ಕುಂದಾಪುರದ ಯುವ ಸಾಹಿತಿ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಪರಿಕಲ್ಪನೆಯಲ್ಲಿ ಕುಂದಾಪುರ ಕನ್ನಡದ ಹಾಡುಗಳ ಆಲ್ಬಂ ತಯಾರಾಗುತ್ತಿದ್ದು ಅದರ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮ ನ. 25ರಂದು ನಡೆಯಲಿದೆ. ಬೆಂಗಳೂರಿನ ಗುತ್ತಹಳ್ಳಿಯಲ್ಲಿರುವ ಸಿರಿಸೌಂದರ್ಯ ಮಾಸ ಪತ್ರಿಕೆಯ ಕಛೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ‘ಗಂಡ್ ಹಡಿ ಗಂಡ್’ ಹಾಡಿನ ಶೀರ್ಷಿಕೆ ಬಿಡುಗಡೆಗೊಳಿಸಲಿದ್ದಾರೆ.
ಸಂದೀಪ್ ಶೆಟ್ಟಿ ಅವರ ಪರಿಕಲ್ಪನೆ, ಸಾಹಿತ್ಯ ಹಾಗೂ ಅವರದ್ದೇ ಕಂಠದಲ್ಲಿ ಮೂಡಿಬರುತ್ತಿರುವ ‘ಗಂಡ್ ಹಡಿ ಗಂಡ್’ಗೆ ಜಸ್ಟಿನ್ ಥಾಮಸ್ ಸಂಗೀತ ನೀಡುತ್ತಿದ್ದರೇ, ಅಭಿನಯ್ ಶೆಟ್ಟಿಯ ವಿನ್ಯಾಸ ಸಂದೀಪ್ ಕಲ್ಪನೆಗೆ ರೂಪ ನೀಡಲಿದೆ.