ಗಂಗೊಳ್ಳಿ: ಬಾಲ್ಯ ವಿವಾಹ ಮತ್ತು ಅದರಿಂದಾಗುವ ದುಷ್ಪರಿಣಾಮಗಳೇನು ಎನ್ನುವುದರ ಬಗೆಗಿನ ಪ್ರಾಥಮಿಕ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ಮತ್ತು ಆ ಕುರಿತಾದ ಕಾನೂನು ಜಾಗೃತಿಯನ್ನು ಸಮಾಜದ ಎಲ್ಲಾ ವರ್ಗದ ಜನರಲ್ಲೂ ಮೂಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ವಕೀಲ ಉಮೇಶ್ ಶೆಟ್ಟಿ ಅವರು ಹೇಳಿದರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಸೇವಾ ಯೋಜನೆ ಕುಂದಾಪುರ,ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯವಿವಾಹ ನಿಷೇಧ ಕುರಿತಂತೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯಕ ಅವರು ಬಾಲ್ಯ ವಿವಾಹ ನಿಷೇಧದ ಕುರಿತಂತೆ ವಿವರವಾದ ಮಾಹಿತಿಯನ್ನು ನೀಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಘವೇಂದ್ರ ಭಟ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕಾರ್ಮಿಕರ ಬದುಕು ಕಸಿಯುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಬೀಡಿ ಕಾರ್ಮಿಕರ ನಿಯೋಜಿತ ಹಕ್ಕೊತ್ತಾಯಗಳ ಜೊತೆಗೆ ಕುಂದಾಪುರ ತಾಲೂಕಿನ ಬೀಡಿ ಕಾರ್ಮಿಕರು ಕುಂದಾಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬೀಡಿ ಉದ್ಯಮ ಪಾರಂಪರಿಕ ಕೈಗಾರಿಕೆಯಾಗಿದ್ದು, ರಾಜ್ಯದಲ್ಲಿ ಬೀಡಿ ಕಾರ್ಮಿಕರು ತಂಬಾಕು ಬೆಳೆಗಾರರು, ತಂಬಾಕು ಸಂಸ್ಥಾಪಕ, ಬೀಡಿ ಲೇಬರ್ ಹೀಗೇ ಲೆಕ್ಕ ಹಾಕಿದರೆ ಸರಿ ಸುಮಾರು 12ರಂದ 13 ಲಕ್ಷ ಜನರಿಗೆ ಉದ್ಯೋಗದ ಮೂಲಕ ಮೂವತ್ತು ಲಕ್ಷ ಜನರ ಊಟದ ದಾರಿಯಾಗಿದೆ. ಕಾರ್ಮಿಕ ಆಧಾರಿತ ಬೀಡಿ ಕೈಗಾರಿಕೆಯಲ್ಲಿ ಬೀಡಿ ಸುತ್ತುವ ಕಾರ್ಮಿಕರು ಸುಮಾರು 10 ಲಕ್ಷ ಜನರಿದ್ದು, ಶೇ. 94ರಷ್ಟು ಮಹಿಳೆಯರಿದ್ದಾರೆ. ಸಂಸಾರದ ನಿರ್ವಹಣೆಯ ಹೊಣೆ ಹೊತ್ತ ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರಕ್ಕಾಗಿ ಬೀಡಿ ಕಟ್ಟುವುದರಿಂದ ಬರುವ ಆದಾಯವನ್ನೇ ಅವಲಂಭಿಸಿದ್ದಾರೆ. ಈ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕೇಂದ್ರ ಸರ್ಕಾರ ಬೀಡಿ ಕಾರ್ಮಿಕರ ಬದುಕು ಕಸಿಯಹೊರಟಿರುವುದು ಖಂಡನೀಯ ಎಂದು ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ ಪ್ರತಿಭಟನೆ…
ಕುಂದಾಪುರ: ತಾಲೂಕಿನ ವಿವಿಧೆಡೆ ಶನಿವಾರ ಎನ್ನುವುದು ಕರಾಳ ಶನಿವಾರವಾಗಿ ಪರಿಣಿಸಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ವರದಿಯಾದ ಅಪಘಾತ ಹಾಗೂ ಆತ್ಮಹತ್ಯೆ ಪ್ರಕರಣ ಜನರಲ್ಲಿ ಕೊಂಚ ದಿಗಿಲು ಮೂಡಿಸಿತ್ತು. ‘ಕುಂದಾಪ್ರ ಡಾಟ್ ಕಾಂ’ ಗೆ ಲಭ್ಯವಾದ ಮಾಹಿತಿಯ ಪ್ರಕಾರ ಬೈಂದೂರು, ಕಿರಿಮಂಜೇಶ್ವರ, ಮರವಂತೆ, ತಲ್ಲೂರು, ಶಂಕರನಾರಾಯಣ ಸೇರಿದಂತೆ ಒಟ್ಟು ಆರಕ್ಕೂ ಅಧಿಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟು 8ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. * ಬೈಂದೂರಿನಲ್ಲಿ ಅವಳಿ ಅಪಘಾತ: ಶಿಕ್ಷಕ ಸೇರಿದಂತೆ ಈರ್ವ ಬೈಕ್ ಸವಾರರ ದುರ್ಮರಣ – http://kundapraa.com/?p=7936 . * ಕಿರಿಮಂಜೇಶ್ವರದಲ್ಲಿ ಬುಲೆಟ್ ಬೈಕ್ ಡಿಕ್ಕಿ: ಇಬ್ಬರು ಗಂಭೀರ – http://kundapraa.com/?p=7985 . * ಶಂಕರನಾರಾಯಣ: ಯುವತಿ ಬಾವಿಗೆ ಹಾರಿ ಆತ್ಮಹತ್ಯೆ – http://kundapraa.com/?p=7986 . * ಮರವಂತೆಯಲ್ಲಿ ಟ್ಯಾಂಕರ್‌ಗೆ ಮೀನು ಸಾಗಾಟ ಲಾರಿ ಡಿಕ್ಕಿ : ಟ್ಯಾಂಕರ್ ಸವಾರ ಗಂಭೀರ – http://kundapraa.com/?p=7976 . * ತಲ್ಲೂರಿನಲ್ಲಿ ಬೈಕ್ ಮುಖಾಮುಖಿ ಡಿಕ್ಕಿ, ಗಾಯಾಳು ಆಸ್ಪತ್ರೆಗೆ . ಇಲ್ಲುಸ್ಟ್ರೇಟರ್: ಸತೀಶ್ ಆಚಾರ್ಯ
ಶಂಕರನಾರಾಯಣ: ಇಲ್ಲಿನ ಆರ್ಡಿ ಅಲ್ಬಾಡಿ ಗ್ರಾಮದ ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಅಲ್ಪಾಡಿಯ ಸುರೇಂದ್ರ ಶೆಟ್ಟಿ ಎಂಬುವವರ ಮಗಳು ರೀತಾ(23) ಮೃತ ದುರ್ದೈವಿ. ಎಂಡೋಸಲ್ಫಾನ್ ಮಾರಕ ರೋಗಕ್ಕೆ ತುತ್ತಾಗಿದ್ದ ರೀತಾ ಕಳೆದ ಹದಿನೈದು ವರ್ಷಗಳಿಂದ ಹಾಸಿಗೆ ಹಿಡಿದಿದ್ದು ತನ್ನೆಲ್ಲಾ ಕೆಲಸಗಳಿಗೆ ಮನೆಯವರನ್ನೇ ಅವಲಂಬಿಸಿದ್ದಳು. ಇದರಿಂದ ಮಾನಸಿಕವಾಗಿ ತೀವ್ರ ಕುಗ್ಗಿಹೋಗಿದ್ದ ಆಕೆ ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ. ಮನೆಯವರು ಬಂದು ರೀತಾಳಿಗಾಗಿ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಬುಲೆಟ್ ಬೈಕ್ ಹಾಗೂ ಯಮಾಹಾ ಎಫ್‌ಝೆಡ್ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ಬೈಕುಗಳ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಿರಿಮಂಜೇಶ್ವರ ಬಸ್ ನಿಲ್ದಾಣ ಸಮೀಪ ಸಂಜೆ ವೇಳೆ ನಡೆದಿದೆ. ಬುಲೆಟ್ ಸವಾರ ಶಿರೂರಿನ ಗೋಪಾಲ ಮೇಸ್ತ(58) ಹಾಗೂ ಎಫ್‌ಝೆಡ್ ಬೈಕ್ ಸವಾರ ಕಿರಿಮಂಜೇಶ್ವರದ ಕುದ್ರುಕೋಡು ನಿವಾಸಿ ರಿತೇಶ್ ಶೆಟ್ಟಿ(27) ಎಂಬುವರೇ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಗೋಪಾಲ ಮೇಸ್ತ ತನ್ನ ಬುಲೆಟ್ ನಲ್ಲಿ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಮನೆ ಕಡೆಯಿಂದ ಪೇಟೆಗೆ ಬರುತ್ತಿದ್ದ ನಿತಿನ್ ಶೆಟ್ಟಿ ಬೈಕ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ. ಗೋಪಾಲ ಮೇಸ್ತ ಎಂಬುವರ ದವಡೆ ಒಡೆದು ಹೋಗಿದ್ದು, ಕಿಬ್ಬೊಟ್ಟೆಗೆ ಗಂಭೀರ ಗಾಯಗಳಾಗಿದ್ದು ತೀವ್ರ ರಕ್ತಸ್ರಾವವಾಗಿದ್ದು, ನಿತಿನ್ ಶೆಟ್ಟಿ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರೀರ್ವರನ್ನು ಕುಂದಾಪುರದ ಚಿನ್ಮಯೀ ಆಸ್ಪತ್ರೆಗೆ ಕರೆತರಲಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಣಿಪಾಲಕ್ಕೆ ಸಾಗಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡಿದ್ದ ಗೋಪಾಲ ಮೇಸ್ತ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟ ಕುರಿತು ಕುಂದಾಪ್ರ…
ಕುಂದಾಪುರ: ಜನರ ಜೀವ ಉಳಿಸಲು ರಕ್ತದ ತುಂಬಾ ಅವಶ್ಯಕತೆ ಇದ್ದು, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಸರಿಯಾದ ಸಮಯದಲ್ಲಿ ರಕ್ತ ದೊರೆಯದಿದ್ದಲ್ಲಿ ಪ್ರಾಣಕ್ಕೆ ಅಪಾಯ. ಹೀಗಾಗಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆಯಾದಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜನರ ಪ್ರಾಣ ಉಳಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕು ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಾರ್ಯಾಲಯದ ವಿಭಾಗೀಯ ಪ್ರಬಂಧಕ ವಸಂತ ಶೆಟ್ಟಿ ಹೇಳಿದರು. ಅವರು ಕೆನರಾ ಬ್ಯಾಂಕ್ ನೇರಳಕಟ್ಟೆ ಮತ್ತು ರಕ್ತನಿಧಿ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಿಸರ್ಗ ಫ್ರೆಂಡ್ಸ್ ಕ್ಲಬ್ ನೇರಳಕಟ್ಟೆ ಸಹಯೋಗದೊಂದಿಗೆ ನೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿನ ಎಜಿಎಂ ಐ.ಸಿ.ಶೆಟ್ಟಿ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಶಾಖೆಯ ಚೇರ್‌ಮೆನ್ ಎಸ್. ಜಯಕರ ಶೆಟ್ಟಿ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಶಾಖೆಯ ಸಂಚಾಲಕ ಮುತ್ತಯ್ಯ ಶೆಟ್ಟಿ, ಕರ್ಕುಂಜೆ ಗ್ರಾಮ ಪಂಚಾಯತ್…
ಕುಂದಾಪುರ: ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದಕ್ಕೆ ಇನ್ಸುಲೇಟರ್ ಮೀನಿನ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಟ್ಯಾಂಕರ್ ಚಾಲಕ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ತ್ರಾಸಿ ಬೀಚಿನಲ್ಲಿ ನಡೆದಿದೆ. ಟ್ಯಾಂಕರ್ ಚಾಲಕ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕಲ್ಲುಗುಡ್ಡೆ ನಿವಾಸಿ ದಿವಾಕರ(೩೦) ವರ್ಷ ಎಂಬಾತನೇ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದಾತ. ಮಂಗಳೂರಿನಿಂದ ಡೀಸೆಲ್ ತುಂಬಿಸಿಕೊಂಡ ಟ್ಯಾಂಕರ್ ಗಂಗಾವತಿ ಕಡೆಗೆ ಪ್ರಯಾಣಿಸುತ್ತಿತ್ತು. ರಾತ್ರಿ ಸುಮಾರಿಗೆ ತ್ರಾಸಿ ಬೀಚ್ ಸಮೀಪ ಸಂಚರಿಸುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಶುಕ್ರವಾರದಿಂದ ರಸ್ತೆಯ ಮೇಲೆಯೇ ಕೆಟ್ಟು ನಿಂತ ಲಾರಿಯೊಂದನ್ನು ಕಂಡ ಟ್ಯಾಂಕರ್ ಚಾಲಕ ದಿವಾಕರ ಹೆದ್ದಾರಿಯಲ್ಲಿ ಬಲಕ್ಕೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭ ಎದುರಿನಿಂದ ಬರುತ್ತಿದ್ದ ಇನ್ಸುಲೇಟರ್ ಮೀನಿನ ಲಾರಿಯ ನಡುವಿನ ಭಾಗ ಡಿಕ್ಕಿಯಾಗಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕ ಲಾರಿಯೆಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಗಂಗೊಳ್ಳಿಯ ಹೆಲ್ಪ್ ಲೈನ್ ಕಾರ್ಯಕರ್ತರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಗಂಗೊಳ್ಳಿ ಪೊಲೀಸರು ಸುಮಾರು ಒಂದೂವರೆ ತಾಸುಗಳ ಕಾಲ ಹೆಣಗಾಡಿದರು. ನಂತರ…
ಕುಂದಾಪುರ: ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿಯ ಆತಿಥ್ಯದಲ್ಲಿ ಸಿದ್ದಾಪುರದ ರೋಟರಿ ಹಾಲ್‌ನಲ್ಲಿ ನಡೆದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ ರಂಗತರಂಗದಲ್ಲಿ ರೋಟರಿ ಕ್ಲಬ್ ಕುಂದಾಪುರ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಶೀಪ್ ಅವಾರ್ಡ್‌ನ್ನು ಪಡೆದುಕೊಂಡಿದೆ. ಅನೆಟ್ಸ್ ವಿಭಾಗದಲ್ಲಿ ಗಾಯನ ಸ್ಪರ್ಧೆಯಲ್ಲಿ ಲಾವಣ್ಯ ಲಕ್ಷ್ಮೀ ಪ್ರಥಮ, ರೋಟೆರಿಯನ್ ವಿಭಾಗದಲ್ಲಿ ಗಾಯನ ಸ್ಪರ್ಧೆಯಲ್ಲಿ ರವಿರಾಜ್ ಶೆಟ್ಟಿ ಪ್ರಥಮ, ಯುಗಳ ಗೀತೆಯಲ್ಲಿ ಬಿ.ಕಿಶೋರ್‌ಕುಮಾರ್ ಕುಂದಾಪುರ ಮತ್ತು ಶ್ರಾವ್ಯ ಆರ್. ರಾವ್ ದ್ವಿತೀಯ, ಸೋಲೋ ಡ್ಯಾನ್ಸ್‌ನಲ್ಲಿ ಚೈತನ್ಯ ಲಕ್ಷ್ಮೀ ಪ್ರಥಮ, ಗ್ರೂಫ್ ಡ್ಯಾನ್ಸ್‌ನಲ್ಲಿ ರೋಟರಿ ಕ್ಲಬ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕಿರುಪ್ರಹಸನ ವಿಭಾಗದಲ್ಲಿ ರೋಟರಿ ವಲಯ೧ರ ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ನಿರ್ದೇಶನದ ಹುಚ್ಚು ಮನಸ್ಸಿನ ಹತ್ತು ಮುಖಗಳು ಪ್ರಹಸನ ಜನಮೆಚ್ಚುಗೆಯ ಅತ್ಯುತ್ತಮ ಪ್ರದರ್ಶನ ಕಂಡು ಪ್ರಥಮ ಸ್ಥಾನವನ್ನು ಪಡೆಯಿತು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಚಾಂಪಿಯನ್ ಅವಾರ್ಡ್ ಪಡೆದುಕೊಂಡರು. ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ನಿರ್ದೇಶಕ…
ಕುಂದಾಪುರದ ಯುವ ಸಾಹಿತಿ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಪರಿಕಲ್ಪನೆಯಲ್ಲಿ ಕುಂದಾಪುರ ಕನ್ನಡದ ಹಾಡುಗಳ ಆಲ್ಬಂ ತಯಾರಾಗುತ್ತಿದ್ದು ಅದರ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮ ನ. 25ರಂದು ನಡೆಯಲಿದೆ. ಬೆಂಗಳೂರಿನ ಗುತ್ತಹಳ್ಳಿಯಲ್ಲಿರುವ ಸಿರಿಸೌಂದರ್ಯ ಮಾಸ ಪತ್ರಿಕೆಯ ಕಛೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ‘ಗಂಡ್ ಹಡಿ ಗಂಡ್’ ಹಾಡಿನ ಶೀರ್ಷಿಕೆ ಬಿಡುಗಡೆಗೊಳಿಸಲಿದ್ದಾರೆ. ಸಂದೀಪ್ ಶೆಟ್ಟಿ ಅವರ ಪರಿಕಲ್ಪನೆ, ಸಾಹಿತ್ಯ ಹಾಗೂ ಅವರದ್ದೇ ಕಂಠದಲ್ಲಿ ಮೂಡಿಬರುತ್ತಿರುವ ‘ಗಂಡ್ ಹಡಿ ಗಂಡ್’ಗೆ ಜಸ್ಟಿನ್ ಥಾಮಸ್ ಸಂಗೀತ ನೀಡುತ್ತಿದ್ದರೇ, ಅಭಿನಯ್ ಶೆಟ್ಟಿಯ ವಿನ್ಯಾಸ ಸಂದೀಪ್ ಕಲ್ಪನೆಗೆ ರೂಪ ನೀಡಲಿದೆ.
ಕುಂದಾಪುರ: ವೃತ್ತಿ-ಪ್ರವೃತ್ತಿಗಳಲ್ಲಿ ಸೋಲ-ಗೆಲುವನ್ನು ಸಮಾನವಾಗಿ ಸ್ವೀಕರಿಸಬಲ್ಲ ಮನೋಭಾವದ ಭವಿಷ್ಯದ ಬೆಳವಣಿಗೆಯೇ ಪೂರಕವಾಗುವುದಲ್ಲದೇ ಬದುಕಿನಲ್ಲಿ ಗೆಲ್ಲುವ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ ಎಂದು ಅಂತರಾಷ್ಟ್ರೀಯ ತರಬೇತಿದಾರ ಸದಾನಂದ ನಾವಡ ಹೇಳಿದರು. ಅವರು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಕ್ರೀಡೋತ್ಸವದಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಮಾತನಾಡಿದರು. ಪಠ್ಯ ವಿಷಯಗಳಿಂದ ಹೊರತಾದ ಸೃಜನಶೀಲ ಪ್ರವೃತ್ವವನ್ನು ರೂಡಿಸಿಕೊಂಡ ಯಶಸ್ವೀ ವ್ಯಕ್ತಿಗಳ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಿದೆ ಎಂದರು. ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ, ಕೋಶಾಧಿಕಾರಿ ಕೋಡಿ ಶ್ರೀನಿವಾಸ ಶೆಣೈ, ಆಡಳಿತಾಧಿಕಾರಿ ಪಿ. ಶ್ರೀಪತಿ ಹೇರ್ಳೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ನಾಯಕ್, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ರೂಪಾ ಶೆಣೈ, ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಜಯಶೀಲಾ ನಾಯಕ್ ಉಪಸ್ಥಿತರಿದ್ದರು. ಕ್ಯಾರೋಲಿನ್ ಸ್ವಾಗತಿಸಿ, ನೀಲೇಶ್ ಪ್ರಭು ಅಭ್ಯಾಗತರನ್ನು ಪರಿಚಯಿಸಿದರು. ಸಹನಾ ಭಟ್ ವಂದಿಸಿದರು. ನಿಶ್ಮಾ ಕಾರ್ಯಕ್ರಮ ನಿರ್ವಹಿಸಿದರು.
