ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೊವಾಡಿಯ ಹಿರಿಯ ಪ್ರಾಥಮಿಕ ಶಾಲೆಯ 1997-98 ರ ಸಾಲಿನ ವಿದ್ಯಾರ್ಥಿಗಳು ಕೊಡಮಾಡಿದ ಎರಡು ಕಂಪ್ಯೂಟರ್‌ಗಳನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅನಂತ ಮೊವಾಡಿ ಮಾತನಾಡಿ ಶಾಲೆಯ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಹಳೆ ವಿದ್ಯಾರ್ಥಿಗಳ ಈ ತೆರನಾದ ಕೊಡುಗೆ ಎಲ್ಲರಿಗೂ ಮಾದರಿಯಾಗಿರಲಿ. ಸಮಾಹದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗುವಂತಾಗಲಿ ಎಂದು ಹೇಳಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರಾದ ಸಂಧ್ಯಾ ಕಾರಂತ ಅಧ್ಯಕ್ಷ ತೆ ವಹಿಸಿದ್ದರು. ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶೇಖರ ಗಾಣಿಗ, ಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ಐತಾಳ್, ಹಕಲೆ ವಿದ್ಯಾರ್ಥಿಗಳ ಪರವಾಗಿ ಮೆಸ್ಕಾಂನ ಎ.ಇ. ಶಶಿರಾಜ್, ಭರತ್ ಆಚಾರ್ಯ ಎಸ್ ಡಿ ಎಮ್ ಸಿ ಸದಸ್ಯರು, ಶಿಕ್ಷಕರು , 1997-98 ಸಾಲಿನ ಹಳೆ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶರಾವತಿ ವಂದಿಸಿದರು. ಸಹಶಿಕ್ಷಕ ದೇವದಾಸ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿ, ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣ ಅತ್ಯವಶ್ಯವಾಗಿದೆ. ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದ ಕಾಣುವಂತಾಗಬೇಕು. ಇದು ಭಜನೆಯಿಂದ ಮಾತ್ರ ಸಾಧ್ಯ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಬೈಂದೂರು ವತ್ತಿನೆಣೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಅಷ್ಟಬಂಧ ಪುನಃಪ್ರತಿಷ್ಠೆ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಅಖಂಡ ಭಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಹಿಂದು ಧರ್ಮದಲ್ಲಿ ಭಜನೆಗೆ ಹೆಚ್ಚಿನ ಮಹತ್ವವಿದೆ. ಅನೇಕ ದಾಸವರೇಣ್ಯರು ಕೂಡ ಭಜನೆ ಮೂಲಕ ಸದ್ಗತಿ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ವಿವಿಧ ರೀತಿಯಲ್ಲಿ ದೇವರ ಸ್ಮರಣೆ ಮಾಡುತ್ತಿರಬೇಕು. ದೇವರ ಸೇವೆ, ಭಜನೆಯನ್ನು ಭಕ್ತಿಯಿಂದ ಮಾಡಿದರೆ ಫಲ ಪ್ರಾಪ್ತಿಯಾಗುತ್ತದೆ. ದೇವರ ವಿಸ್ತಾರವನ್ನು ಅರಿತುಕೊಂಡು ಹಾಗೂ ಉಪಕರಣಗಳ ಜತೆಗೆ ಅಂತಃಕರಣದಿಂದ ಭಜಿಸಿದಾಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 2020-25ರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ, ಪಡುಕೋಣೆ ಆಯ್ಕೆಯಾದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.೧೫ರಂದು ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಬಸ್ರೂರು, ಜೇಕಬ್ ಡಿ’ಸೋಜ, ಕುಂದಾಪುರ, ವಿನೋದ್ ಕ್ರಾಸ್ಟೊ, ಕುಂದಾಪುರ, ಬ್ಯಾಪ್ಟಿಸ್ಟ್ ಡಾಯಸ್, ಸಂತೆಕಟ್ಟೆ, ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ, ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ, ಶಾಂತಿ ಡಾಯಸ್, ಬೈಂದೂರು, ಪ್ರಕಾಶ್ ಲೋಬೊ, ಗಂಗೊಳ್ಳಿ, ವಿಲ್ಸನ್ ಡಿ’ಸೋಜ, ಶಿರ್ವಾ, ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಕಾರ್ಕಳ, ಓಝ್ಲಿನ್ ರೆಬೆಲ್ಲೊ, ತಲ್ಲೂರು, ವಿಲ್ಫ್ರೇಡ್ ಮಿನೇಜಸ್, ಹಂಗಳೂರು, ತಿಯೋದರ್ ಒಲಿವೆರಾ, ಕೋಟಾ, ಟೆರೆನ್ಸ್ ಸುವಾರಿಸ್, ಉಡುಪಿ, ಡೆರಿಕ್ ಡಿ’ಸೋಜ, ಸಾಸ್ತಾನ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ’ ಸುದ್ದಿ. ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಗುರುಪ್ರಸಾದ ರಾಜ್ಯ ಸರಕಾರಿ ನೌಕರರಿಗಾಗಿ ಎರ್ಪಡಿಸಿದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಾದ್ಯಸಂಗೀತದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಗಿರುತ್ತಾರೆ ಹಾಗೂ ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ವಿದ್ವಾನ್ ಅಲೆವೂರು ಸುಂದರ ಸೇರಿಗಾರ್ ಅವರ ಶಿಷ್ಯರಾಗಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಮನೆ ಹಂತದಲ್ಲಿ ತ್ಯಾಜ್ಯ ವಿಂಗಡನೆ ಹಾಗೂ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ನನ್ನ ಕಸ ನನ್ನ ಜವಾಬ್ದಾರಿ ಅಥವಾ ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ ಎಂಬ ವಿಷಯದ ಕುರಿತು ಸ್ವಚ್ಛ ಭಾರತ-ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಬಂಧನೆಗಳು: ಸ್ವಚ್ಛ ಭಾರತ್- ಕಿರುಚಿತ್ರ ಸ್ಪರ್ಧೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಇವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಆಸಕ್ತರಿಗೆ ಮುಕ್ತ ಅವಕಾಶವಿದೆ. ಕಿರುಚಿತ್ರವನ್ನು ತುಳು, ಕನ್ನಡ ಅಥವಾ ಆಂಗ್ಲಬಾಷೆಯಲ್ಲಿ ಮಾಡಬಹುದು. ಕಿರುಚಿತ್ರದ ಗರಿಷ್ಟ ಅವಧಿಯು ೩ ನಿಮಿಷಗಳಾಗಿದ್ದು, ಕಿರುಚಿತ್ರವನ್ನು ಮಾರ್ಚ್ ೧ ಒಳಗಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಿಲ್ಲಾ ಪಂಚಾಯತ್, ಉಡುಪಿ ರಜತಾದ್ರಿ, ಮಣಿಪಾಲ ಇಲ್ಲಿಗೆ (ಡಿವಿಡಿ/ ಯುಎಸ್‌ಬಿ ಡ್ರೈವ್ ಓನ್ಲೀ) ಸಲ್ಲಿಸಬೇಕು, ನಂತರ ಬಂದ ಕಿರುಚಿತ್ರಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಭಾಸ್ಕರ್ ಅಮೀನ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಭಿವೃದ್ಧಿಯ ಅವಶ್ಯಕತೆಯ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ರಾಜೇಂದ್ರ ನಾಯಕ್ ಮಾತನಾಡಿ ವರು ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿರುವ ಉದ್ಯೋಗವಕಾಶಗಳು ಮತ್ತು ಉದ್ಯೋಗ ಸಾಮರ್ಥ್ಯದ ನಡುವಿನ ಅಂತರವನ್ನು ಕಡಿಮೆ ಮಾಡಿ ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕಾದರೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಗತ್, ಆಪ್ತ ಸಮಾಲೋಚಕರು ಮತ್ತು ತರಬೇತುದಾರರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಸ್.ಡಬ್ಲ್ಯೂ.ಒ ಡಾ. ಉಷಾದೇವಿ ಜೆ.ಎಸ್, ಐ.ಕ್ಯು.ಎ.ಸಿ ಸಂಚಾಲಕರಾದ ಗಣೇಶ ಪೈ ಎಂ., ಉದ್ಯೋಗ ಮಾರ್ಗದರ್ಶನ ಅಧಿಕಾರಿಗಳಾದ ಡಾ ಸುಬ್ರಮಣ್ಯ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಪೋರೇಟ್ ಕಂಪೆನಿಗಳು ದೇಶದ ಕೃಷಿ ಕ್ಷೇತ್ರವನ್ನು ಆಳುತ್ತಿವೆ. ಆಧೂ ಕೃಷಿಯ ಬೀಜ, ಗೊಬ್ಬರ, ನೀರು, ಮಾರುಕಟ್ಟೆ, ಸಾರಿಗೆ ಹೀಗೆ ಎಲ್ಲದರ ಹಿಡಿತ ಸಾಧಿಸಿದ್ದು, ರೈತನ ಶ್ರಮಕ್ಕೆ ತಕ್ಕಂತೆ ಬೆಲೆ ನಿರ್ಧರಿಸುವ ಹಕ್ಕನ್ನೇ ಕಸಿದುಕೊಂಡಿವೆ ಎಂದು ಮ್ಯಾಗ್ಸೇಸೆ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು. ಅವರು ಕುಂದಾಪುರದ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಸಮುದಾಯ ಕುಂದಾಪುರದ ಆಶ್ರಯದಲ್ಲಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ’ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ ರೈತರಿಗಾಗಿ ಇರಬೇಕಾದ ಕೃಷಿ ವಿಶ್ವವಿದ್ಯಾಲಯಗಳು ಇಂದು ಬಂಡವಾಳ ನೀಡುವ ಕಾರ್ಪೋರೇಟ್ ವಲಯದ ಪರವಾಗಿರುವುದರಿಂದಾಗಿ ವಿಶ್ವವಿದ್ಯಾಲಯಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದರು. ದೇಶದಲ್ಲಿ ಉದಾರೀಕರಣ ನೀತಿಯ ಬಳಿಕ ರೈತಾಪಿ ವರ್ಗದ ಸ್ಥಿತಿ ದೈನಸಿ ಸ್ಥಿತಿ ಬಂದು ನಿಂತಿದೆ. ರೈತಾಪಿ ವರ್ಗ ಪರಿಸ್ಥಿತಿಯ ಒತ್ತಡದಿಂದಾಗಿ ಪರಾವಿಲಂಭಿಗಳಾಗುತ್ತಿದ್ದಾರೆ. ಬೀಜ, ರಸಗೊಬ್ಬರ, ವಿದ್ಯುತ್, ನೀರು ಸೇರಿದಂತೆ ಕೃಷಿಕರ ಅಗತ್ಯತೆಗಳ ಬೆಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯದ ವಿವಿಧ ಎ ದರ್ಜೆಯ ದೇವಾಲಯಗಳಲ್ಲಿ ಮುಜರಾಯಿ ಇಲಾಖೆವತಿಯಿಂದ ಏಪ್ರಿಲ್ ೨೬ ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸಲಗುವುದು ಎಂದು ರಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಕೊಲ್ಲೂರು ನಲ್ಲಿ ಸಾಮೂಹಿಕ ಸರಳ ವಿವಾಹ ಕುರಿತು ನಡೆದ ಸಭೆಯಲ್ಲಿ ಮಾತನಾಡಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತಂತೆ ರಾಜ್ಯದ ಎಲ್ಲಾ ಸಂಸದರು, ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ , ನಗರಸಭೆ ಗಳ ಅಧ್ಯಕ್ಷರು ಉಪಾಧ್ಯಕರಿಗೆ ವೈಯಕ್ತಿಕವಾಗಿ ಪತ್ರ ಬರೆದು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಹಕರ ನೀಡುವಂತೆ ಕೋರಲಾಗಿದೆ, ಎಲ್ಲರೂ ಪಕ್ಷ ಬೇಧ ಮರೆತು ಕಾರ್ಯಕ್ರಮ ಆಯೋಜಿಸುವಂತೆ ಕೋರಲಾಗಿದೆ ಎಂದು ಸಚಿವ ಕೋಟ ತಿಳಿಸಿದರು. ಈ ಸಾಮೂಹಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಡಾ. ಹೆಚ್. ಶಾಂತಾರಾಮ್ ವಾಚನ ಪ್ರಶಸ್ತಿಯನ್ನು ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಮತ್ತು ವ್ಯಾಖ್ಯಾನ ಪ್ರಶಸ್ತಿಯನ್ನು ಡಾ.ಜ್ಯೋತಿ ಶಂಕರ್, ಮೈಸೂರು ಇವರಿಗೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಆಡಳಿತಾಧಿಕಾರಿ ಹೆಚ್. ಶಾಂತಾರಾಮ್ ಅವರು ಪ್ರದಾನ ಮಾಡಿದರು. ಬಳಿಕ ಅವರು ಮಾತನಾಡಿ ಗಮಕ ಕಲೆ ಮಾನವತ್ವದಿಂದ ದೈವತ್ವದೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಹಾಗೆ ಶಿಕ್ಷಣವೂ ಸಹ ಒಳ್ಳೆಯ ದಾರಿಯತ್ತ ಕರೆದುಕೊಂಡು ಹೋಗುತ್ತದೆ. ಶಿಕ್ಷಣ ಕೇವಲ ವೃತ್ತಿಯಲ್ಲ ಅಥವಾ ಕಲಿಯುವಿಕೆಯಲ್ಲ್. ವ್ಯಕ್ತಿತ್ವ ವಿಕಸನನದ ಸೆಲೆಯಾಗಿದೆ. ಶಿಕ್ಷಣ ನಿಜವಾದ ಜೀವನ ಶಿಕ್ಷಣವನ್ನು ಬೆಳೆಸಬೇಕು. ಇದನ್ನು ಅರಿಯಬೇಕೆಂದರೆ ಅದಕ್ಕೆ ಸಾಧನವಾದ ಇಂತಹ ಸಾಂಸ್ಕೃತಿಕ ಕಲೆಗಳ ಅರಿವು ಇರಬೇಕು. ಇದನ್ನು ವಿದ್ಯಾರ್ಥಿಗಳು ತಿಳಿಯಬೇಕು. ಅಲ್ಲದೇ ಅರಿಯುವ ಪ್ರಯತ್ನ ಮಾಡಬೇಕು. ಹಾಗೆಯೇ ವಿದ್ಯಾರ್ಥಿಗಳು ಗಮಕ ಕಲೆಯನ್ನು ಪರಿಶ್ರಮ ಪಟ್ಟು ಕಲಿಯಲಿ. ಮತ್ತು ಗಮಕವನ್ನು ಕಲೆಯನ್ನು ಕಲಿಸುವವರು ಮುಂದೆ ಬರಬೇಕು ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತ ಹೆಚ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ನಾಗೂರಿನ ಕುಸುಮ ಫೌಂಡೇಶನ್ ನಡೆಸುತ್ತಿರುವ ಬ್ಲಾಸಂ ಸಂಗೀತ ನೃತ್ಯ ಶಾಲೆಯ ಫೆಬ್ರವರಿ ತಿಂಗಳ ’ಗಾನಯಾನ-5’ ಕಾರ್ಯಕ್ರಮದಲ್ಲಿ ಸಂಗೀತದ ಬದಲು ಶ್ರೋತೃಗಳಿಗೆ ಹಿಂದೂಸ್ಥಾನಿ ಸಂಗೀತವನ್ನು ಪರಿಚಯಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಭಾನುವಾರದ ಈ ಕಾರ್ಯಕ್ರಮದಲ್ಲಿ ಹಾಜರಿದ್ದವರು ಹೆಚ್ಚು ಆಸಕ್ತರೂ, ಸಹೃದಯಿ ಶ್ರೋತೃಗಳೂ ಆಗಬೇಕೆನ್ನುವುದು ಅದರ ಉದ್ದೇಶವಾಗಿತ್ತು. ಗೋಪಾಡಿಯಲ್ಲಿ ನೆಲೆಸಿ ಗುರುಪರಂಪರಾ ಸಂಗೀತ ಪ್ರತಿಷ್ಠಾನದ ಆಶ್ರಯದಲ್ಲಿ ಸಂಗೀತ ಕಲಿಸುತ್ತಿರುವ, ಪಂ. ಗಣಪತಿ ಭಟ್ ಹಾಸಣಗಿ ಅವರ ಶಿಷ್ಯರೂ, ಆಕಾಶವಾಣಿ ಗ್ರೇಡ್ ಕಲಾವಿದರೂ ಆಗಿರುವ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ಮಾಳಕೊಪ್ಪ ದಂಪತಿ ತಮ್ಮ ಹಿರಿಯ ಕಿರಿಯ ಶಿಷ್ಯರನ್ನು ಕೂಡಿಕೊಂಡು ಸಂಗೀತದ ವಿವಿಧ ಮಜಲು ಮತ್ತು ಆಯಾಮಗಳನ್ನು ಶ್ರೋತೃಗಳ ಮುಂದೆ ತೆರೆದಿಟ್ಟರು. ಜತೀಂದ್ರ ಮರವಂತೆ ಮತ್ತು ಗುರುದಂಪತಿಯ ನಡುವಿನ ಸಂವಾದ ಮತ್ತು ವಿಷಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಹಾಡುಗಾರಿಕೆ, ಶಶಿಕಿರಣ ಮಣಿಪಾಲ ಅವರ ತಬಲಾ ವಾದನದ ಮೂಲಕ ನಡೆದ ಕಾರ್ಯಕ್ರಮ ಸೇರಿದ್ದ ಸಂಗೀತಾಸಕ್ತರ ಕುತೂಹಲ ಮತ್ತು ಜಿಜ್ಞಾಸೆ ತಣಿಸಿ…
