ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಇಂಡಿಯನ್ ಅಸೋಸಿಯೇಶನ್ ಫಾರ್ ಪೇರೆಂಟರಲ್ ಆಂಡ್ ಎಂಟರಲ್ ನ್ಯೂಟ್ರಿಶನ್ ವತಿಯಿಂದ ಕ್ಲಿನಿಕಲ್ ಪ್ರಾಕ್ಟೀಸ್, ಶಿಕ್ಷಣ ಹಾಗೂ ಅಡ್ವೊಕೆಸಿ ಕ್ಷೇತ್ರದಲ್ಲಿನ ಸಾಧಕರಿಗೆ ಕೊಡಮಾಡುವ 202ರ ಪ್ರಶಸ್ತಿಗೆ ಆಳ್ವಾಸ್ ಸ್ನಾತಕೋತ್ತರ ಕಾಲೇಜಿನ ಫುಡ್ ಸಯನ್ಸ್ ಆಂಡ್ ನ್ಯೂಟ್ರಿಶನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಆಯ್ಕೆಯಾಗಿದ್ದಾರೆ. ಕ್ಲಿನಿಕಲ್ ಮತ್ತು ಕಮ್ಯುನಿಟಿ ನ್ಯೂಟ್ರಿಷನ್ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಮತ್ತು ಸಾಧನೆಗಳಿಗಾಗಿ ರಾಷ್ಟ್ರೀಯ ಮಟ್ಟದ ಎಕ್ಸೆಲೆನ್ಸ್ ಇನ್ ನ್ಯೂಟ್ರಿಶನ್ ರಿಸರ್ಚ್ ಪ್ರಶಸ್ತಿಗೆ ರಾಷ್ಟ್ರ ಮಟ್ಟದಲ್ಲಿ ಡಾ. ಅರ್ಚನಾ ಪ್ರಭಾತ್ ಆಯ್ಕೆಯಾಗಿದ್ದರೆ, ರಾಜ್ಯ ಮಟ್ಟದಲ್ಲಿ ಚೆನೈನ ಲೇಖಾ ಶ್ರೀಧರನ್, ಜಿಲ್ಲಾ ಮಟ್ಟದ ಚಂಡಿಘರ್ನ ಡಾ. ಶಿಲ್ಪ ಸಖಾನಿ ಪಡೆದುಕೊಂಡಿದ್ದಾರೆ. ಅರ್ಚನಾ ಪ್ರಭಾತ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೊತ್ತರ ವಿಭಾಗದ ಫುಡ್ ಆಂಡ್ ಸಯನ್ಸ್ ವಿಭಾಗವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರ ಬೆಂಬಲದೊಂದಿಗೆ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಇಂಡಿಯನ್ ಅಸೋಸಿಯೇಶನ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ, ಕೃಷಿ ಮುಸೂದೆ, ಇಂದಿನ ಬೆಲೆ ಏರಿಕೆ, ದಿನಬಳಿಕೆ ವಸ್ತು ಹಾಗೂ ಕರಾವಳಿ ತೀರದ ಜ್ವಲಂತ ಸಮಸ್ಯೆಗಳ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಹೆಜಮಾಡಿಯಿಂದ ಬೈಂದೂರು ತನಕ ನಡೆಯಲಿರುವ ಕಾಂಗ್ರೆಸ್ ಜನದ್ವನಿ ಪಾದಯಾತ್ರೆ ಸಮಾರೋಪ ಫೆ.27. ಅಪರಾಹ್ನ 3ಕ್ಕೆ ಬೈಂದೂರಿನಲ್ಲಿ ನಡೆಯಲಿದೆ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದಿದ್ದಾರೆ. ಫೆ.26 ಬೆಳಗ್ಗೆ ತಲ್ಲೂರಿಗೆ ಆಗಮಿಸಲಿರುವ ಪಾದಯಾತ್ರೆಯಲ್ಲಿ ಬೈಂದೂರು ಪ್ರದೇಶದಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿಕೊಂಡು ಪಾದಯಾತ್ರೆ ಮುಂದುವರಿಯಲಿದ್ದು, ಸಂಜೆ ನಾವುಂದ ವಾಸ್ತವ್ಯ ಮಾಡಿ, ಫೆ.27 ಬೆಳಗ್ಗೆ 9ಕ್ಕೆ ನಾವುಂದಿಂದ ಪಾದಯಾತ್ರೆ ಹೊರಡಲಿದ್ದು, ಮಧ್ಯಹ್ನ 2ಕ್ಕೆ ಬೈಂದೂರು ಸೇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಂಧನ ಬೆಲೆ ಹಾಗೂ ನಿತ್ಯಬಳಿಕೆ ವಸ್ತುಗಳು ಬೆಲೆ ಏರಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಜನರಿಗೆ ತಲುಪಿಸಿ, ಜನಜಾಗ್ರತಿ ಮೂಡಿಸುವುದು ಪಾದಯಾತ್ರೆ ಉದ್ದೇಶವಾಗಿದ್ದು, ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಸ್.ವಿ.ಫಿಲ್ಮ್ ಪ್ರೋಡಕ್ಷನ್ಸ್ವರ ಚೊಚ್ಚಲ ಸಿನಿಮಾ ‘ಮಾಡರ್ನ್ ಮಹಾಭಾರತ’ ಸಿನಿಮಾ ಫೆ.26ರಂದು ಕೋಟೇಶ್ವರದ ಭಾರತ್ ಸಿನಿಮಾಸ್ನಲ್ಲಿ ಬಿಡುಗಡೆಗೊಳ್ಳಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೋಟೇಶ್ವರ, ಮಣಿಪಾಲ ಮತ್ತು ಮಂಗಳೂರಿನ ಭಾರತ್ ಸಿನಿಮಾಸ್ನ ಮಲ್ಟಿಪ್ಲೆಕ್ಸ್ ಥಿಯೇಟರ್ಗಳಲ್ಲಿ ಬಿಡುಗಡೆಗೊಳ್ಳಲಿದೆ. ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶ್ರೀಧರ ಉಡುಪ ತಿಳಿಸಿದ್ದಾರೆ. ಫೆ.23ರಂದು ಕುಂದಾಪುರದ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಡರ್ನ್ ಮಹಾಭಾರತ’ ಬಿಡುಗಡೆ ಪೂರ್ವದಲ್ಲೇ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜಾಲತಾಣಗಳಲ್ಲಿ ಸಿನಿಮಾದ ಟೀಸರ್, ಟ್ರೈಲರ್, ಪ್ರಚಾರ ತಂತ್ರದಿಂದ ಜನ ಸಾಕಷ್ಟು ಕುತೂಹಲಗೊಂಡಿದ್ದಾರೆ ಎಂದರು. ಮಾಡರ್ನ್ ಮಹಾಭಾರತ ಈ ಹೆಸರನ್ನು ಸಿನಿಮಾ ಹೊಂದಿದ್ದರೂ ಮಹಾಭಾರತಕ್ಕೂ ಇದಕ್ಕೂ ಸಂಬಂಧವಿಲ್ಲ. ಸಾಂಸಾರಿಕ ಗೋಳು, ಜೀವನದ ಜಂಜಾಟಗಳನ್ನು ಮೂರು ಸಂಸಾರಗಳ ವಿಷಯ ಹೊಂದಿರುವ ಈ ಸಿನಿಮಾ ಸೃಜನಶೀಲ ಮನೋರಂಜನಾತ್ಮಕ ಚಿತ್ರ. ಮೂರು ಸಂಸಾರಗಳಲ್ಲೂ ನಡೆಯುವ ಕೌಟುಂಬಿಕ ಕಲಹ, ಹದಿ ಹರೆಯದವರ ಪ್ರೀತಿ – ಪ್ರಣಯ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಸ್ಪೆಸ್ಟ್, ಥ್ರಿಲ್ಲರ್, ಸೆಂಟಿಮೆಂಟ್ ಇರುವ ಕುಟುಂಬ ಸಹಿತಿ ನೋಡಬಹುದಾದ ಕುಂದಾಪುರ ಹುಡುಗರು ಸಿದ್ದಪಡಿಸಿ, ನಟಿಸಿದ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ ಕನ್ನಡ ಚಲನಚಿತ್ರ ಶುಕ್ರವಾರ ಕೋಟೇಶ್ವರ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಓಂಗುರು ಬಸ್ರೂರು ತಿಳಿಸಿದ್ದಾರೆ. ಅತೀ ಕಡಿಮೆ ಬಜೆಟ್ ಚಲನಚಿತ್ರವಾಗಿದ್ದು, ರಂಗಭೂಮಿ, ಹಾಗೂ ಸ್ಥಳೀಯ ಕಲಾವಿದರು ನಟಿಸಿದ್ದು, ಎ.ಆರ್.ರೆಹಮಾನ್ ಶಿಷ್ಯ ಉತ್ತಮ ಸಾರಂಗ ಸಂಗೀತ ನೀಡಿದ್ದಾರೆ. ಚಿತ್ರ ಬಿಡುಗಡೆ ನಂತರದ ಯಶಸ್ಸಿನ ಮೇಲೆ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಶಿವಮೊಗ್ಗೆ ಹಾಗೂ ಉಡುಪಿಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಐದು ಜನ ಹಾಸ್ಯಕಲಾವಿದರು ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಎರಡು ಹಾಡಿದ್ದು, ಉಡುಪಿ, ಕುಂದಾಪುರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು. ಸಂಗೀತ ನಿರ್ದೇಶಕ ಉತ್ತಮ ಸಾರಂಗ ಹಾಗೂ ಚಂದ್ರಶೇಖರ ಬಸ್ರೂರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬ್ಯಾಂಕುಗಳ ತವರೂರಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹುಟ್ಟಿದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಕರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿ ಎನ್ಪಿಎ ಹೆಚ್ಚಾಗಿ ಲಾಭಾಂಶ ಕಡಿಮೆಯಾಗುತ್ತಿದೆ. ಗ್ರಾಹಕರು ಕ್ಲಪ್ತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕಿನ ಸಾಲ ಸೌಲಭ್ಯದ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕಿನ ಮಣಿಪಾಲ ವೃತ್ತ ಕಛೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕೆ.ಕಾಳಿ ಹೇಳಿದರು. ಅವರು ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆ 1, 2ಮತ್ತು ಕೆನರಾ ಬ್ಯಾಂಕ್ ಗುಜ್ಜಾಡಿ ಶಾಖೆಯ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದರು. ಕೆನರಾ ಬ್ಯಾಂಕ್ ಗಂಗೊಳ್ಳಿ ಮತ್ತು ಗುಜ್ಜಾಡಿ ಶಾಖೆಯಲ್ಲಿ 180 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದು 120ಕೋಟಿ ಠೇವಣಿ ಹೊಂದಿದೆ. 60ಕೋಟಿ ರೂ. ಸಾಲ ನೀಡಲಾಗಿದ್ದು, ಸುಮಾರು 2800 ಮಂದಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಭಾಗದ ಮಾಹಿತಿ ತಂತ್ರಜ್ಞಾನ ಘಟಕದ ವತಿಯಿಂದ ಐಟಿ ಕ್ಷೇತ್ರದಲ್ಲಿ ವೃತ್ತಿ ಆಯ್ಕೆಯ ಕುರಿತು ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಶ್ರೀಕಾಂತ್ ಭಂಡಾರಿ ಐಟಿ ಕ್ಷೇತ್ರದಲ್ಲಿ ವೃತ್ತಿ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಬ್ಬುಲ್ ರೆಹಮಾನ್, ವಿಭಾಗದ ಹಿರಿಯ ಉಪನ್ಯಾಸಕಿ ನೂತನ್ ಉಪಸ್ಥಿತರಿದ್ದರು. ಘಟಕದ ಸಂಯೋಜಕಿಯಾದ ಉಪನ್ಯಾಸಕಿ ಹರ್ಷಿತ ಜಿ. ಪಿ ಸ್ವಾಗತಿಸಿದರು, ವಿದ್ಯಾರ್ಥಿ ನವನೀತ್ ವಂದಿಸಿದರು. ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಅಲ್-ತಸ್ಮೀಯ ಮುಖ್ಯ ಅತಿಥಿಯನ್ನು ಪರಿಚಯಿಸಿ, ವಿದ್ಯಾರ್ಥಿ ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗ್ರಾಮ ಪಂಚಾಯಿತಿಯು ಅಕ್ರಮ ಕಟ್ಟಡದ ವಿರುದ್ಧ ಕ್ರಮಕೈಗೊಳ್ಳದೆ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಆ ಕಟ್ಟಡವನ್ನು ತೆರವುಗೊಳಿಸುವವರೆಗೆ ನಿರಂತರ ಪ್ರತಿಭಟನೆ ನಡೆಸಲಾಗು ವುದು ಎಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಮಾತೃ ಸುರಕ್ಷಾ ಪ್ರಮುಖ್ ಗಣರಾಜ ಭಟ್ ಕೆದಿಲ ಹೇಳಿದರು. ಗಂಗೊಳ್ಳಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ತೆರವಿಗೆ ಒತ್ತಾಯಿಸಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯ್ಕ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪ್ರತಿಭಟನೆ ನಿರತರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ನಡೆಸಿದರು. ಕಾನೂನು ಪ್ರಕಾರ ಅಕ್ರಮ ಕಟ್ಟಡ ತೆರವಿಗೆ ಕ್ರಮಕೈಗೊಳ್ಳಲಾಗುವುದು. ಕಟ್ಟಡ ನಿರ್ಮಿಸುವವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು. ಆದಷ್ಟು ಶೀಘ್ರ ಕಟ್ಟಡದ ತೆರವು ಪ್ರಕ್ರಿಯೆ ಪೂರ್ಣವಾಗಲಿದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬರಹಗಾರ ತನ್ನ ಅನುಭವ ಮತ್ತು ತನ್ನದೇ ವಿಶಿಷ್ಟ ನೋಟದಿಂದ ಪರಿಗ್ರಹಿಸುವ ವಸ್ತುವಿನ ಕುರಿತು ತಾನು ರೂಢಿಸಿಕೊಂಡ ವಿಶಿಷ್ಟ ಭಾಷಾ ಶೈಲಿಯನ್ನು ಬಳಸಿ ರಚಿಸುವ ಕೃತಿ ಸೃಜನಶೀಲ ಸಾಹಿತ್ಯ ಎನಿಸುತ್ತದೆ. ಅದು ಅನುಕರಣೆ ಆಗಿರದೆ ಹೊಸ ಸೃಷ್ಟಿಯಾಗಿರುತ್ತದೆ ಎಂದು ಉಡುಪಿ ಜಿ. ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ರವಿರಾಜ ಶೆಟ್ಟಿ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯ ಪ್ರಸಕ್ತ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಕೃತಿಯ ಆಧಾರ ಮತ್ತು ಅನುಕರಣೆಯಿಂದ ರಚಿಸುವ ಕೃತಿಗಳು ಸೃಜನೇತರ ಸಾಹಿತ್ಯ ವಿಭಾಗಕ್ಕೆ ಸೇರುತ್ತವೆ. ಎರಡೂ ಪ್ರಕಾರಗಳಿಗೆ ಅದರದೇ ಆದ ಮಹತ್ವ ಇದೆ ಎಂದ ಅವರು ಕನ್ನಡದ ವಿವಿಧ ಕೃತಿಗಳನ್ನು ಉದಾಹರಿಸಿ, ಸೃಜನಶೀಲ ಸಾಹಿತ್ಯದ ಸ್ವರೂಪ ಮತ್ತು ವೈಶಿಷ್ಟ್ಯವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಘು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ವೇದಿಕೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ರೂಪಾಂತರ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಾಗಿ , ಜಿಲ್ಲೆಗೆ ಕೇರಳ ಮತ್ತು ಮುಂಬೈಯಿಂದ ಬರುವವರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೂಪಾಂತರಿ ಕೋವಿಡ್ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಈ ಹಿಂದೆ ಕೋವಿಡ್ ಚಕಿತ್ಸೆಗೆ ಗುರುತಿಸಿದ್ದ ಆಸ್ಪತ್ರೆಗಳಲ್ಲಿ , ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಹಾಗೂ ಉಪಕರಣಗಳನ್ನು ಸಿದ್ದ ಮಾಡಿಟ್ಟುಕೊಳ್ಳಿ, ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದರ ಕುರಿತಂತೆ ಹೆಚ್ಚು ಜಾಗೃತಿ ಮೂಡಿಸಿ, ಬಾಂಬೆ ಮತ್ತು ಕೇರಳದಿಂದ ಬರುವವರು 72 ಗಂಟೆಗಳ ಮೊದಲು ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿ ಪಡೆದಿರುವ ಕುರಿತು ಪರಿಶೀಲನೆ ನಡೆಸಿ ಎಂದರು. ಜಿಲ್ಲೆಯಲ್ಲಿ ಇದುವರೆಗೆ 359039 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 335501 ನೆಗೆಟಿವ್ ವರದಿ ಬಂದಿದೆ, 23538…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ‘ಡೆವಲಪ್ಮೆಂಟ್ ಆಫ್ ಸಿಗ್ನಲ್ಸ್ ಆಂಡ್ ಸಿಸ್ಟಮ್ಸ್ ಯುಸಿಂಗ್ ಮ್ಯಾಟ್ ಲ್ಯಾಬ್’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಉಷಾ ದೆಸಾಯಿ ಭೇಟಿ ನೀಡಿ, ಕಾರ್ಯಾಗಾರವನ್ನು ಉದ್ಘಾಟಿಸಿ ನಮ್ಮ ದಿನ ನಿತ್ಯದ ಜೀವನದಲ್ಲಿ ಸಿಗ್ನಲ್ಸ್ ಹೇಗೆ ಅವಿಭಾಜ್ಯ ಅಂಗವಾಗಿದೆ ಎಂದು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮಾತನಾಡಿ, ಪಠ್ಯದ ಜೊತೆಗೆ ಅದಕ್ಕೆ ಪೂರಕವಾದ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು, ಹಾಗೂ ಕಾರ್ಯಾಗಾರ ಸಂಯೋಜಕರನ್ನು ಅಭಿನಂದಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ ಮಾತನಾಡಿ, ಕಾರ್ಯಾಗಾರವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜಿನ ಡೀನ್, ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗು…
