Author: ನ್ಯೂಸ್ ಬ್ಯೂರೋ

ಬೈಂದೂರು: ಸಮಾಜಮುಖಿ ಚಿಂತನೆಯ ಜೊತೆಗೆ ಕಷ್ಟದಲ್ಲಿರುವ ಬಡವರ, ಅಸಾಯಕರ, ರೋಗಿಗಳ, ಅಂಗವಿಕಲರ ಮುಖದಲ್ಲಿ ನಗು ಕಾಣಬೇಕಾದರೆ ನಾವು ಅಂತವರನ್ನು ಗುರುತಿಸಿ ತಕ್ಷಣ ಸ್ಪಂದಿಸಬೇಕು. ಇದಕ್ಕಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಎಂದು ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಶ್ರೀಧರ ಶೆಣವ ಹೇಳಿದರು. ಬೈಂದೂರು-ಉಪ್ಪುಂದ ಲಯನ್ಸ್ ಹಾಗೂ ಲಯನೆಸ್ ಕ್ಲಬ್‌ಗೆ ಪತ್ನಿ ಜ್ಯೋತಿ ಶೆಣವರೊಂದಿಗೆ ಅಧಿಕೃತ ಭೇಟಿ ನೀಡಿ, ಸಂಜೆ ನಾಗೂರು ಆಕಾಶ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. 210 ರಾಷ್ಟ್ರಗಳಲ್ಲಿ 14.58ಕ್ಷ ಸದಸ್ಯರನ್ನು ಹೊಂದಿದ ಸೇವಾ ಸಂಸ್ಥೆ ಈಗ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಶೇ.೬೫ರಷ್ಟು ಯುವಜನರನ್ನು ಹೊಂದಿದ ನಮ್ಮ ದೇಶದಲ್ಲಿ ಸೇವಾ ಮನೋಭಾವನೆಯಿರುವ ಯುವಕರನ್ನು ಕ್ಲಬ್‌ಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು. ಸಹೋದರತೆಯ ಮನೋಭಾವನೆಯಿಂದ ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಜೀವನ ಸಾಗಿಸುವಂತಾಗಬೇಕು ಎಂದರು. ಘಟಕದ ಅಧ್ಯಕ್ಷ ಜಿ.ಗೋಕುಲ್ ಶೆಟ್ಟಿ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಉಪ್ಪುಂದ ಮತ್ತು ಖಂಬದಕೋಣೆ ಸರಕಾರಿ ಪ್ರೌಢಶಾಲೆಗೆ ತಲಾ ರೂ. ಒಂದು ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್…

Read More

ಬೈಂದೂರು: ಜೀವನಾನುಭವವೆಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನವಾಗಿರುತ್ತದೆ. ಏನಾದರೂ ವಿಶೇಷವಾದುದನ್ನು ಸಾಧಿಸಬೇಕೆಂಬ ಛಲ ಇದ್ದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಎಲೆಮರೆಯ ಕಾಯಿಗಳಂತೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಹಿರಿಯರನ್ನು ಗೌರವಿಸಿ, ಅವರ ತತ್ವ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯಲ್ಲಿ ನಾಡದ ಕೊರಗರ ಕಾಲೋನಿಯ ಕೊರಗ ಸಮುದಾಯ ಭವನದಲ್ಲಿ ನಡೆದ ’ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಬೈಂದೂರು ಹೋಬಳಿ ಘಟಕದ ಅಧ್ಯಕ್ಷ ಡಾ. ಎನ್. ಸುಬ್ರಹ್ಮಣ್ಯ ಭಟ್ ಮಾತನಾಡಿ, ಆಧುನಿಕತೆಯ ಗುಂಗಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುವ ಆತಂಕದ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ನಮ್ಮ ಸಂಪ್ರದಾಯ, ಸಂಸ್ಕಾರಗಳು ಜೀವಂತವಾಗಿರುವುದು ಸಂತಸದ ವಿಚಾರ. ಸಾಧಕರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಅವರ ವಿಚಾರಧಾರೆ ಹಾಗೂ ಸಾಧನೆಯನ್ನು ದಾಖಲಿಸಬೇಕಾಗಿದೆ. ಇಂತಹ ಪ್ರಯತ್ನಗಳಿಂದ ಕನ್ನಡ ನಾಡು ನುಡಿಯನ್ನು ಸಂರಕ್ಷಿಸಿದಂತಾಗುತ್ತದೆ. ಮಾನವರೆಲ್ಲರೂ ಒಂದೇ ಎಂಬಂತಹ ಸರ್ವಸಮಾನತೆಯ ತಳಹದಿಯಲ್ಲಿ ನಾವೆಲ್ಲ…

Read More

ಬೈಂದೂರು: ಸಂಘಟನೆಯಿಂದ ಸಮುದಾಯದ ಸದಸ್ಯರ ಸಂಪರ್ಕ ಬೆಳೆದು ಪರಿಚಯದೊಂದಿಗೆ ಸಂಬಂಧ ಬೆಳೆಯಲು ಸಹಕಾರಿಯಾಗುತ್ತದೆ. ಮಹಿಳೆಯರು ಹೆಚ್ಚಿನ ಮುತುವರ್ಜಿಯಿಂದ ಸಂಘಟನೆಯಲ್ಲಿ ಪಾಲ್ಗೊಂಡು ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉಡುಪಿ ಸತೀಶ್ ಭಂಡಾರಿ ಹೇಳಿದರು. ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಭಂಡಾರಿ ಸಮಾಜ ಸಂಘದ ದ್ವಿತೀಯ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಘಟನೆಯನ್ನು ಬಲಪಡಿಸುವುದರ ಮೂಲಕ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಟಿವಿ, ಮೊಬೈಲ್‌ಗಳಿಂದ ಇಂದು ಮಕ್ಕಳ ಶಿಕ್ಷಣ ಹಾಳಾಗುತ್ತಿದೆ. ಇದರ ಬದಲಾಗಿ ಶಿಕ್ಷಣದ ಜೊತೆ ಸಾಹಿತ್ಯ, ಕಲೆ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ವಲಯದ ಅಧ್ಯಕ್ಷ ಬಾಬು ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ನಾಡಾ ಗ್ರಾಪಂ ಸದಸ್ಯೆ ಮನೋರಮಾ ರಾಜು ಭಂಡಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಕೋಡಿ ಕಿನಾರೆ ಬಳಿಯ ಮನೆಯೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಪ್ರೇರೆಪಿಸುತ್ತಿದ್ದಾರೆಂದು ಆರೋಪಿಸಿದ ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಕೆಲವರನ್ನು ವಶಕ್ಕೆ ಪಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕಳೆದ 2-3ತಿಂಗಳುಗಳಿಂದ ಹಿಂದೂ ಧರ್ಮಕ್ಕೆ ಸೇರಿದ ಕೆಲವು ವ್ಯಕ್ತಿಗಳನ್ನು ಕರೆದೊಯ್ದು ಕೋಡಿ ಕಿನಾರೆ ಸಮೀಪದ ಮನೆಯೊಂದರಲ್ಲಿ ಮತಾಂತರಕ್ಕೆ ಪ್ರೇರಣೆ ನಿಡುತ್ತಿದ್ದಾರೆಂಬ ಗುಮಾನಿ ಹೊಂದಿದ್ದ ಸ್ಥಳೀಯ ಕೆಲವು ಯುವಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ವಾರವಷ್ಟೇ ಮತಾಂತರದ ವಿಚಾರಕ್ಕೆ ಸಣ್ಣ ಗಲಾಟೆಯೂ ನಡೆದಿತ್ತೆನ್ನಲಾಗಿದೆ. ಆದರೂ ಇದನ್ನು ಲೆಕ್ಕಿಸದೇ ಇಂದು ಬೆಳಿಗ್ಗೆ ಓಮ್ನಿ ಕಾರಿನಲ್ಲಿ ಬಂದ ಕ್ರೈಸ್ತ ಧರ್ಮಕ್ಕೆ ಸೇರಿದ ಒಂದಿಬ್ಬರು ಯುವಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿ ವಾಸವಿರುವ ವಿಜಾಪುರದ ನಿವಾಸಿಗಳೆನ್ನಲಾದ ಕೆಲವರನ್ನು ಖಾಯಿಲೆ ಗುಣಪಡಿಸುವ ಆಮಿಷವೊಡ್ಡಿ ಕರೆದೊಯ್ಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಮತ್ತೊಂದು ತಂಡ ರಿಕ್ಷಾದಲ್ಲಿ ಕೋಡಿಗೆ ತೆರಳಿ ಅಲ್ಲಿ ನೆರೆದಿದ್ದ ಹಿಂದೂ…

Read More

ಕುಂದಾಪುರ: ಕುಂದಾಪುರದ ಸಂಸ್ಕೃತಿಯನ್ನು ಜಗದಗಲಕ್ಕೂ ಸಾರುವ ಸಲುವಾಗಿ ಕುಂದಾಪುರ ಮೂಲದ ತರುಣರಿಂದ ಹುಟ್ಟಿಕೊಂಡ ಕಾಣಿ ಸ್ಟುಡಿಯೋ ತಂಡ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ತಾಣಗಳಲ್ಲಿ ಗುರುತಿಸಿಕೊಂಡಿತ್ತು. ಇಲ್ಲಿನ ಭಾಷೆ, ಕಲೆ, ಜೀವನ ಶೈಲಿ, ಸಂಸ್ಕೃತಿಗೆ ಹೊಸ ಕಲ್ಪನೆಯೊಂದಿಗೆ ಬಣ್ಣ ನೀಡುತ್ತಿರುವ ಕಾಣಿ ಸ್ಟುಡಿಯೋ ಹುಡುಗರ ತಂಡ ಡಿಸೈನ್, ನಿರ್ವಹಣೆ, ನೆಟ್‌ವರ್ಕಿಂಗ್ ಮತ್ತು ಫಲಿತಾಂಶ ಹೀಗೆ ಮೂರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತೀರುವಹಿಸುತ್ತಿದೆ. ಈಗ ಕೋಟೇಶ್ವರ ಕೊಡಿ ಹಬ್ಬದಲ್ಲಿ ಸೆಲ್ಫಿ ಹಬ್ಬ ಎನ್ನುವ ಹೆಸರಿನೊಂದಿಗೆ ನವದಂಪತಿಗಳು, ಕುಟುಂಬ, ಸ್ನೇಹಿತರು, ಕೊಡಿ ಹಬ್ಬ ಸಂಭ್ರಮ, ಆಚರಣೆ ಗಮನದಲ್ಲಿಟು ಸೆಲ್ಫಿ ಪೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಿದ್ದಾರೆ. ಕಾಣಿ ಸ್ಟುಡಿಯೋ ಆಯೋಜಿಸಿರುವ ಕೋಟೇಶ್ವರ ಕೊಡಿ ಹಬ್ಬದಲ್ಲಿ ಸೆಲ್ಫಿ ಸ್ವರ್ಧೆಗೆ ಕೋಟೇಶ್ವರ ರೋಟರಿ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಕೆನರಾ ಕಿಡ್ಸ್, ರಾಮನಾಥಗೋಳಿಕಟ್ಟೆ ಫ್ರೆಂಡ್ಸ್, ಹಾಗೂ ಐಶ್ವರ್ಯ ಸ್ಟೂಡಿಯೋ ಸಾಥ್ ನೀಡಿದೆ. ಇನ್ನು ಕೊಡಿ ಹಬ್ಬಕ್ಕೆ ಬಂದು ಹಾಗೇ ಹೊಗಬೇಡಿ. ಸೆಲ್ಫಿ ಹೇಗೆ ಬರುತ್ತೆ ಅಂತ ಕಾಣಿ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಸೆಲ್ಫಿ ತೆಗೆದು ಕಳುಹಿಸುವುದು ಹೇಗೆ?: ನಿಮ್ಮ ಫೇಸ್‌ಬುಕ್ ಅಂಕೌಟ್‌ನಲ್ಲಿ Add Photos ಕ್ಲಿಕ್ ಮಾಡಿ…

Read More

ಕೊಲ್ಲೂರು,ಅ.22: ನವರಾತ್ರಿ ಹಾಗೂ ವಿಜಯದಶಮಿಯ ಪ್ರಯುಕ್ತ ಕೊಲ್ಲೂರಿಗೆ ಆಗಮಿಸಿದ ನೂರಾರು ಭಕ್ತಾದಿಗಳು ಇಂದು ಬೆಳಿಗ್ಗೆ ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಮುಂಜಾನೆ 4:30ರಿಂದಲೇ ಆರಂಭಗೊಂಡು ಮಧ್ಯಾಹ್ನದವರೆಗೆ ನಡೆದ ಅಕ್ಷರಾಭ್ಯಾಸದಲ್ಲಿ 2000ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆತ್ತವರೊಂದಿಗೆ ಪಾಲ್ಗೊಂಡಿದ್ದರು. ಇದರಲ್ಲಿ ಬಹುತೇಕ ಮಂದಿ ಕೇರಳಿಗರು. ವರ್ಷದಿಂದ ವರ್ಷಕ್ಕೆ ಈ ಅಕ್ಷರಾಭ್ಯಾಸಕ್ಕೆ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕೊಲ್ಲೂರು ದೇವಾಲಯದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಸಾಲಾಗಿ ಹೆತ್ತವರ ತೊಡೆಯ ಮೇಲೆ ಕುಳಿತ ಎಳೆಯ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ನಂತರ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಬರೆಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. (ಕುಂದಾಪ್ರ ಡಾಟ್ ಕಾಂ ವರದಿ) ನವಾನ್ನಪ್ರಾಶನ: ಈ ದಿನ ಎಳೆಯ ಕಂದಮ್ಮಗಳಿಗೆ ಪ್ರಥಮ ಬಾರಿಗೆ ಅನ್ನ…

Read More

ಬೈಂದೂರು: ಇಲ್ಲಿನ ಸುರಭಿ ಕಲಾಶಾಲೆಯ ಆಶ್ರಯದಲ್ಲಿ ಸ್ಥಳೀಯ ಆಶ್ರಮಶಾಲೆಯಲ್ಲಿ ಐದು ದಿನಗಳ ರಂಗಕಲಾ ಕಮ್ಮಟಕ್ಕೆ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸಾಹಿತ್ಯದಲ್ಲಿ ಒಬ್ಬ ವ್ಯಕ್ತಿಯ ಸೃಜನಶೀಲತೆ ಪ್ರಕಟಗೊಳ್ಳುತ್ತದಾದರೆ ರಂಗಕಲೆಯಲ್ಲಿ ಹಲವರ ಸೃಜಶೀಲತೆ ಮೇಳೈಸುತ್ತದೆ. ರಂಗಕಲೆಗೆ ಸಾಹಿತ್ಯದ ಮಿತಿಗಳನ್ನು ದಾಟುವ ಸಾಮರ್ಥ್ಯ ಇದೆ. ಅದು ಹೆಚ್ಚು ಶಕ್ತಿಶಾಲಿಯಾಗಿ ಪ್ರೇಕ್ಷಕರನ್ನು ತಲಪುತ್ತದೆ ಎಂದರು. ಕಮ್ಮಟದ ನಿರ್ದೇಶಕ ಉತ್ತರ ಕನ್ನಡದ ’ಚಿಂತನ’ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ, ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಮಾತನಾಡಿ ರಂಗಕಲೆಯ ಪ್ರಕ್ರಿಯೆಗಳನ್ನು ಬಳಸಿಕೊಂಡರೆ ಶಿಕ್ಷಣ ಹೆಚ್ಚು ಪರಿಣಾಮಕಾರಿಯೂ, ಆನಂದದಾಯಕವೂ ಆಗುತ್ತದೆ. ಅದೇ ಕಾರಣಕ್ಕಾಗಿ ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣದಲ್ಲಿ ರಂಗಕಲೆ ಬಳಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ. ಅದರ ಯಶಸ್ವಿ ಪ್ರಯೋಗಗಳು ಹಲವೆಡೆ ನಡೆದಿವೆ ಎಂದರು. ಬೈಂದೂರಿನ ಹಿರಿಯ ರಂಗ ಕಲಾವಿದರು, ಶಿಕ್ಷಕರು, ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ವಂದಿಸಿದರು.

Read More

ಕುಂದಾಪುರ: ಇಲ್ಲಿನ ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಆಶ್ರಯದಲ್ಲಿ ಅ.೨೬ ಸಂಜೆ ೪ಗಂಟೆಗೆ ಯಡ್ತರೆ ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಲಿದೆ. ಸಮಾರಂಭವನ್ನು ಹಿರಿಯ ಉದ್ಯಮಿ ಆರ್. ಎನ್. ಶೆಟ್ಟಿ ಬೆಂಗಳೂರು ಉದ್ಘಾಟಿಸಲಿದ್ದು ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಎಂದು ಟ್ರಸ್ಟ್ ನ ಪ್ರಮುಖ ಅಪ್ಪಣ್ಣ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಈ ಭಾರಿ ಅಬುದಾಬಿಯ ಖ್ಯಾತ ಉದ್ಯಮಿ ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಎ.ಜಿ. ಕೊಡ್ಗಿ, ನಿಟ್ಟೆ ವಿವಿ ಕುಲಾಧಿಪತಿ…

Read More

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಅಕ್ಟೋಬರ್ ತಿಂಗಳ ಕಾರ್ಯಕ್ರಮವಾಗಿ ದಿ.ಯಜ್ಞನಾರಾಯಣ ಐತಾಳ್‌ರ ಸುಪುತ್ರರಾದ ಮಧುಸೂದನ ಐತಾಳ್ ಹಾಗೂ ರಾಮಕೃಷ್ಣ ಐತಾಳ್‌ರ ಪ್ರಾಯೋಜಕತ್ವದಲ್ಲಿ ಅ.೧೮ರಂದು ಶ್ರೀಮತಿ ವರದಾ ಮಧುಸೂದನ ಐತಾಳ್‌ರ ನೇತೃತ್ವದ ಶ್ರೀ ಸಾಯಿ ಕಲಾ ಪ್ರತಿಷ್ಠಾನ ಶಿವಮೊಗ್ಗ ಇವರಿಂದ ದಕ್ಷ ಯಜ್ಞ ಮಹಿಳಾ ಯಕ್ಷಗಾನ ಜರುಗಿತು. ದಿ.ಯಜ್ಞನಾರಾಯಣ ಐತಾಳ್‌ರ ಸವಿ ನೆನಪಿಗಾಗಿ ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀಮತಿ ಎಂ.ಎಂ. ಕ್ರಾಸ್ತಾ ಹಾಗೂ ಉಪ್ಪಿನಕುದ್ರು ರಮೇಶ್ ಐತಾಳ್‌ರನ್ನು ಸನ್ಮಾನಿಸಿದರು. ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರು ಕಾರ್ಯಕ್ರಮದ ಪ್ರಾಯೋಜಕರಾದ ಮಧುಸೂದನ ಐತಾಳ್ ಹಾಗೂ ರಾಮಕೃಷ್ಣ ಐತಾಳ್‌ರನ್ನು ಗೌರವಿಸಿದರು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಟಿ.ಎನ್.ಪ್ರಭು ತಲ್ಲೂರು ಉಪಸ್ಥಿತರಿದ್ದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿದ್ದರು.

Read More

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಶಾರದೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಬೈಂದೂರು: ಉತ್ಸವಗಳು ಪ್ರಕೃತಿ, ಸಂಸ್ಕೃತಿ, ಪರಂಪರೆ ಹಾಗೂ ಬಾಂಧ್ಯವ್ಯನನ್ನು ಗಟ್ಟಿಗೊಳಿಸುವುದರೊಂದಿಗೆ ನಮ್ಮೊಳಗಿನ ರಾಕ್ಷಸೀತನವನ್ನು ಹೋಗಲಾಡಿಸಿ ಮಾನವೀಯತೆಯನ್ನು ಹೊರತರಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ ಎಂದು ಉಪ್ಪುಂದ ಓಂಗಣೇಶ್ ಕಾಮತ್ ಅಭಿಪ್ರಾಪಟ್ಟರು. ಬೈಂದೂರು ಶ್ರೀಸೇನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. [quote bgcolor=”#ffffff” arrow=”yes” align=”right”]* ಜಾತಿ-ಧರ್ಮಗಳ ವಿಷಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಕದಡುವ ಇಂದಿನ ದಿನಗಳಲ್ಲಿ ಇಂತಹ ಉತ್ಸವಗಳ ಮೂಲಕ ಸೌಹಾರ್ದತೆಯ ಸಂದೇಶ ನೀಡುವ ಮೂಲಕ ನಮ್ಮೊಳಗಿನ ಬಾಂದವ್ಯ ಗಟ್ಟಿಗೊಳಿಸಬೇಕು.- ರಂಗಕರ್ಮಿ ಬಿ. ಗಣೇಶ ಕಾರಂತ್ ಬೈಂದೂರು[/quote] ಮಾಗಿದ ಮೇಲೆ ಬಾಗುವುದು ಪ್ರಕೃತಿ ನಿಯಮ. ಆದರೆ ಈಗಿನ ಕಾಲಘಟ್ಟದಲ್ಲಿ ಮಾಗಿದ ಮೇಲೆ ಬೀಗುವುದನ್ನು ಕಾಣುತ್ತೇವೆ. ತ್ಯಾಗಕ್ಕೆ ಯಾರು ಆದರ್ಶ ಹಾಗೂ ಮಾದರಿಯಾಗಿರುವರೋ ಅವರು ’ಯಜಮಾನ’ ಅನ್ನಿಸಿಕೊಂಡರೆ ನಮ್ಮೊಳಗಿನ ಕೆಟ್ಟವಿಚಾರಗಳನ್ನು ಕಳೆದುಕೊಳ್ಳಲು ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲು ಇರುವ ಸ್ಥಳ ’ದೇವಸ್ಥಾನ’ ಎಂದರು.…

Read More