಲಿಯಲು ಸೌಲಭ್ಯಗಳಿಲ್ಲದ ಸಂದರ್ಭದಲ್ಲೂ ಪರಿಶ್ರಮದಿಂದ ನಕ್ಷತ್ರಗಳನ್ನು ಗುರುತಿಸಿ ಕಲಿತಿದ್ದೇವೆ. ಆ ರೀತಿಯ ಪ್ರಯತ್ನವೇ ನಿಜವಾದ ಜ್ಞಾನವನ್ನು ನೀಡುತ್ತದೆ. ಇಂದಿನ ಕಾಲದಲ್ಲಿ ಮೊಬೈಲ್ ಆ್ಯಪ್‌ಗಳ ಮೂಲಕ ನಕ್ಷತ್ರಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ ವಾರ್ಷಿಕ ಮಿತ್ರಕೂಟ ಸಮ್ಮಿಲನ 2026 ಕಾರ್ಯಕ್ರಮ ಕಾಲೇಜಿನ ಮುಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ, ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಪ್ರಣಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾಲೇಜು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿರುವ ವಿದ್ಯಾರ್ಥಿಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕು ಈ ಸಂಸ್ಥೆಗೆ ಬಂದು ಬೆಳಗಿದೆ. ಕಾಲೇಜು ಕನ್ನಡ ಕರಾವಳಿ, ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲ, ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಶ್ಯಾನುಭೋಗ್ ಪ್ರಾಸ್ತಾವಿಸಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಆಶಯ…

Read More