ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು ಕೋಡಿಯ ಸಮುದ್ರಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು . ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್.ಆರ್.ಖಾರ್ವಿ ಉಪಾಧ್ಯಕ್ಷ ರಾದ ಪೀತಾಂಬರ ಗಣಪತಿ ಖಾರ್ವಿ , ಮೊಕ್ತೇಸರರಾದ ಆನಂದ ನಾಯ್ಕ್, ಸಮುದ್ರ ಪೂಜೆ ಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು ವಹಿಸಿದ್ದರು. ಸಮಿತಿಯ ಸದಸ್ಯರು. ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಸಾರಂಗ ಹಾಗೂ ಸಂಘದ ಸದಸ್ಯೆಯರ ಸಹಿತ ಹಲವಾರು ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.03ರ ಸೋಮವಾರ 126 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 34, ಉಡುಪಿ ತಾಲೂಕಿನ 58 ಹಾಗೂ ಕಾರ್ಕಳ ತಾಲೂಕಿನ 28 ಮಂದಿಗೆ ಪಾಸಿಟಿವ್ ಬಂದಿದೆ. 6 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಇಂದು 116 ಮಂದಿ ಬಿಡುಗಡೆಗೊಂಡಿದ್ದಾರೆ, 1086 ನೆಗೆಟಿವ್: ಈ ತನಕ ಒಟ್ಟು 34,500 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 29,174 ನೆಗೆಟಿವ್, 4,800 ಪಾಸಿಟಿವ್ ಬಂದಿದ್ದು, 526 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1086 ನೆಗೆಟಿವ್, 126 ಪಾಸಿಟಿವ್ ಬಂದಿದೆ. ಒಟ್ಟು 1,301 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 1,952 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 4,800 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2,812 ಮಂದಿ ಬಿಡುಗಡೆಯಾಗಿದ್ದು, 1,952 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಆ.3: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಯಾಗುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಅಂಗಡಿ ಮುಂಗಟ್ಟುಗಳು, ಝೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ವಿತರಕ ಸಂಸ್ಥೆಗಳು, ಹೊಟೇಲ್ ಮತ್ತು ರೆಸ್ಟೋರೆಂಟ್ಗಳ ಮಾಲಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳಿಗೆ ಕೊವಿಡ್ ತಪಾಸಣೆ ಮಾಡಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಹೆಚ್ಚಿನ ಸಂಸ್ಥೆಯವರು ತಮ್ಮ ಸಿಬ್ಬಂದಿಯವರಿಗೆ ಕೋವಿಡ್ ಪರೀಕ್ಷೆ ಮಾಡಿಸದೇ ಇರುವುದು ಕಂಡುಬಂದಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿರುವ ಎಲ್ಲಾ ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಅಂಗಡಿ ಮುಂಗಟ್ಟುಗಳು, ಝೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ವಿತರಕ ಸಂಸ್ಥೆಗಳು, ಹೊಟೇಲ್ ಮತ್ತು ರೆಸ್ಟೋರೆಂಟ್ಗಳವರು ಕಡ್ಡಾಯವಾಗಿ ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿ ದಿನಾಂಕವನ್ನು ನಿಗದಿಪಡಿಸಿಕೊಂಡು ರ್ಯಾಪಿಟ್ ಆಂಟಿಜೆನ್ ಟೆಸ್ಟ್ ಮೂಲಕ ತಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಯವರಿಗೆ ತಪಾಸಣೆ ಮಾಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ, ಅಂತಹ ಸಂಸ್ಥೆಯವರನ್ನು ಅಪರಾಧಿ ಎಂದು ಪರಿಗಣಿಸಿ, ಕಾಯ್ದೆಯನ್ವಯ ಕಠಿಣ ಶಿಕ್ಷೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಆ3: ಮೀನುಗಾರಿಕೆ ಇಲಾಖೆ ವತಿಯಿಂದ ಪಂಜರ ಮೀನುಕೃಷಿ ತರಬೇತಿ ಕಾರ್ಯಾಗಾರವನ್ನು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಗಸ್ಟ್ 8 ರಂದು ಹಮ್ಮಿಕೊಂಡಿದ್ದು ಮೀನು ಕೃಷಿ ಕೈಗೊಳ್ಳಲು ಇಚ್ಚಿಸಿರುವ ಆಸಕ್ತರು ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ -2 ಕಛೇರಿ ಕುಂದಾಪುರ ಇಲ್ಲಿ ಆಗಸ್ಟ್ 6 ರಂದು ಅಪರಾಹ್ನ 4 ಘಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ -2 ರವರ ಕಛೇರಿ ಕುಂದಾಪರ ದೂರವಾಣಿ ಸಂಖ್ಯೆ -08254-230534 ಸಂಪರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.02ರ ಭಾನುವಾರ 182 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 55, ಉಡುಪಿ ತಾಲೂಕಿನ 75 ಹಾಗೂ ಕಾರ್ಕಳ ತಾಲೂಕಿನ 52 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 107 ಪುರುಷರು, 75 ಮಹಿಳೆಯರು ಸೇರಿದ್ದಾರೆ. ಇಂದು 78 ಮಂದಿ ಬಿಡುಗಡೆಗೊಂಡಿದ್ದು, ಓರ್ವ 54 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಸಾರಿ 6 ಪ್ರಕರಣ, ILI 45 ಪ್ರಕರಣ, ಪ್ರಾಥಮಿಕ ಸಂಪರ್ಕದಿಂದ 76 ಪ್ರಕರಣ ಬಂದಿದ್ದು, 55 ಪ್ರಕರಣಗಳ ಮೂಲ ಪತ್ತೆ ಮಾಡಲಾಗುತ್ತಿದೆ. 625 ನೆಗೆಟಿವ್: ಈ ತನಕ ಒಟ್ಟು 33,378 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 28,088 ನೆಗೆಟಿವ್, 4,674 ಪಾಸಿಟಿವ್ ಬಂದಿದ್ದು, 616 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 625 ನೆಗೆಟಿವ್, 182 ಪಾಸಿಟಿವ್ ಬಂದಿದೆ. ಒಟ್ಟು 1,267 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 1,942 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಡಿ ಭದ್ರತಾ ದಳದಲ್ಲಿ ಡೆಪ್ಯೂಟಿ ಕಮಾಂಡಂಟ್ ಆಗಿದ್ದ ಕಿರಣ್ ಗೋವಿಂದ ಕೊಡ್ಕಣಿ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ. ಕಿರಣ್ ಗೋವಿಂದ ಕಾಶ್ಮೀರದ ಗಡಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಸಬ್ ಇನ್ಸಪೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ ಡೆಪ್ಯೂಟಿ ಕಮಾಂಡಂಟ್ ಹುದ್ದೆಯ ತನಕ ಪದೋನ್ನತಿ ಹೊಂದಿದ್ದರು. ಮೂಲತಃ ಯಲ್ಲಾಪುರವಾದರೂ ಅವರ ಕುಟುಂಬ ಕುಂದಾಪುರದಲ್ಲಿ ನೆಲೆಸಿತ್ತು.
ಕುಂದಾಪ್ರ ಡಾಟ್ ಕಾಂ ಲೇಖನ. ಅರ್ಹತೆ ಇರಲಿ, ಇಲ್ಲದಿರಲಿ ಹುದ್ದೆಗಳಿಗೆ ಹಾತೊರೆಯುವ ಮಂದಿಯ ನಡುವೆ ಸತ್ಕಾರ್ಯಗಳ ಪರಿಚಾರಿಕೆಯಲ್ಲಿ ಪ್ರಸನ್ನತೆ ಪಡೆಯುವ ಮರವಂತೆ ಪ್ರಕಾಶ ಪಡಿಯಾರ್ ಅವರದು ಅಪರೂಪಕ್ಕೆ ಕಾಣಸಿಗುವ ವಿಭಿನ್ನ ವ್ಯಕ್ತಿತ್ವ. ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು, ಸೇವಾ ಕಾರ್ಯಗಳು ಸಮಾಜಮುಖಿ ಕೆಲಸಗಳು ನಡೆಯುವಲ್ಲಿ ಹಾಜರಾಗುವ ಅವರು ಹೊಣೆಗಾರಿಕೆಯನ್ನು ಬೇಡಿ ಪಡೆದು ಅದರ ಯಶಸ್ವಿ ನಿರ್ವಹಣೆಯಲ್ಲಿ ಆತ್ಮಸಂತೃಪ್ತಿ ಪಡೆಯುತ್ತಾರೆ. ಹದಿನೆಂಟನೆಯ ವಯಸ್ಸಿನಲ್ಲಿಯೇ ಕಲಿತ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗುವುದರೊಂದಿಗೆ ಅವರ ಸೇವಾ ಕಾರ್ಯ ಆರಂಭವಾಗುತ್ತದೆ. ತಮ್ಮ ಇಪ್ಪತ್ತನೆಯ ಹರೆಯದಲ್ಲಿ ಮರವಂತೆಯಲ್ಲಿ ಎಸ್. ಜನಾರ್ದನ ಗೆಳೆಯರೊಂದಿಗೆ ಸೇರಿ ಹುಟ್ಟುಹಾಕಿದ ಸೇವಾ ಸಾಂಸ್ಕೃತಿಕ ವೇದಿಕೆ ’ಸಾಧನಾ’ದ ಸದಸ್ಯತ್ವ ಸ್ವೀಕರಿಸಿ ಅದರ ವೈವಿಧ್ಯಮಯ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಮುಂದೊಂದು ದಿನ ಅದರ ಒಂದು ಸಾಲಿನ ಅಧ್ಯಕ್ಷರಾಗಿ ಫಲಪ್ರದ ಕಾರ್ಯಕ್ರಮಗಳನ್ನು ಆಯೋಜಿಸಿದರು. ಮರವಂತೆಯಲ್ಲಿ ಕುಂದಾಪುರದ ಸೇವಾ ಸಂಗಮ ಆರಂಭಿಸಿದ ಶಿಶುಮಂದಿರದ ಕಾರ್ಯದರ್ಶಿಯಾಗಿ ಕೆಲಕಾಲ ಅದನ್ನು ಮುನ್ನಡೆಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಮರವಂತೆಯಲ್ಲಿ ಗ್ರಾಮೀಣ ರೋಟರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.01ರ ಶನಿವಾರ 136 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 37, ಉಡುಪಿ ತಾಲೂಕಿನ 65 ಹಾಗೂ ಕಾರ್ಕಳ ತಾಲೂಕಿನ 33 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 70 ಪುರುಷರು, 66 ಮಹಿಳೆಯರು ಸೇರಿದ್ದಾರೆ. 716 ನೆಗೆಟಿವ್: ಈ ತನಕ ಒಟ್ಟು 32,401 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 27,463 ನೆಗೆಟಿವ್, 4,492 ಪಾಸಿಟಿವ್ ಬಂದಿದ್ದು, 446 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 716 ನೆಗೆಟಿವ್, 136 ಪಾಸಿಟಿವ್ ಬಂದಿದೆ. ಒಟ್ಟು 1,316 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. ಇಂದು 100 ಮಂದಿ ಬಿಡುಗಡೆಗೊಂಡಿದ್ದಾರೆ. 1,811 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 4,492 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2,646 ಮಂದಿ ಬಿಡುಗಡೆಯಾಗಿದ್ದು, 1,811 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಒಂದು ವ? ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ನೆನಪಿಗಾಗಿ ಹಾಗೂ ಪರಿಸರ ಜಾಗೃತಿಗಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಬಿಜೆಪಿ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಸಸಿ ನೆಡುವ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಪಕ್ಷದ ಪ್ರಮುಖರಾದ ಬಿ. ಸದಾನಂದ ಶೆಣೈ, ಉಮಾನಾಥ ದೇವಾಡಿಗ, ರಾಮಪ್ಪ ಖಾರ್ವಿ, ಹರೀಶ್ ಮೇಸ್ತ, ವಾಸುದೇವ ದೇವಾಡಿಗ, ಚಂದ್ರ ಖಾರ್ವಿ, ಅಶೋಕ ಪೂಜಾರಿ, ಸತೀಶ ಖಾರ್ವಿ, ಬೈಂದೂರು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತಿ ಅಶೋಕ್, ಜ್ಯೋತಿ ಆರ್., ಗ್ರಾಪಂ ಸದಸ್ಯರಾದ ಬಿ.ರಾಘವೇಂದ್ರ ಪೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ಗಣೇಶ ಶೆಣೈ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಆ.1: ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಎಚ್ಚರಿಸಿ, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಜುಲೈ 31ರ ಮಧ್ಯಾಹ್ನದ ವರದಿಯಂತೆ ಉಡುಪಿ ಜಿಲ್ಲೆಗೆ ಮುಂದಿನ 5 ದಿನಗಳ ಸುಮಾರು ಕಾಲ 115mm ಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದೆ. ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ನಾನದಲ್ಲಿ ಇರತಕ್ಕದ್ದು. ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು. ಇಂತಹ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ/ಕಟ್ಟಡ/ಮರಗಳ ಕೆಳಗೆ ನಿಲ್ಲದ ಸುರಕ್ಷಿತ ಸಾಲಗಳನ್ನು ತಲುಪುವದು. ತುರ್ತು ಸೇವೆಗೆ: 1077 ದೂರವಾಣಿ: 0820-2574802
