Author: ನ್ಯೂಸ್ ಬ್ಯೂರೋ

ದೀಪಕ್ ಶೆಟ್ಟಿ , ಕತಾರ್ | ಕುಂದಾಪ್ರ ಡಾಟ್ ಕಾಂ. ಲಾಕ್‌ಡೌನ್ ಬಳಿಕ ಮೊದಲನೇ ಬಾರಿಗೆ 178 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ದೋಹಾದಿಂದ ಮಂಗಳೂರಿಗೆ ಮುಟ್ಟಿದೆ. ಕಳೆದೆರಡು ತಿಂಗಳಿಂದ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಮಂಗಳೂರಿನವರಿಗೆ ಒಂದು ತಾತ್ಕಾಲಿಕ ನೆಮ್ಮದಿ. ಇಂದು ಪಯಣಿಸಿದ ಎಲ್ಲರ ಮೊಗದಲ್ಲೂ ದೀಪಾವಳಿ, ಈದ್, ಕ್ರಿಸ್ಮಸ್ ಹಬ್ಬ ಆಚರಿಸಿದಷ್ಟಷ್ಟೆ ಸಂಭ್ರಮ. 40ಕ್ಕೂ ಅಧಿಕ ಗರ್ಭಿಣಿ ಹೆಂಗಸರು, ವಯೋವೃದ್ಧರು , ವಿದ್ಯಾರ್ಥಿಗಳು , ವೈದ್ಯಕೀಯ ಚಿಕಿತ್ಸೆಗೆ ಹೋಗ ಬೇಕಾಗಿರುವವರು , ಆರ್ಥಿಕ ಹಿನ್ನೆಡೆಯಿಂದ ಅತಂತ್ರ ಪರಿಸ್ಥಿತಿಯಲ್ಲಿರುವ ನಿರುದ್ಯೋಗಿಗಳು, ಆನ್ ಅರೈವಲ್ ಹಾಗು ಫ್ಯಾಮಿಲಿ ವೀಸಾ ದಲ್ಲಿ ಬಂದು ಸಿಕ್ಕಿಕೊಂಡಿರುವವರು. ಹೀಗೆ 178 ಜನ ಇಂದು ತಮ್ಮ ಮಾತ್ರ ಭೂಮಿಗೆ ತಲುಪಿದ್ದಾರೆ.ಜೂನ್ 4 ರಂದು ಭಾರತದ ವಿದೇಶಾಂಗ ಸಚಿವಾಲಯದಿಂದ ಹೊರಬಿದ್ದ ವಂದೇ ಭಾರತ್ ಮಿಷನ್ 2ನೇಯ ಹಂತದ ಪಟ್ಟಿ ಬಿಡುಗಡೆಗೊಂಡಾಗ ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಶಾಕ್ ಆಗಿದ್ದಂತೂ ನಿಜ. ಅಪೇಕ್ಷೆಗೆ ಹಲವಾರು ಕಾರಣಗಳು ಇದ್ದವು. ಕತಾರ್ನಲ್ಲಿರುವ ಎಲ್ಲ ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗಡಿಭಾಗದಲ್ಲಿ ಚೀನಾದ ಕುಕೃತ್ಯದಿಂದಾಗಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಪುಷ್ಪಾರ್ಚನೆಗೈದು, ದೀಪನಮನದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೈಂದೂರು ಬೈಪಾಸ್ ಬಳಿಕ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್. ಮದನ್ ಕುಮಾರ್, ಕೆಪಿಸಿಸಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ, ಬ್ಲಾಕ್ ಕಾರ್ಯದರ್ಶಿ ನಾಗರಾಜ ಗಾಣಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಅಲ್ಪಸ್ಂಖ್ಯಾತರ ಘಟಕ ಅಧ್ಯಕ್ಷ ತಬ್ರೇಜ್ ನಾಗೂರು, ಮಂಜುನಾಥ ಪೂಜಾರಿ, ಗಣೇಶ ಪೂಜಾರಿ, ಉಮೇಶ ದೇವಾಡಿಗ, ಮಣಿಕಂಠ ದೇವಾಡಿಗ, ವಿಜಯ್ ನಾಗೂರು, ಸುಬ್ರಹ್ಮಣ್ಯ ಪೂಜಾರಿ ಉಪ್ಪುಂದ, ಪ್ರಕಾಶ್ ಪೂಜಾರಿ, ಲಕ್ಷಣ ಬೈಂದೂರು ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು. ಇದನ್ನೂ ಓದಿ: ► ಉಡುಪಿ ಕೊರೋನಾ ಅಪ್‌ಡೇಟ್: ಒಟ್ಟು 946 ಮಂದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.18ರ ಗುರುವಾರ ದೊರೆತಿರುವ ವರದಿಯಲ್ಲಿ ಯಾವುದೇ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. 27 ಪರೀಕ್ಷಾ ವರದಿ ನೆಗಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಇಂದು 38 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 92 ಸಕ್ರಿಯ ಪ್ರಕರಣಗಳು ಉಳಿದಂತಾಗಿದೆ. ಈವರೆಗೆ ಒಟ್ಟು 1039 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 946 ಮಂದಿ ಬಿಡುಗಡೆಯಾಗಿದ್ದು, 92 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಒಂದು ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ. ಓರ್ವ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆಗೆ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸಿಸರಿಯೇನ್ ಮಾಡಲಾಗಿತ್ತು. ಜಿಲ್ಲೆಯಲ್ಲಿ ಆರಂಭದಲ್ಲಿ 3 ಪಾಸಿಟಿವ್ ಪ್ರಕಣಗಳಿದ್ದು, ಎಲ್ಲರೂ ಗುಣಮುಖರಾಗಿದ್ದರು. ಹೊರ ರಾಜ್ಯದವರು ಜಿಲ್ಲೆಗೆ ಆಗಮಿಸುವ ಸಮಯದಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದ್ದು, ಜನರು ಆತಂಕ ಪಡುವಂತಾಗಿತ್ತು. ಆದರೆ ಅವರಲ್ಲಿ ಬಹುಪಾಲು ಮಂದಿಗೆ ಕೋವಿಡ್ ರೋಗದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ 4,470 ಪಿಯು ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿದ್ದು, ಪರೀಕ್ಷೆಗೂ ಮುನ್ನ ಉಷ್ಣಾಂಶ ಪರೀಕ್ಷೆ, ಮಾಸ್ಕ್, ಕೈ ತೊಳೆಯುವ ನೀರು ಹಾಗೂ ಸ್ಯಾನಿಟೈಸರ್ ಮುಂತಾದ ಮುನ್ನೆಚ್ಚರಿಕೆ ವಹಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಬಿಡಲಾಯಿತು. ಪರೀಕ್ಷಾ ಕೊಠಡಿಯಲ್ಲಿ ಒಂದು ಡೆಸ್ಕಿಗೆ ಇಬ್ಬರು ವಿದ್ಯಾರ್ಥಿಗಳಂತೆ ಒಂದು ಡೆಸ್ಕಿನಿಂದ ಮತ್ತೊಂದು ಡೆಸ್ಕ್ ಅಂತರದಲ್ಲಿ ವಿದ್ಯಾರ್ಥಿಗಳ ಕೂರಿಸಲಾಗಿತ್ತು. ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜ್, ಭಂಡಾರ್‌ಕಾರ‍್ಸ್ ಕಾಲೇಜ್, ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜ್, ಬೈಂದೂರು, ಶಿರೂರು, ನಾವುಂದ, ವಂಡ್ಸೆ, ಬಿದ್ಕಲ್‌ಕಟ್ಟೆ, ಕೋಟೇಶ್ವರ ಪದವಿಪೂರ್ವ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ವಿದ್ಯಾರ್ಥಿಗಳ ಕರೆತರಲು ಕೆಎಸ್ಸಾರ್‌ಟಿಸಿ ಬಸ್ ಬಿಟ್ಟಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಬೆಳಗ್ಗೆ ೯ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು, ತಮ್ಮ ಕೊಠಡಿ, ನಂಬರ್‌ಗಳ ಹುಡುಕಾಟದಲ್ಲಿ ತೊಡಗಿದ್ದು ಕಂಡುಬಂತು. ಮಾಸ್ಕ್ ಇಲ್ಲದೆ ಬಂದ ವಿದ್ಯಾರ್ಥಿಗಳು ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್ ವಿಕ್ರಯಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು, ಔಷಧ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಸ್ಕ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸುವುದು ಮಾಸ್ಕ್ ದಿನಾಚರಣೆ ಉದ್ದೇಶ. ಎಲ್ಲರೂ ಮಾಸ್ಕ್ ಧರಿಸಿದರಷ್ಟೇ ಸಾಲದು ಸ್ವಚ್ಛತೆ, ದೈಹಿಕ ಅಂತರ ಕಾಪಾಡಿಕೊಂಡರೆ ನಮ್ಮ ಆರೋಗ್ಯ ರಕ್ಷಣೆ ನಾವೇ ಮಾಡಿಕೊಳ್ಳಬಹುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅಭಿಪ್ರಾಯಪಟ್ಟರು. ಕುಂದಾಪುರ ಪುರಸಭೆ ಆಶ್ರಯದಲ್ಲಿ ಗುರುವಾರ ನಡೆದ ಮಾಸ್ಕ್ ದಿನಚರಣೆ ಜಾಥಕ್ಕೆ ಚಾಲನೆ ನೀಡಿ, ಆರಂಭದಲ್ಲಿ ಕರೋನಾ ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ನಂತರ ಬೇರೆ ರಾಜ್ಯದಿಂದ ಬಂದವರಲ್ಲಿ ಕರೋನಾ ಪಾಸಿಟೀವ್ ಕಾಣಿಸಿಕೊಂಡಿದ್ದರಿಂದ ಅತೀ ಹೆಚ್ಚು ಕರೋನಾ ಬಾಧಿತರ ಸಂಖ್ಯೆಯಲ್ಲೂ ಉಡುಪಿ ಮೊದಲ ಸ್ಥಾನಕ್ಕೇರಿತು. ಕರೋನಾ ಗುಣಮುಖರಾಗಿ ಹೋದವರಲ್ಲಿ ಕೂಡಾ ಉಡುಪಿ ಜಿಲ್ಲೆ ಮೊದಲ ಸ್ಥಾನದಿಲ್ಲದೆ. ಇದಕ್ಕೆ ಕಾರಣ ವಾರಿಯರ‍್ಸ್ ಹಾಗೂ ಸಮಾಜದ ಸಹಕಾರ ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ್ ಖಾರ್ವಿ, ಶ್ರೀಧರ ಶೇರುಗಾರ್, ಪ್ರಭಾಕರ ವಿ., ಸಂತೋಷ್ ಕುಮಾರ್ ಶೆಟ್ಟಿ, ಸಂದೀಪ್ ಖಾರ್ವಿ, ಕಮಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜೂ.18: ತರಕಾರಿ ಸಾಗಿಸುವ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಸಹಪ್ರಯಾಣಿಕ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಇಂದು ಮಂಜಾನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ 66ರ ಅಂಬಾಗಿಲು ಬಳಿ ಮುಂಜಾನೆ 6.30ರ ಸುಮಾರಿಗೆ ಅಪಘಾತ ನಡೆದಿದ್ದು, ಘಟನೆಯಲ್ಲಿ ಕುಂದಾಪುರ ತಾಲೂಕು ಹೇರಿಕೆರಿ ನಿವಾಸಿಗಳಾದ ದಿನೇಶ್ (35), ಮಂಜು (21) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಕೊಂಡುಕೊಳ್ಳಲು ಕುಂದಾಪುರದಿಂದ ಆದಿ ಉಡುಪಿಗೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಸಂತೆಕಟ್ಟೆಯ ಸ್ವಾಗತ ಕಮಾನಿಗೆ ಟೆಂಪೋ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದ ಗರ್ಭಿಣಿ ಮಹಿಳೆಗೆ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ. ಕೊರೋನಾ ಪಾಸಿಟಿವ್ ಬಂದಿದ್ದ 22 ವರ್ಷದ ಕಾರ್ಕಳ ಮೂಲದ ತುಂಬು ಗರ್ಭಿಣಿ ಮಹಿಳೆ ಜೂನ್ 17 ರಂದು ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ತುರ್ತು ಸಿಸೇರಿಯನ್ ಹೆರಿಗೆಗೆ ಒಳಗಾದರು. ಇಂದು ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗುವಿಗೆ ಕೊರೋನಾ ಪಾಸಿಟಿವ್ ಬಾರದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ತಾಯಿಯನ್ನು ಡಿಸ್ಚಾರ್ಜ್ ಮಾಡುವ ಸಂದರ್ಭ ಮಗುವಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನವಜಾತ ಶಿಶುವಿನ ಆರೈಕೆಯನ್ನು ಡಾ. ಆಶಿಶ್ ಗುಪ್ತಾ ಮತ್ತು ಡಾ.ಚೈತನ್ಯ ಅವರು ನೋಡಿಕೊಳ್ಳುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ತಾಯಿ-ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಮಗುವಿನ ಸುರಕ್ಷತೆ ಆದ್ಯತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.17ರ ಬುಧವಾರ ಒಟ್ಟು 4 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 3 ಪ್ರಕರಣಗಳು ಮುಂಬೈನಿಂದ ಹಿಂದಿರುಗಿದವರಾಗಿದ್ದು, ಒಂದು ಪ್ರಕರಣ ಈ ಹಿಂದೆ ಮುಂಬೈನಿಂದ ಬಂದಿದ್ದವರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ಈ ನಡುವೆ ಕೊರೋನಾ ಪಾಸಿಟಿವ್ ಇರುವ ಗರ್ಭಿಣಿ ಮಹಿಳೆಗೆ ಉಡುಪಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗುವಿಗೆ ಕೊರೋನಾ ಪಾಸಿಟಿವ್ ಬಾರದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 1039 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 908 ಮಂದಿ ಬಿಡುಗಡೆಯಾಗಿದ್ದು, 130 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಉಡುಪಿ: ಕೋವಿಡ್-19 ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ವೈದ್ಯರು – https://kundapraa.com/?p=38730 .…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಾಕಿ ಉಳಿದಿರುವ ಇಂಗ್ಲೀಷ್ ಪರೀಕ್ಷೆ ಜೂನ್ 18ರ ಗುರುವಾರ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕುಂದಾಪುರ ಕೆಎಸ್ಆರ್‌ಟಿಸಿ ಡಿಪೋದಿಂದ 45 ವಿಶೇಷ ಬಸ್‌ಗನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎಷ್ಟು ಬಸ್? ಭಟ್ಕಳ-5, ಬೈಂದೂರು – 2, ಉಪ್ಪುಂದ – 2, ಗೋಳಿಹೊಳೆ – 1, ಕೊಲ್ಲೂರು – 5, ಗಂಗೊಳ್ಳಿ – 6, ಕೆರಾಡಿ-1, ಆಲೂರು-1, ಸಿದ್ದಾಪುರ-3, ಹಳ್ಳಿಹೊಳೆ-2, ಹೊಸಂಗಡಿ-4, ಶೇಡಿಮನೆ-1, ಮಚ್ಚಟ್ಟು-2, ಬೇಳೂರು -1, ನೆಲ್ಲಿಕಟ್ಟೆ -1, ನೂಜಾಡಿ -1, ಹಾಲಾಡಿ-2, ಕೊಂಡಳ್ಳಿ-1, ಆವರ್ಸೆ-1, ಗೋಳಿಯಂಗಡಿ-1, ಕುಂದಾಪುರ-2 ಬಸ್ಗಳು ಸಂಚರಿಸಲಾಗಿದೆ. ಯಾವೆಲ್ಲ ರೂಟ್‌ನಲ್ಲಿ ಬಸ್ ಇರಲಿದೆ: ಭಟ್ಕಳ- ಬೈಂದೂರು, ಉಪ್ಪುಂದ – ನಾವುಂದ, , ಗೋಳಿಹೊಳೆ – ಕುಂದಾಪುರ, ಕೊಲ್ಲೂರು – ಕುಂದಾಪುರ, ಗಂಗೊಳ್ಳಿ – ಕುಂದಾಪುರ, ಕುಂದಾಪುರ – ಬೈಂದೂರು, ಗೋಳಿಯಂಗಡಿ- ಬಾರ್ಕೂರು, ಕೊಲ್ಲೂರು – ವಂಡ್ಸೆ, ಹೊಸಂಗಡಿ – ಬಿದ್ಕಲ್ಕಟ್ಟೆ, ಹಳ್ಳಿಹೊಳೆ –…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ರಾಜಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಂಗಳವಾರ ದೇವಸ್ಥಾನದ ರಾಜಗೋಪುರದ ದಾನಿ, ಉದ್ಯಮಿ ಯು. ಬಿ. ಶೆಟ್ಟಿ ಅವರು ಭೇಟಿ ನೀಡಿ ಕಾಮಗಾರಿಯ ಪ್ರಗತಿ ವೀಕ್ಷಿಸಿದರು. ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲೊಂದಾದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಪಾರ ಭಕ್ತವೃಂದವಿದೆ. ದೇವಸ್ಥಾನದ ರಾಜಗೋಪುರವು ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕಾಮಗಾರಿ ಇದೀಗ ಮತ್ತೆ ಭರದಿಂದ  ಸಾಗುತ್ತಿದೆ. ಈ ಸಂದರ್ಭ ಯು. ಬಿ. ಶೆಟ್ಟಿ ಅವರು ಇಂಜಿನಿಯರ್ ಅಶೋಕ್ ಅವರಿಂದ ಕಾಮಗಾರಿಯ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ► ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರಾಜಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆ – https://kundapraa.com/?p=35146 .

Read More