ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಅವರು ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕೇರಮ್ (ಸಿಂಗಲ್ಸ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.11: ತಾಲೂಕಿನ ಕೋಡಿ ಲೈಟ್ ಹೌಸ್ ಎದುರು 55 ದಿನಗಳ ಹಿಂದೆ ಪತ್ತೆಯಾದ ಕಡಲಾಮೆ ಮೊಟ್ಟೆಯಿಂದ ಹೊರಬಂದ ಆಲೀವ್ ರಿಡ್ಲಿ ಜಾತಿಗೆ ಸೇರಿದ 74 ಕಡಲಾಮೆ ಮರಿಗಳು ಸುರಕ್ಷಿತವಾಗಿ ಕಡಲ ಸೇರಿವೆ. ಅರಣ್ಯ ಇಲಾಖೆ ಎಫ್.ಎಸ್.ಎಲ್ ಇಂಡೀಯಾ ಸ್ಥಳೀಯ ಮೀನುಗಾರರು ಮತ್ತು ರೀಫ್ ವಾಚ್ ಸಂಸ್ಥೆಯ ಕಡಲಾಮೆ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದು, ಗುರುವಾರ ರಾತ್ರಿ ಕಡಲು ಸೇರುವ ಪ್ರಕ್ರಿಯೆ 2 ಗಂಟೆಗಳ ಹೆಚ್ಚು ಕಾಲ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳಾದ ಉದಯ ಬಿ, ಬಸವರಾಜ್, ರಂಜಿತ್ ಪೂಜಾರಿ ಹಾಗೂ ಎಫ್.ಎಸ್.ಎಲ್ ಸಂಸ್ಥೆಯ ದಿನೇಶ್ ಸಾರಂಗ, ನಾಗರಾಜ ಶೆಟ್ಟಿ ಸಬ್ಲಾಡಿ, ವೆಂಕಟೇಶ್ ಎಂ ಮತ್ತು ರೀಪ್ ವಾಚ್ ಸಂಸ್ಥೆಯ ಕಾರ್ಯಕರ್ತರಾದ ತೇಜಸ್ವಿನಿ, ವಿರೀಲ್ ಕುಮಾರ್ ಜೊತೆಗಿದ್ದರು. ಅಲ್ಲದೆ ಸ್ಥಳೀಯ ಮೀನುಗಾರರಾದ ಸಂತೋಷ, ಸುಬ್ರಮಣ್ಯ ಸಾರಂಗ, ಧನುಷ್ ಬಿ.ಆರ್, ಭರತ್ ಖಾರ್ವಿ, ಲಕ್ಷ್ಮಣ ಪೂಜಾರಿ, ಉದಯ ಖಾರ್ವಿ ಕೊನೆತನಕ ಇದ್ದು ಸಹಕರಿಸಿದರು. ವಿಶೇಷವಾಗಿತ್ತು. ಇನ್ನೂ 4 ಕಡಲಾಮೆ ಮೊಟ್ಟೆಯ ಗೂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ತಾಲೂಕಿನ ಹಕ್ಲಾಡಿಯ ಉದಯ ಪುತ್ರನ್ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಮೇಶ್ ಪುತ್ರನ್ ಹಾಗೂ ವಿನೋದಾ ದಂಪತಿಯ ಪುತ್ರನಾಗಿರುವ ಉದಯ ಪುತ್ರನ್ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಖಾಸಗಿ ಉದ್ಯೋಗವನ್ನು ನಿರ್ವಹಿಸುವ ಜೊತೆಗೆ ತಮ್ಮ ನಿರಂತರ ಸ್ವ-ಅಧ್ಯಯನ ಹಾಗೂ ಪರಿಶ್ರಮದ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಪುಸ್ತಕ ಸ್ನೇಹಿ ಮನೋಭಾವನೆಯನ್ನು ರೂಡಿಸಿಕೊಂಡು ವೃತ್ತಿ ಪರತೆಯನ್ನು ಕಾಯ್ದುಕೊಳ್ಳಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿಜಯಾ ಬಿ ಹೇಳಿದರು. ಅವರು ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಆಧ್ಯಯನ ಕೇಂದ್ರದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಘಟಕದ ನೇತೃತ್ವದಲ್ಲಿ ಜರುಗಿದ ಸ್ನಾತಕೋತ್ತರ ವಿಭಾಗದ ಎಂ.ಕಾಂ. ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಜೆಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಉಷಾದೇವಿ ಜೆ.ಎಸ್., ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಶೇಖರ ಬಿ., ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ಗೀತಾ ಎಂ. ಉಪಸ್ಥಿತರಿದ್ದರು. ಎಂ.ಕಾಂ. ವಿದ್ಯಾರ್ಥಿಗಳಾದ ಪಲ್ಲವಿ, ಪವಿತ್ರ ಹಾಗೂ ಸಂಗೀತಾ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಗೀತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಗವನ್ನು ಪರಿಹಾರ ಮಾಡುವ ದೇವರು ಕೋಟಿಲಿಂಗೇಶ್ವರ. ಈ ಕಾರಣದಿಂದಲೇ 2 ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಬ್ರಹ್ಮಕಲಶೋತ್ಸವ ಕಾರ್ಯಗಳನ್ನು ಆ ಭಗವಂತನೇ ಬದಿಗಿಟ್ಟು ಇದೀಗ ಕೋವಿಡ್ ರೋಗವನ್ನು ಜಗತ್ತಿನಿಂದ ತೊಲಗಿಸಿ ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡು ಬ್ರಹ್ಮಕಲಶದ ಹೊಸ್ತಿಲಿನಲ್ಲಿದ್ದಾನೆ ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು. ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ 62 ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್, ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿದ್ವಾನ್ ಶ್ರೀಪತಿ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಗೌರವಧ್ಯಕ್ಷ ನೇರಂಬಳ್ಳಿ ಕೃಷ್ಣಮೂರ್ತಿ ರಾವ್, ಬ್ರಹ್ಮಕಲಶೋತ್ಸವ ಸಮಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಪ್ತ ಮೋಕ್ಷಪ್ರದ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ೬೭ ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಸಂದರ್ಭ ಸುಮಾರು ೭೩ ಅಡಿ ಎತ್ತರದ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆಯನ್ನು ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಇವರ ನೇತೃತ್ವದಲ್ಲಿ ಗುರುವಾರ ಕುಂಭ ಲಗ್ನದಲ್ಲಿ ಪ್ರತಿಷ್ಠಾಪಿಸಲಾಯಿತು. ಪುಣ್ಯಾಹವಾಚನ, ಧ್ವಜಪ್ರತಿಷ್ಠಾ ಕಲಶ ಸ್ಥಾಪನೆ, ಪ್ರತಿಷ್ಠಾ ಹೋಮ, ಕಲಶಾಭಿಷೇಕ ಪೂಜಾ, ಗಣಪತಿ ಪ್ರಾರ್ಥನೆ, ಶ್ರೀ ದೇವರ ಪ್ರಾರ್ಥನೆ, ಧ್ವಜಾರೋಹಣ, ಶತರುದ್ರ ಕಲಶ ಸ್ಥಾಪನೆ, ಶತರುದ್ರ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಬಲಿ ಉತ್ಸವ, ರಾತ್ರಿ ಗಣಪತಿ ಪ್ರಾರ್ಥನೆ, ಯಾಗಶಾಲೆಯಲ್ಲಿ ಪುಣ್ಯಾಹವಾಚನ, ಮಂಟಪ ಸಂಸ್ಕಾರ, ಅಗ್ನಿಜನನ ಹೋಮ, ದಿಶಾ ಹೋಮ, ರಜ್ಜು ಬಂಧನ, ಅಸ್ತ್ರ ಕಲಶ ಸ್ಥಾಪನೆ, ಬಿಂಬ ಶುದ್ದಿ ಕಲಶ ಸ್ಥಾಪನೆ, ಭೇರಿತಾಡನ, ಕೌತುಕ ಬಂಧನ, ದೊಡ್ಡ ರಂಗಪೂಜೆ, ಪುಷ್ಪ ರಥೋತ್ಸವ, ಪನ್ನಗ ವಾಹನೋತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಪರೀಕ್ಷೆಯಲ್ಲಿ ಕುಂದಾಪುರ ಕೋಡಿಯ ಶ್ರುತಿ ತೇರ್ಗಡೆಯಗಿದ್ದಾರೆ. ಕೋಡಿ ಹಳೆ ಅಳಿವೆಯ ಬಾಬು ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರಿಯಾದ ಶ್ರುತಿ ಯಾವುದೇ ಕೋಚಿಂಗ್ ಪಡೆಯದೇ, ಸ್ವ-ಅಧ್ಯಯನದ ಮಾಡಿದ್ದರು. ಸಿಎ -ಸಿಪಿಟಿ & ಸಿಎ ಇಂಟರ್ನ್ ಗ್ರೂಪ್-1 ಮೊದಲ ಪ್ರಯತ್ನದಲ್ಲಿ, ಸಿಎ ಇಂಟರ್ನ್ ಗ್ರೂಪ್-2 ಮೂರನೇ ಪ್ರಯತ್ನದಲ್ಲಿ ಹಾಗೂ ಸಿಎ ಫೈನಲ್ ಗ್ರೂಪ್-1, ಗ್ರೂಪ್-1 ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಸಿಎ ಶಾಂತಾರಾಮ ನಾಯಕ್ ಅವರ ಬಳಿ ಆರ್ಟಿಕಲ್ಶಿಪ್ ಪೂರೈಸಿದ್ದರು. ► ಸಿ.ಎ ಪರೀಕ್ಷೆಯಲ್ಲಿ ಕುಂದಾಪುರ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ – https://kundapraa.com/?p=57339 .
ಕುಂದಾಪ್ರ ಡಾಟ್ ಕಂ ಸುದ್ದಿ.ಕೋಟ: ಈ ದೇಶದ ಪ್ರಮುಖ ಆಸ್ತಿ ಕೃಷಿ ಮತ್ತು ಋಷಿ ಪರಂಪರೆ ಅದನ್ನು ಎಂದು ಮರೆಯಬಾರದು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ಕೆ. ವಿ ರಮೇಶ್ ರಾವ್ ಹೇಳಿದ್ದಾರೆ. ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ ಬುಧವಾರ 13 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿಕ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ಜೀವನ ನಡೆಯಲು ಸಾಧ್ಯವಿದೆ ಇಲ್ಲವಾದಲ್ಲಿ ಆಧುನಿಕ ಜಗತ್ತು ಪ್ಲಾಸ್ಟಿಕ್ ಅನ್ನ ಬಳಕೆ ಮಾಡುವ ಸ್ಥಿತಿ ಸೃಷ್ಠಿಯಾಗಬಹುದು. ಆದರೆ ಅಂತಹ ರೈತನ ಗೋಳು ಇಂದಿನ ಸರಕಾರ ಕೇಳದ ಸ್ಥಿತಿ ನಿರ್ಮಾಗೊಳಿಸಿದೆ.ಹೀಗಾದರೆ ಕೃಷಿ ಉಳಿಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.ರೈತ ಸಮುದಾಯ ಯಾವುದೇ ಬೆಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್ ಗಂಗೊಳ್ಳಿ ಪೊಲೀಸ್ ಠಾಣೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಗುರುವಾರ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂಜಾ ನಾಯ್ಕ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ತ್ವರಿತ ಹಾಗೂ ಸ್ನೇಹ ಪರವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಗಂಗೊಳ್ಳಿ ಠಾಣೆಯ ಅಗತ್ಯತೆಯನ್ನು ಮನಗಂಡು ರೋಟರಿ ಕ್ಲಬ್ ವತಿಯಿಂದ ಈ ಕೊಡುಗೆಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ರೋಟರಿ ಜಿಲ್ಲೆ ೩೧೮೨ರ ಝೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್, ರೋಟರಿ ಸದಸ್ಯರಾದ ಲಿಫ್ಟನ್ ಒಲಿವೇರಾ, ಪ್ರವೀಣ್, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 1970ರಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಅಭಿಮಾನದಿಂದ ಪತ್ರ ಬರೆದಿದ್ದರು. ’ಲತಾ’ ಅವರು ಶೆಣೈಯವರ ಸಂಗೀತಾಭಿಮಾನಕ್ಕೆ ಸಂತೋಷಗೊಂಡು ಪತ್ರದೊಂದಿಗೆ ಸಹಿ ಹೊಂದಿದ್ದ ತಮ್ಮ ಫೋಟೋ ಸಹ ಕಳುಹಿಸಿದ್ದರು. ಕುಂದಾಪುರದ ಶ್ರೀ ಗಣೇಶ್ ನೋವೆಲ್ಟಿಸ್ನ ಮಾಲಕರಾದ ಕೆ. ಜನಾರ್ಧನ ಶೆಣೈ ಹಲವು ಪ್ರಖ್ಯಾತ ಸಂಗೀತಗಾರರ ಪತ್ರ ಮತ್ತು ಛಾಯಾಚಿತ್ರ ಹೊಂದಿದ್ದು, ಲತಾ ಮಂಗೇಶ್ಕರ್ ಅವರ ಪತ್ರ ಮತ್ತು ಸಹಿ ಹಾಕಿದ ಫೋಟೋ ಐವತ್ತೆರಡು ವರ್ಷಗಳಿಂದ ಕಾಪಾಡಿಕೊಂಡು ಇಟ್ಟಿದ್ದಾರೆ.
