ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.7ರ ಮಂಗಳವಾರ 28 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 466 ನೆಗೆಟಿವ್: ಈ ತನಕ ಒಟ್ಟು 19,773 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 15,756 ನೆಗೆಟಿವ್, 1,390 ಪಾಸಿಟಿವ್ ಬಂದಿದ್ದು, 2,627 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 466 ನೆಗೆಟಿವ್, 40 ಪಾಸಿಟಿವ್ ಬಂದಿದೆ. ಒಟ್ಟು 1170 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 205 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,390 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,182 ಮಂದಿ ಬಿಡುಗಡೆಯಾಗಿದ್ದು, 205 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಅನುಮತಿಯಿಲ್ಲದೇ ಸಭೆ – ಸಮಾರಂಭ ನಡೆಸಿದಲ್ಲಿ ಪ್ರಕರಣ ದಾಖಲು: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=39331 . ► ಕೋವಿಡ್ ಪರೀಕ್ಷೆ ಮಾಡಿಸಿದವರು ವರದಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಅ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಈ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ, ನಿಯಮ ಬಾಹಿರವಾಗಿ ಹುಟ್ಟುಹಬ್ಬದ ಆಚರಣೆ, ಮೆಹಂದಿ ಕಾರ್ಯಕ್ರಮಗಳು, ಸನ್ಮಾನ ಕಾರ್ಯಕ್ರಮ ಮುಂತಾದವುಗಳು ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂಬ ಅಂಶವನ್ನು ಸಂಘಟಕರು ಅರಿತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದಾಗಿ ಕೋವಿಡ್ -19 ನ್ನು ಹರಡುವ ಸಾಧ್ಯತೆಯಿದ್ದು, ಈ ಕಾರ್ಯಕ್ರಮಗಳ ಸಂಘಟಕರ ಮೇಲೆ ಕಡ್ಡಾಯವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಪೂರ್ವಾನುಮತಿಯ ಮೇರೆಗೆ ಜರುಗುವ ಮದುವೆ / ಇತರೆ ಸಭೆ ಸಮಾರಂಭ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸರ್ಕಾರದ ಆದೇಶದನ್ವಯ , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಶುಚಿತ್ವ ಕಾಪಾಡಿಕೊಳ್ಳುವಿಕೆಗೆ ಹಾಗೂ ಇತರ ಎಸ್.ಓ.ಪಿ. ಕ್ರಮಗಳು ಯಥಾ ರೀತಿಯಲ್ಲಿ ಪಾಲನೆಯಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸಂಬಂಧಿಸಿದ ತಹಶೀಲ್ದಾರರು/ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು/ ಉಡುಪಿ ನಗರಸಭೆ ಪೌರಾಯುಕ್ತರು / ಮುಖ್ಯಾಧಿಕಾರಿಗಳು/ ಗ್ರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ,ದೇಶದ ಜನ ಕೋವಿಡ್ -19 ನಿಂದ ಸಂಕಷ್ಟದಿಂದ ಇರುವ ಸಂದರ್ಭದಲ್ಲಿ ಡಿಸೇಲ್,ಪೆಟ್ರೊಲ್ ಬೆಲೆ ನಿರಂತರವಾಗಿ ಎರಿಸಿರುವುದು ಕೇಂದ್ರದ ಬಿಜೆಪಿ ಸರಕಾರದ ರಾಕ್ಷಸಿ ಪ್ರವೃತ್ತಿಯ ಸಂಕೇತ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿಹೇಳಿದರು. ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯ ನೇತ್ರತ್ವ ವಹಿಸಿ ಮಾತನಾಡಿ ಹಿಂದೆ ಮನ ಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ದೇಶದಲ್ಲಿ ತೈಲ ಬೆಲೆ ಹೆಚ್ಚಿಸಿದಾಗ ಬೀದಿಗಿಳಿದು ಹೋರಾಟ ಮಾಡಿವವರೇ ಈಗ ಅಧಿಕಾರದಲ್ಲಿದ್ದು ಪ್ರಸ್ತುತ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದುದರಿಂದ 30 ರಿಂದ 35 ರೂಪಾಯಿಗೆ ಡಿಸೇಲ್ ನೀಡಬೇಕಿತ್ತು. ಇದು ಜನ ಸಾಮಾನ್ಯರ ಪರವಾದ ಪ್ರತಿಭಟನೆ ಎಂದ ಅವರು ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು ಆರ್ಥಿಕವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸಾರ್ವಜನಿಕರು, ಖಾಸಗಿ ಲ್ಯಾಬ್’ಗಳಲ್ಲಿ ನೀಡಿರುವ ತಮ್ಮ ಕೋವಿಡ್-19 ಪರೀಕ್ಷಾ ವರದಿ ಬರುವ ಮುನ್ನವೇ ಜಿಲ್ಲೆಗೆ ಆಗಮಿಸುತ್ತಿದ್ದು, ಜಿಲ್ಲೆಗೆ ಆಗಮಿಸಿದ ನಂತರ ಅವರ ವರದಿಯು ಪಾಸಿಟಿವ್ ಆಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಲ್ಲಿ, ಅಂತಹ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಹೊರರಾಜ್ಯದಿಂದ ಬರುವ ವ್ಯಕ್ತಿಗಳು ತಮ್ಮ ಕೋವಿಡ್ 19 ಪರೀಕ್ಷಾ ವರದಿ ಬಂದ ನಂತರವೇ ಜಿಲ್ಲೆಗೆ ಬರಬೇಕು, ಖಾಸಗಿ ಲ್ಯಾಬ್ ಗಳೂ ಸಹ ಅಂತಹ ವ್ಯಕ್ತಿಗಳ ವರದಿಯನು ಸಂಬAದಪಟ್ಟ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲೆಯಲ್ಲಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗದೇ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಬಸ್ ಗಳ ವಿರುದ್ದ ಪ್ರಕರಣ ದಾಖಲಿಸದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನೋಟೀಶ್ ನೀಡುವಂತೆ ಸೂಚಿಸಿದರು. ಎಲ್ಲಾ ತಹಸೀಳ್ದಾರ್ ಗಳು ಬಸ್ ಗಳಲ್ಲಿ ನಿಗಧಿತ ಸಂಖ್ಯೆಗಿAತ ಹೆಚ್ಚಿನ ಪ್ರಯಾಣಿಕರದ್ದಲ್ಲಿ ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಹಾಗೂ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ವಂಡ್ಸೆಯಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ದೇಶದಲ್ಲಿ ಅರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆಯಿಂದ ಜನ ಕಂಗೆಟ್ಟಿದ್ದು, ಅದರೊಂದಿಗೆ ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾಗುತ್ತಿರುವುದು ಬಿಸಿವತುಪ್ಪವಾಗಿ ಪರಿಣಮಿಸಿದೆ. 2014 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 6330 ರೂ. ಇದ್ದಿದ್ದು ಈಗ 3035 ರೂ. ಗೆ ಕುಸಿದಿದೆ, ಆದರೂ ಕೇಂದ್ರ ಸರ್ಕಾರ ಬೆಲೆ ಎರಿಕೆ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದ ಅವರು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಜನವಿರೋ ನೀತಿಯ ವಿರುದ್ಧ ಗ್ರಾಮ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.6ರ ಸೋಮವಾರ 40 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಹೋಟೆಲ್ ಸಿಬ್ಬಂದಿ, ಅಂಗಡಿ ಮಾಲೀಕರ ಕುಟುಂಬ, ಬಸ್ ಚಾಲಕ ಕರೋನಾ ಸೋಂಕು ತಗುಲಿದ್ದು ಸಮುದಾಯಕ್ಕೆ ಹಬ್ಬುವ ಭೀತಿ ಎದುರಾಗಿದೆ. ಕೋಟದಲ್ಲಿರುವ ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಕೋವಿಡ್ ದೃಢಗೊಂಡಿದ್ದು, ಹೊಟೇಲ್ ಮತ್ತು ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿದೆ. ಇಂದು 466 ನೆಗೆಟಿವ್: ಈ ತನಕ ಒಟ್ಟು 18,542 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 15,540 ನೆಗೆಟಿವ್, 1,362 ಪಾಸಿಟಿವ್ ಬಂದಿದ್ದು, 1,640 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 466 ನೆಗೆಟಿವ್, 40 ಪಾಸಿಟಿವ್ ಬಂದಿದೆ. ಒಟ್ಟು 1126 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 205 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,362 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1154 ಮಂದಿ ಬಿಡುಗಡೆಯಾಗಿದ್ದು, 205 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋದ ಮೂವರು ಬಸ್ ಚಾಲಕರಿಗೆ ಕೋರೋನಾ ಸೊಂಕು ದೃಢಪಟ್ಟಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 44 ವರ್ಷದ ಕುಂದಾಪುರ – ಬೆಂಗಳೂರು ಬಸ್ ಚಾಲಕ, 36 ವರ್ಷದ ಕುಂದಾಪುರ – ಶಿವಮೊಗ್ಗ ಬಸ್ ಚಾಲಕ ಹಾಗೂ 58 ವರ್ಷದ ಬಸ್ ಚಾಲಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಅದರ ವರದಿ ದೊರೆತಿದ್ದು, ಬಾಗಲಕೋಟೆ ಮೂಲದ ಚಾಲಕನನ್ನು ಬಾಗಲಕೋಟೆ ಕೋವಿಡ್ ಆಸ್ಪತ್ರೆಗೆ ಹಾಗೂ ಉಳಿದವರನ್ನು ಕುಂದಾಪುರದ ಕೋವಿಡ್ ಆಸ್ಪತ್ರೆ ದಾಖಲಿಸಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವನ್ನು ಕ್ವಾರಂಟೈನ್ ಮಾಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ವಿಶಿಷ್ಟ ಸರಣಿ ಕಾರ್ಯಕ್ರಮದಡಿ ನಿರಂತರ ಪ್ರತೀ ತಿಂಗಳು ಕಾರ್ಯಕ್ರಮ ಸಂಘಟಿಸಿ ಐದು ವರ್ಷ ಯಶಸ್ವಿಯಾಗಿ ಪೂರೈಸಿ ಸಾಂಸ್ಕೃತಿಕ ರಂಗಭೂಮಿಯಲ್ಲಿ ಎಲ್ಲರ ಗಮನ ಸೆಳೆದಿದೆ.ಸರಕಾರ, ಇಲಾಖೆ ಹಾಗೂ ಅಕಾಡೆಮಿಗಳ ಯಾವುದೇ ಧನಸಹಾಯ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವುದು ಈ ಅಕಾಡೆಮಿಯ ವಿಶೇಷ. ಅನೇಕ ಅಡ್ಡಿ, ಆತಂಕಗಳನ್ನು ದಾಟಿ ೩೫೦ ವರ್ಷದ ಆರನೇ ತಲಾಂತರದ ಪರಂಪರೆಯನ್ನು ಜೀವಂತವಾಗಿರಿಸುವ ಹೊಣೆ ಹೊತ್ತ ಈ ಸಂಸ್ಥೆಗೆ ಸಾರ್ವಜನಿಕರ ಸಹಕಾರ, ಪ್ರೋತ್ಸಾಹವೇ ಜೀವಾಳ. ಕೋವಿಡ್-19 ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಗತ್ತೇ ಸ್ತಬ್ಧವಾಗಿರುವ ಗೊಂದಲಗಳ ನಡುವೆಯೂ ಈ ಗೊಂಬೆಯಾಟ ಅಕಾಡೆಮಿಯ ನಿರಂತರ ಚಟುವಟಿಕೆ ಹಾಗೂ ಸಾಧನೆಯ ಹಿನ್ನೆಲೆಯನ್ನು ಕಂಡು ಕಾರ್ಯಕ್ರಮಕ್ಕೆ ಅಗತ್ಯವೆನಿಸಿದ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದ ನಿವೃತ್ತ ಬ್ಯಾಂಕ್ ಮೆನೇಜರ್ ವಿಶ್ವಂಭರ ಐತಾಳ್ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಐತಾಳ್ ದಂಪತಿಗಳು ಅಭಿನಂದನಾರ್ಹರು. ಈ ದಂಪತಿಗಳ ಅತ್ಯುತ್ಸಾಹವೇ ಗೊಂಬೆಯಾಟ ಅಕಾಡೆಮಿಯ ವೇದಿಕೆಯಲ್ಲಿ ತುರ್ತಾಗಿ, ಸರಳವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಹಾಗೂ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ತಹಶೀಲ್ದಾರ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಎರುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ಹೈರಣಾಗಿದ್ದಾರೆ, ಹೀಗಾಗಿ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಕೊರೋನಾದ ನಡುವೆಯು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದು ದೇಶದಲ್ಲಿ ಅರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆಯಿಂದ ಜನ ಕಂಗೆಟ್ಟಿದ್ದು, ಅದರೊಂದಿಗೆ ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾಗುತ್ತಿರುವುದು ಬಿಸಿವತುಪ್ಪವಾಗಿ ಪರಿಣಮಿಸಿದೆ. ೨೦೧೪ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ೬೩೩೦ ರೂ. ಇದ್ದಿದ್ದು ಈಗ ೩೦೩೮ ರೂ. ಗೆ ಕುಸಿದಿದೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಹಾಗೂ ಸುಬ್ಬಯ್ಯ ದೇವಾಡಿಗ ಎಂಬುವವರ ಕುಟುಂಬಕ್ಕೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನಿಂದ ನಿರ್ಮಿಸಿಕೊಟ್ಟ ನೂತನ ಗೃಹ ‘ಶ್ರೀ ಕೃಷ್ಣ ನಿಲಯ’ ಇದರ ಉದ್ಘಾಟನಾ ಸಮಾರಂಭ ಸೋಮವಾರ ಜರುಗಿತು. ನೂತನ ಗೃಹವನ್ನು ಬಾಬು ಪೂಜಾರಿ – ಮಂಜಮ್ಮ ದಂಪತಿಗಳು ಉದ್ಘಾಟಿಸಿದರು. ಈ ಸಂದರ್ಭ ಉಡುಪಿ ಜ್ಯೋತಿಷಿಗಳಾದ ರಘುನಾಥ ಜೋಯಿಸ್, ಮುಖಂಡರುಗಳಾದ ಎಸ್. ರಾಜು ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ಮದನಕುಮಾರ್ ಉಪ್ಪುಂದ, ಗೌರಿ ದೇವಾಡಿಗ, ಮಹೇಂದ್ರ ಪೂಜಾರಿ, ಜಗದೀಶ ದೇವಾಡಿಗ, ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ, ಟ್ರಸ್ಟೀಗಳಾದ ಮಾಲತಿ ಗೋವಿಂದ ಪೂಜಾರಿ, ರಾಮ ಬಿಜೂರು, ಸದಸ್ಯರುಗಳಾದ ಜಯರಾಮ ಶೆಟ್ಟಿ, ನರಸಿಂಹ ನಾಯಕ್, ಉದ್ಯಮಿ ಗುರುರಾಜ ಪೂಜಾರಿ, ರಾಮ ಪೂಜಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ► ಸ್ವಂತ ಸೂರು ನಿರ್ಮಿಸುವ ಕನಸು ಶ್ರೀ ವರಲಕ್ಷ್ಮೀ…
