Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ರಂಗಮಂಟಪದಲ್ಲಿ ಸಪ್ತಪದಿ ಉಚಿತ ಸರಳ ಸಾಮೂಹಿಕ ವಿವಾಹ ಸಮಾರಂಭ ಜರುಗಿತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಸರಳ ಮದುವೆ ಬಗ್ಗೆ ಯುವಪೀಳಿಗೆ, ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರ ಆಶಯದಿಂದ ಈ ಸರಳ ವಿವಾಹ ಯೋಜನೆ ಆಯೋಜಿಸಲಾಗಿದ್ದು, ಈ ಮೂಲಕ ಸಮಾಜದಲ್ಲಿ ಆದರ್ಶ ಪ್ರಾಯ ಜೀವನ ನಡೆಸುವಂತಾಗಲಿ ಎಂಬ ಹರಕೆ, ಹಾರೈಕೆ ಸರಕಾರದ್ದು ಎಂದ ಹೇಳಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅದ್ದೂರಿಯಲ್ಲಿ ಒಬ್ಬರನೊಬ್ಬರು ಮೀರಿಸುವಂತ ಪೈಪೋಟಿಯಲ್ಲಿ ತಮ್ಮ ಮಕ್ಕಳ ಮದುವೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮೂಲಕ ಅನಗತ್ಯ ದುಂದುವೆಚ್ಚ ಮಾಡುತ್ತಿರುವುದು ಕಾಣಬಹುದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಆರ್ಥಿಕವಾಗಿ ಹಿನ್ನಡೆಯಾಗಿ ಸಾಲದ ಸುಳಿಯಲ್ಲಿ ಬೀಳುತ್ತಾರೆ. ಇದಕ್ಕಿಂತ ಸರಳ ಹಾಗೂ ಸಾಮೂಹಿಕ ವಿವಾಹ ಮಡಿಕೊಳ್ಳುವುದರಿಂದ ಆರ್ಥಿಕ ಹೊರೆ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಕಂಕಣಭಾಗ್ಯ ಕೂಡಿಬಂದ ಯುವಜನತೆ ಸರ್ಕಾರದ ಸಪ್ತಪದಿ ಯೋಜನೆ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ನಿರಂತರ ನೀರು ಪೂರೈಕೆ ಕಾಮಗಾರಿ ಕುರಿತು ವಿವರಣೆ ನೀಡಬೇಕಿದ್ದ ಅಧಿಕಾರಿ ಸಭೆಗೆ ಗೈರಾಗಿದ್ದು, ಅವರಿಲ್ಲದೆ ಯೋಜನೆ ಕುರಿತು ಚರ್ಚೆ ಅಸಾಧ್ಯ. ಅಧಿಕಾರಿ ಸಮಯ ಪಡೆದು ಮತ್ತೊಮ್ಮೆ ಸಭೆ ಕರೆಯಬೇಕು. ಒಳಚರಂಡಿ ಯೋಜನೆ ಕಾಮಗಾರಿ ಮುಗಿಸಲು ಎಷ್ಟು ಸಮಯ ಬೇಕು.. ಪುರಸಭೆ ವೆಟ್‌ವೆಲ್ ನಿರ್ಮಾಣಕ್ಕೆ ಜಾಗ ಕೊಟ್ಟ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುತ್ತೇವೆ. ಇವೆಲ್ಲವೂ ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಜಲಸಿರಿ ಹಾಗೂ ಒಳ ಚರಂಡಿ ಯೋಜನೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಚರ್ಚಿಗೆ ಬಂದ ಪ್ರಮುಖ ಅಂಶಗಳು. ಜಲಸಿರಿ ಯೋಜನೆ ಬಗ್ಗೆ ಸದಸ್ಯ ಮೋಹನದಾಸ್ ಶೆಣೈ ಮಾತನಾಡಿ, ಇಷ್ಟು ದೊಡ್ಡ ಯೋಜನೆ ಬಗ್ಗೆ ವಿಶೇಷ ಸಭೆ ಆಯೋಜಿಸಿ ಮುಂಚಿತ ಮಾಹಿತಿ ನೀಡಿದರೂ ಸಭೆಗೆ ಯೋಜನೆಯ ಮುಖ್ಯಾಧಿಕಾರಿ ಬಂದಿಲ್ಲ. ಬೇರೆಯವರು ಕೊಡುವ ಸಮಜಾಯಿಸಿ ನಮಗೆ ಬೇಕಿಲ್ಲ. ಸಭೆಗೆ ಮಾಹಿತಿ ನೀಡಿಯೂ ಬಾರದಿರುವುದು ಪುರಸಭೆ ಹಾಗೂ ಸದಸ್ಯರಿಗೆ ಮಾಡಿದ ಅವಮಾನ. ಅಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ತ್ರಾಸಿ ಚರ್ಚ್‌ನ ಧರ್ಮಗುರು ಚಾರ್ಲ್ಸ್ ಲೂವಿಸ್ ಅವರ ಗುರುದೀಕ್ಷೆಯ 50 ವರ್ಷ ಪೂರೈಸಿದ ಅಂಗವಾಗಿ ತ್ರಾಸಿ ಚರ್ಚ್‌ನ ಸಭಾಂಗಣದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಉಡುಪಿ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಅವರು ಚಾರ್ಲ್ಸ್ ಲೂವಿಸ್ ಅವರನ್ನು ಗೌರವಿಸಿ ಆಶೀರ್ವಚನ ನೀಡಿದರು. ಧರ್ಮಗುರು ಜೋಸೆಫ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾರ್ಜ್ ಡಿ’ಅಲ್ಮೇಡಾ ಮಾನಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು. ಧರ್ಮಗುರು ಅನಿಲ್ ಕರ್ನೆಲಿಯೊ, ಕುಂದಾಪುರ ವಲಯ ವಿಗಾರ್ ವಾರ್ ಸ್ಟ್ಯಾನಿ ತಾವ್ರೊ, ಸಹೋದರಿ ಗ್ಲೇಡಿಸ್, ಕುಂದಾಪುರ ವಲಯದ ವಿವಿಧ ಚರ್ಚಿನ ಧರ್ಮಗುರುಗಳು, ಚರ್ಚಿನ 18 ಆಯೋಗದ ಸಂಚಾಲಕರು, ತ್ರಾಸಿ ಚರ್ಚಿನ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ತ್ರಾಸಿ ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್ ಡಿಅಲ್ಮೇಡಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸಿಪ್ರಿಯಾನ್ ಡಿಸಿಲ್ವ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಶಾರದಾ ಕಾಲೇಜು, ಬಸ್ರೂರು ಐಕ್ಯೂಎಸಿ ಮತ್ತು ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಭಾಗ ಮತ್ತು ಸಮುದಾಯ ಕುಂದಾಪುರ ಇದರ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ವೆಬಿನಾರ್ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಟ್ರಸ್ಟಿ ಸದಸ್ಯರಾದ ಉದ್ಯಮಿ ಗಣೇಶ ಶೆಟ್ಟಿ ಮೊಳಹಳ್ಳಿ, ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇಂದು ಹಮ್ಮಿಕೊಂಡಿರುವ ಜಿಡಿಪಿ ಮತ್ತು ಉದ್ಯೋಗ ಎಂಬ ವೆಬಿನಾರ್ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ವಿಶ್ವವಿದ್ಯಾನಿಲಯದ ಹಂಪಿ ಇದರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರ ಪೂಜಾರಿ ಮಾತನಾಡಿ, ಜಿಡಿಪಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ ಹಾಗೂ ಆರ್ಥಿಕ ಗಾತ್ರವನ್ನು ಸಂಕೇತಿಸುತ್ತಿದ್ದು, ಜನರ ಖರೀದಿ ಸಾಮರ್ಥ್ಯ, ದೇಶೀಯ ಹಾಗೂ ವಿದೇಶಿಹೂಡಿಕೆ, ಉದ್ಯೋಗ ಸೃಷ್ಟಿ, ಸೇವಾ ವಲಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸರ್ಕಾರ ಉತ್ಪಾದನಾ ವಲಯ ಚೇತರಿಕೆಗೆ, ಕೃಷಿ ಕ್ಷೇತ್ರಕ್ಕೆ ಬೆಂಬಲ, ಉದ್ಯೋಗ ಸೃಷ್ಟಿಯಾಗಬಲ್ಲ ಯೋಜನೆಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗ್ರಾಮ ಪಂಚಾಯಿತಿ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ‘ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ಅಂಗವಾಗಿ ಈಚೆಗೆ ಜರುಗಿದ ‘ಓದುವ ಬೆಳಕು’ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ ಗ್ರಾಮ ಪಂಚಾಯಿತಿಯನ್ನು ಮಕ್ಕಳ ಸ್ನೇಹಿಯಾಗಿ ಮಾಡಲು ಪ್ರಯತ್ನಿಸಲಾಗುವುದು ಹೇಳಿದರು. ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯರು, ಕಾರ್ಯದರ್ಶಿ ದಿನೇಶ ಶೇರುಗಾರ್, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ತಿಲೋತ್ತಮಾ ನಾಯಕ್, ಊರಿನ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು. ನಿಶಾ ಪೂಜಾರಿ ನಿರೂಪಿಸಿದರು. ವಿದ್ಯಾರ್ಥಿ ಶ್ರೀಶ ಖಾರ್ವಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತನುಶ್ರೀ ಖಾರ್ವಿ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಪ್ರಸಕ್ತ ಸಾಲಿಗೆ ಕಿರುಸಾಲ ಯೋಜನೆಯಡಿ ಸ್ತ್ರಿ ಶಕ್ತಿ ಸ್ವಸಹಾಯ ಗುಂಪುಗಳು ಆರ್ಥಿಕ ಚಟುವಟಿಕೆ ಕೈಗೊಳ್ಳಲು 3 ಲಕ್ಷ ರೂ. ಮೇಲ್ಪಟ್ಟು ಉಳಿತಾಯ ಇರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಸ್ತ್ರಿ ಶಕ್ತಿ ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಹಾಗೂ 2 ಲಕ್ಷ ರೂ. ಮೇಲ್ಪಟ್ಟು ಉಳಿತಾಯ ಇರುವ ಇತರೆ ಸ್ತ್ರಿ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ 2 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲು, ಸ್ತ್ರಿ ಶಕ್ತಿ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 13 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆಯನ್ನು ಸಂಬಂಧಿಸಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574978 ನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದ ಹಿಂದು ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆಯು ಇಲ್ಲಿನ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಈಚೆಗೆ ನಡೆಯಿತು. ಸಭೆಯಲ್ಲಿ ಬೈಂದೂರು ವಲಯ ಕೃಷಿ ಅಧಿಕಾರಿ ಪರಶುರಾಮ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಪೋಷಕರು ಮಕ್ಕಳು ಓದುವ ಸಮಯದಲ್ಲಿ ಅವರೊಂದಿಗೆ ಇದ್ದು, ಅವರು ಅದರಲ್ಲಿ ಸರಿಯಾಗಿ ತೊಡಗಿಕೊಂಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಅವರು ಆಧುನಿಕ ಉಪಕರಣಗಳ ಅತಿದಾಸರಾಗದಂತೆ ನೋಡಿಕೊಳ್ಳಬೇಕು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೃಷಿ ಕೆಲಸಗಳಲ್ಲಿ ಹಿರಿಯರಿಗೆ ಸಹಾಯ ಮಾಡಿದರೆ ಅವರಲ್ಲಿ ಕೃಷಿ ಸಂಸ್ಕೃತಿ ಬೆಳೆಯುತ್ತದೆ. ಬೆಳೆದು ದೊಡ್ಡವರಾದಾಗ ಕಾಯಕದ ಬದುಕಿಗೆ ಒಗ್ಗಿಕೊಳ್ಳುತ್ತಾರೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವರಾಮ ಮಧ್ಯಸ್ಥ ಸ್ವಾಗತಿಸಿ, ನಿರೂಪಿಸಿದರು. ಸದಸ್ಯ ವಿಘ್ನೇಶ್ವರ ಕೆ ವಂದಿಸಿದರು. ಸಂಘದ ಹಿರಿಯ ಸದಸ್ಯ ಶಿವರಾಮ ಶೆಟ್ಟಿ, ಕೋಶಾಧಿಕಾರಿ ನಾರಾಯಣ ಪೂಜಾರಿ, ಉಪಾಧ್ಯಕ್ಷ ಮನೋಹರ ಎನ್. ಕೆ, ಜತೆ ಕಾರ್ಯದರ್ಶಿ ರತ್ನಾಕರ ಕೆ. ಸದಸ್ಯರಾದ ಪ್ರವೀಣ್ ಎನ್, ಎನ್. ಸತ್ಯನಾರಾಯಣ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ವಿರುವ ತರ್ಮಲ್ ಸ್ಕಾನರ್, ಸ್ಯಾನಿಟೈಸರ್ ಸ್ಟಾಂಡ್, ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ಸರ್.ಎಮ್ ವಿಶ್ವೇಶ್ವರಯ್ಯ, ಸುಭಾಶ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ ಫೋಟೋವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯಿನಿ, ಅಧ್ಯಾಪಕರರು ಮತ್ತು ಮಕ್ಕಳು ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ, ರಾಜೀವ್ ಕೊಟ್ಯಾನ್, ನವೀನ್ ಕುಮಾರ್ ಶೆಟ್ಟಿ, ರಾಧಕೃಷ್ಣ ನಾಯಕ್, ನವೀನ್ ಕುಮಾರ್ ಶೆಟ್ಟಿ, ಅಶೊಕ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅನುದೀಪ್ ಹೆಗ್ಡೆ-ವಿನುಷ್ಕಾ ದಂಪತಿ ಸಮೀಪದ ಸೋಮೇಶ್ವರ ಕಡಲತೀರವನ್ನು ಸ್ಥಳೀಯರ ಜತೆಸೇರಿ ತ್ಯಾಜ್ಯಮುಕ್ತಗೊಳಿಸಿ, ಪ್ರಧಾನಿಯ ಮನ್‌ಕೀ ಬಾತ್‌ನಲ್ಲಿ ಉಲ್ಲೇಖಗೊಂಡು ರಾಷ್ಟ್ರವ್ಯಾಪಿ ಸುದ್ದಿಯಾದ ಬೆನ್ನಲ್ಲೇ ದೊಂಬೆ ತೀರದಲ್ಲಿ ಸುತ್ತಲಿನ ೨೧ ಮಕ್ಕಳು ಸೋಮವಾರ ಅವರ ಕಾರ್ಯವನ್ನು ಅನುಕರಿಸಿ ಗಮನ ಸೆಳೆದಿದ್ದಾರೆ. ಅಲ್ಲಿ ನೂತನ ಮನೆ ನಿರ್ಮಾಣ ಮಾಡುತ್ತಿರುವ ಪ್ರಿಯಾಂಕಾ ಎಂಬುವರು, ತೀರದಲ್ಲಿ ಸಂಗ್ರಹವಾಗಿರುವ ಕಸಕಡ್ಡಿಗಳಿಂದ ಪರಿಸರ ಕಲುಷಿತ ಆಗುತ್ತಿರುವುದನ್ನು ಕಂಡು ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸುತ್ತಮುತ್ತಲಿನ ಮಕ್ಕಳಿಗೆ ಪ್ರೇರಣೆ ನೀಡಿದರು. ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ ತನ್ನ ಇಬ್ಬರು ಎನ್‌ಸಿಸಿ ಸ್ನೇಹಿತೆಯರೊಂದಿಗೆ ಮಕ್ಕಳನ್ನು ಸೇರಿಕೊಂಡರು. ಅನುದೀಪ್ ಹೆಗ್ಡೆ ಬಂದು ಅವರೆಲ್ಲರನ್ನು ಉತ್ತೇಜಿಸಿದರು. ಎಲ್ಲ ಸೇರಿ ಸುಮಾರು ೨೦೦ ಕೆಜಿ ಆಗುವಷ್ಟು ತ್ಯಾಜ್ಯ ಸಂಗ್ರಹಿಸಿದರು. ಕೊನೆಯಲ್ಲಿ ಅನುದೀಪ್ ಹೆಗ್ಡೆ, ಮನೆಗಳಲ್ಲಿ, ಪರಿಸರದಲ್ಲಿ ಒಟ್ಟಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುವ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ತಾವು ಹೊಸದಾಗಿ ಕಂಡುಕೊಂಡ ಈ ವಿನೂತನ ಪರಿಸರಪರ ಹವ್ಯಾಸದ ಬಗ್ಗೆ ಮಾತನಾಡಿದ ಹೆಗ್ಡೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಮಾರ್ಚ್ ತಿಂಗಳನಿಂದ ಈ ದಿನದ ತನಕ ಕೋವಿಡ್ 19ರ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸುವುದು ಶ್ಲಾಘನೀಯ. ಕುಂದಾಪುರದ ಈ ಲಯನ್ಸ್ ಕ್ಲಬ್ ಕಳೆದ ಮಾರ್ಚ್‌ನಿಂದಲೆ ನಮಗೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಾ ಬಂದಿದೆ. ಈ ರೀತಿಯ ಬೆಂಬಲ ಸಂಘ ಸಂಸ್ಥೆಗಳಿಂದ ಸಿಕ್ಕಿದ್ದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಕುಂದಾಪುರದ ತಾಲೂಕು ಅಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು. ಅವರು ಕುಂದಾಪುದ ಲಯನ್ಸ್ ಕ್ಲಬ್‌ಗೆ ಅತಿಥಿಯಾಗಿ ಆಗಮಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಕೋವಿಡ್ ೧೯ರ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಿಯಾಗಿ ಕರ್ತವ್ಯ ನಿಭಾಯಿಸಿದ ಡಾ ನಾಗಭೂಷಣ ಉಡುಪ ಅವರನ್ನು ಕ್ಲಬ್‌ನ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೆಮ್ಮಾಡಿ ಸುಜನ್ ಕುಲಾಲ್ ಇವರಿಗೆ ಶಿಕ್ಷಣಕ್ಕೊಸ್ಕರ ರೂ 15000ವನ್ನು ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ಪ್ರಶಾಂತರವರಿಗೆ ರೂ 15000 ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷರಾದ ಲಯನ್ ಚಂದ್ರಶೇಖರ ಕಲ್ಪತರು…

Read More