Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಅನುದಾನವನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ತಮ್ಮ ಕಛೇರಿಯ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ. ಜಾತಿ ಮತ್ತು ಪ. ಪಂಗಡ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ.ಜಾತಿ ಮತ್ತು ಪ.ಪಂಗಡಗಳ ಜನರ ಸಮಗ್ರ ಅಭಿವೃದ್ಧಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ವಿವಿಧ ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದರು. ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನ ಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಹೆಚ್ಚು ಪ್ರಚಾರಪಡಿಸುವುದರ ಜೊತೆಗೆ ಸಹಾಯವಾಣಿಗಳನ್ನು ತೆರೆಯುವ ಮೂಲಕ ಯೋಜನೆಗಳ ಇತರೆ ಮಾಹಿತಿಯನ್ನು ನೀಡಬೇಕು ಎಂದ ಅವರು, ಎಲ್ಲಾ ಇಲಾಖೆಗಳ ಯೋಜನಾ ಕಾರ್ಯಕ್ರಮಗಳ ಮಾಹಿತಿಯ ಮಡಿಕೆ ಪತ್ರಗಳನ್ನು ತಯಾರಿಸಿ ಗ್ರಾ.ಪಂ ಸದಸ್ಯರು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದರು. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಟ್ಟಣದ ಹೋಟೆಲ್ ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಮುದೂರು ಸಮೀಪದ ಬಸ್ರಿಬೇರು ನಿವಾಸಿ ಪ್ರಶಾಂತ್ (19) ಮೃತ ದುರ್ದೈವಿ. ಮಗನ ಸಾವಿನ ಬಗ್ಗೆ ಪೋಷಕರು ಶಂಕೆ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆಯಲ್ಲ ಎಂದಿದ್ದಾರೆ. ಬಸ್ರಿಬೇರಿನ ಲಚ್ಚು ನಾಯ್ಕ್ – ಗೌರಿ ದಂಪತಿಗಳ ಮೂವರು ಮಕ್ಕಳಲ್ಲಿ ಕೊನೆಯವನಾದ ಪ್ರಶಾಂತ್ ಎಸ್.ಎಸ್.ಎಲ್.ಸಿ. ಬಳಿಕ ಹೋಟೆಲ್ ಕೆಲಸಕ್ಕೆ ಸೇರಿದ್ದ. ಅ.20 ಬುಧವಾರ ಸಂಜೆ ಮನೆಯವರಿಗೆ ಕರೆ ಮಾಡಿ ಲವಲವಿಕೆಯಿಂದಲೇ ಮಾತನಾಡಿದ್ದಲ್ಲದೇ, ಆತನ ಸಹೋದರನ ಖಾತೆಗೆ 5000 ಹಣ ಜಮಾ ಮಾಡಿದ್ದ. ಮುಂದಿನ ತಿಂಗಳು ಮನೆಗೆ ಬರುವುದಾಗಿ ಈ ವೇಳೆ ತಿಳಿಸಿದ್ದ ಎನ್ನಲಾಗಿದೆ. ಗುರುವಾರ ಮುಂಜಾನೆ ಹೋಟೆಲ್ ಸಿಬ್ಬಂದಿ ಮನೆಯವರಿಗೆ ಕರೆ ಮಾಡಿ ಪ್ರಶಾಂತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪೋಷಕರು, ಸಂಬಂಧಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಮಧ್ಯರಾತ್ರಿ ವೇಳೆ ಯುವಕ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು‘ ಏನು ಇಲ್ಲದವನ ಮುಂದೆ ಎಲ್ಲಾ ಇದ್ದವನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾವನಾತ್ಮಕ ಗಾಯಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂತ ಆಗ್ನೇಸ್ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ದೀಪಾ ಕೊಠಾರಿ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಮೆನ್ ವೆಲ್ ಫೇರ್ ಕಮಿಟಿ ವತಿಯಿಂದ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಭಯ, ನಿರಾಕರಣೆ ಹಾಗೂ ಸೋಲಿನಿಂದ ಉಂಟಾಗುವ ಭಾವನಾತ್ಮಕ ಬದಲಾವಣೆಗಳು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮಲ್ಲಿರುವ ಭಾವನೆಗಳನ್ನು ಒಪ್ಪಿಕೊಂಡು ಅದರೊಂದಿಗೆ ಬದುಕುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು. ವದಂತಿಗಳಿಂದ ದೂರವಿದ್ದು, ವೈಫಲ್ಯದ ಕಾರಣಗಳನ್ನು ಮರು ವ್ಯಾಖ್ಯಾನಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್ ವಹಿಸಿದ್ದರು, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನ ಸ್ವಾಗತಿಸಿದರು, ಸುರಭಿ ವಂದಿಸಿದರು, ರೋಶ್ನಿ ಅತಿಥಿಯನ್ನು ಪರಿಚಯಿಸಿದರು. ಮೀಶ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೃಷಿಕರು ಆಧುನಿಕ ಕೃಷಿ ಚಟುವಟಿಕೆಗಳಿಗೆ ಒಗ್ಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿಕೊಳ್ಳಬೇಕು, ದೇವಾಲಯಗಳಂತೆ ಕೃಷಿಯು ಅತ್ಯಂತ ಪಾವಿತ್ರ್ಯತೆ ಹೊಂದಿರುವ ಕ್ಷೇತ್ರವಾಗಿದ್ದು, ಪರಿಶ್ರಮದ ಕೃಷಿಯ ಮೂಲಕ ಹೆಚ್ಚಿಸಿ ಸಂಪತ್ತು ಗಳಿಸಲು ಸಾಧ್ಯವಾಗುತ್ತದೆ ಎಂದು ಎಂದು ಧರ್ಮಸ್ಥಳ ಧರ್ಮಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಿ. ಬೈಂದೂರು ತಾಲೂಕು ವತಿಯಿಂದ ಕೃಷಿ ಮನೆ ನಾಯ್ಕನಕಟ್ಟೆಯಲ್ಲಿ ಸ್ಥಳಾಂತರಗೊಳ್ಳುತ್ತಿರುವ ಕೃಷಿ ಯಂತ್ರಗಳ ಬಾಡಿಗೆ ಸೇವಾ ಕೇಂದ್ರ ಮತ್ತು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ಕಚೇರಿ ಉದ್ಘಾಟಿಸಿ ಮಾತನಾಡಿದರು. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 3666 ಸ್ವ-ಸಹಾಯ ಸಂಘಗಳಿವೆ. ಬಹುತೇಕ ಎಲ್ಲಾ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಎ ಗ್ರೇಡ್‌ನಲ್ಲಿ ಗುರುತಿಸಿಕೊಂಡಿದೆ. ತಾಲೂಕು ವ್ಯಾಪ್ತಿಯಲ್ಲಿನ ಸ್ವ ಸಹಾಯಗಳು ಈ ಬಾರಿ 8.53 ಕೋಟಿ ರೂ. ಲಾಭಗಳಿಸಿದ್ದು, ಪ್ರತಿ ಸದಸ್ಯರು ತಲಾ 22 ಸಾವಿರ ರೂ. ಲಾಭಾಂಶ ಹಂಚಿಕೊಂಡಿದ್ದಾರೆ. ಸ್ವಹಾಯ ಸಂಘದ ಮೂಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನ ನನ್ನ ತವರು ಮನೆ ಇದ್ದಂತೆ. ಈ ದೇವಳದ ಶುದ್ಧತೆ ನಿಜಕ್ಕೂ ಅದ್ಭುತವಾಗಿದೆ. ರಾಜ್ಯ, ಹೊರರಾಜ್ಯದಿಂದ ಬರುವ ಭಕ್ತರಿಗೆ ಕಿಂಚಿತ್ತು ಸಮಸ್ಯೆಯಗದಂತೆ ವ್ಯವಸ್ಥೆ ಮಾಡಿರುವುದು ಬಹಳ ಸಂತಸವಾಗುತ್ತದೆ ಎಂದು ಚಲನಚಿತ್ರ ಹಿರಿಯ ನಟಿ ಲಕ್ಷ್ಮೀ ಹೇಳಿದರು. ಅವರು, ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ದೇವಳದ ಪುರೋಹಿತ ಸುರೇಶ ಭಟ್ ಅವರಿಗೆ ದೇವರ ಪ್ರಸಾದ ನೀಡಿ ಗೌರವಿಸಿದರು. ಹಿರಿಯ ನಟಿ ಲಕ್ಷ್ಮೀ ಅವರು, ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲೆಯಾಳಿ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ ಅವರು ಪಂಚಭಾಷಾ ನಟಿ ಎಂಬ ಖ್ಯಾತಿ ಹೊಂದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶ ಹಾಗೂ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹಳಿತಪ್ಪಿದ್ದು, ಅದನ್ನು ಹಳಿಗೆ ತರುವುದು ಅಷ್ಟು ಸುಲಭವಲ್ಲ ಎನ್ನುವುದು ಬಿಜೆಪಿ ನಾಯಕರುಗಳಿಗೂ ಗೊತ್ತಿದ್ದು, ಈಗ ವಿರೋಧ ಪಕ್ಷದ ನಾಯಕರ ಮೇಲೆ ಆಡಳಿತ ಪಕ್ಷದವರು ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವುದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಒಂದು ತಂತ್ರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕರುಗಳಿಗೆ ಮಾನ, ಮರ್ಯಾದೆ ಇದ್ದರೆ ವಿರೋಧ ಪಕ್ಷದವರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಪಡಲಿ ಅದೆಲ್ಲವನ್ನು ಬಿಟ್ಟು ಅನಾಗರಿಕರಂತೆ ವರ್ತಿಸುವುದು ಸರಿಯಲ್ಲ ಎಂದು ಆಡಳಿತ ಪಕ್ಷವನ್ನು ಟೀಕಿಸಿದರು. ನಳಿನ್ ಕುಮಾರ್ ಕಟೀಲ್ ಒಬ್ಬ ಬುದ್ಧಿ ಸ್ಥಿಮಿತದಲ್ಲಿ ಇರದ ವ್ಯಕ್ತಿ, ವಿರೋಧ ಪಕ್ಷದ ನಾಯಕರುಗಳ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡಿದ ತಕ್ಷಣ ತಾನು ದೊಡ್ಡ ನಾಯಕನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಇದ್ದಾರೆ, ರಾಜಕಾರಣದಲ್ಲಿ ಟೀಕೆಗಳು ಸಾಮಾನ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕರ್ನಾಟಕ ಸ್ವಿಮ್ಮಿಂಗ್ ಅಸೋಶಿಯೇಶನ್ (ರಿ) ಬೆಂಗಳೂರು ವಿಜಯನಗರದ ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆಸಿದ 22ನೆಯ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಸಾಲಿಗ್ರಾಮ ನಿವಾಸಿ ಶ್ರೀಧರ್ ಉಳಿತಾಯ ಅವರು 400 ಮೀಟರ್ ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕ, 100 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನದ ಪದಕ, 50 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನದ ಪದಕ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ,50×4 ರಿಲೇಯಲ್ಲಿ ಬೆಳ್ಳಿಯ ಪದಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರೆ, ಅವರು ಪ್ರಸ್ತುತ ಬಾರಕೂರು ನ್ಯಾಶನಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್‌ನ ಸದಸ್ಯರಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಆಳ್ವಾಸ್ ಕಾಲೇಜಿನಲ್ಲಿ ವಿವಿಧ ವೃತ್ತಿಪರ ಕೋರ್ಸುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾಣಿಜ್ಯ ವಿಭಾಗದ ಎ.ಸಿ.ಸಿ.ಎ. ಕೋರ್ಸಿಗೆ ಇತ್ತೀಚೆಗೆ ಇಂಗ್ಲೆಂಡ್ ನಿಂದ ’ಅಧಿಕೃತ ಕಲಿಕಾ ಕೇಂದ್ರ’ದ ಮಾನ್ಯತೆ ದೊರಕಿದೆ. ಆಳ್ವಾಸ್ ನಲ್ಲಿ 2019-2020ರಿಂದಲೂ ಯು.ಕೆ.ಯಿಂದ ಪ್ರಮಾಣಿತ ಎ.ಸಿ.ಸಿ.ಎ ಮತ್ತು ಯು.ಎಸ್.ಎ. ಯಿಂದ ಪ್ರಮಾಣಿತ ಸಿ.ಎಮ್.ಎ. ಕೋರ್ಸುಗಳು ಚಾಲ್ತಿಯಲ್ಲಿದ್ದು ಉತ್ತಮ ಫಲಿತಾಂಶ ನೀಡುತ್ತಿವೆ. ವಿನಾಯಿತಿ ಸಿಗುವ ವಿಷಯಗಳು: ಎಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಟೆಂಟ್ (ಎ.ಸಿ.ಸಿ.ಎ) ಮೂರು ವರ್ಷದ ಕೋರ್ಸಾಗಿದ್ದು ಒಟ್ಟು 13 ಪತ್ರಿಕೆಗಳನ್ನು ವಿದ್ಯಾರ್ಥಿಗಳು ಬರೆಯಬೇಕಾಗುತ್ತದೆ. ಆಳ್ವಾಸ್ ಕಾಲೇಜಿಗೆ ಸಿಕ್ಕಿರುವ ಈ ‘ಅಧಿಕೃತ ಕಲಿಕಾ ಕೇಂದ್ರದ ಮಾನ್ಯತೆಯ ಫಲವಾಗಿ ಬಿ.ಕಾಂ. ವಿದ್ಯಾರ್ಥಿಗಳಿಗೆ 5 ವಿಷಯಗಳಲ್ಲಿ ವಿನಾಯಿತಿ ದೊರೆಯಲಿದೆ. ಬಿಸಿನೆಸ್ ಆಂಡ್ ಟೆಕ್ನೋಲಾಜಿ, ಮ್ಯಾನೇಜ್ ಮೆಂಟ್ ಎಕೌಂಟಿಂಗ್, ಫೈನಾನ್ಶಿಯಲ್ ಎಕೌಂಟಿಂಗ್, ಕಾರ್ಪೋರೇಟ್ ಆಂಡ್ ಬಿಸಿನೆಸ್ ಲಾ, ಮತ್ತು ಟ್ಯಾಕ್ಸೇಶನ್ ಪತ್ರಿಕೆಗಳು ವಿನಾಯಿತಿಗೆ ಒಳಪಡುವ ವಿಷಯಗಳಾಗಿವೆ. ಈ ಹಿನ್ನಲೆಯಲ್ಲಿ 2021-22ರ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ಪದವಿಯೊಂದಿಗೆ ಎ.ಸಿ.ಸಿ.ಎ. ಕಲಿಯುವ ವಿದ್ಯಾರ್ಥಿಗಳು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಧರ್ಮಸ್ಥಳ ವತಿಯಿಂದ ನೂತನವಾಗಿ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಅಸೋಡು-ಬಂಡ್ಸಾಲೆಯಲ್ಲಿ ಆರಂಭಿಸಿದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಅನಿಶ್ಚಿತತೆಯಿಂದ ರೈತರಿಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅನಗತ್ಯ ಖರ್ಚಿಗೆ ನಿಯಂತ್ರಣ, ಕೃಷಿಯಲ್ಲಿ ಸುಧಾರಿತ ಪದ್ದತಿ, ಯಂತ್ರೋಪಕರಣಗಳ ಸಮರ್ಪಕ ಬಳಕೆಯಿಂದ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯವಿದೆ. ಕೊರೋನಾದಂತಹ ಸಂದಿಗ್ದತೆ ಎರಡು ವರ್ಷ ಕಾಡಿದರೂ ಕೂಡ ಅನ್ನದಾತ ಕರ್ಮಯೋಗ ಬಿಡಲಿಲ್ಲ. ಹಾಗಾಗಿ ಆಹಾರದ ಸಮಸ್ಯೆ ಕಾಡಲಿಲ್ಲ. ರೈತ ಈ ಸಂದರ್ಭದಲ್ಲಿ ತಟಸ್ಥನಾಗಿರುತ್ತಿದ್ದರೆ ಕೊರೋನಾಕ್ಕಿಂತ ಹೆಚ್ಚು ಸಾವು ಆಹಾರವಿಲ್ಲದೇ ಸಂಭವಿಸುತ್ತಿತ್ತು. ಹಾಗಾಗಿ ಕೃಷಿ ಅವಲಂಬಿತರನ್ನು ಇನ್ನಷ್ಟು ಉತ್ತೇಜಿಸುವ ಕೆಲಸ ಆಗಬೇಕು. ಭರವಸೆ ಮೂಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು. ಕೃಷಿಯಲ್ಲಿ ಇವತ್ತು ಅನಗತ್ಯವಾದ ಖರ್ಚು ಹೆಚ್ಚಳವಾದ್ದರಿಂದ ಲಾಭಾಂಶ ಕಡಿಮೆಯಾಗುತ್ತಿದೆ. ಆದಾಯ ಹೆಚ್ಚಳ ಮಾಡುವ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಈ ಶಿಬಿರದ ಸಂಪೂರ್ಣ ಸದೋಪಯೋಗವನ್ನು ಪಡೆದುಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಎಸ್ ಶೆಟ್ಟಿ ಹೇಳಿದರು. ಅವರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ತೆಕ್ಕಟ್ಟೆ, ಗ್ರಾಮ ಪಂಚಾಯತ್ ಕೆದೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೆದೂರು ಹಾಗೂ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಕೆದೂರಿನ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ 10 ದಿನಗಳ ಕಾಲ ಉಚಿತವಾಗಿ ನಡೆಯುವ ಧ್ಯಾನ ಯೋಗ ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯಾ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಜಿಲ್ಲೆ ವಲಯ 1ರ ಅಧ್ಯಕ್ಷ ಕೆ.ಸೀತಾರಾಮ ಶೆಟ್ಟಿ ಶುಭಾಶಂಸನೆಗೈದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಾಲತಿ, ಪಂಚಾಯತ್ ಸದಸ್ಯರಾದ ಉಲ್ಲಾಸ್ ಕುಮಾರ್ ಹೆಗ್ಡೆ, ಲಯನ್ಸ್ ಅಧ್ಯಕ್ಷ ಧರ್ಮರಾಜ ಮುದಲಿಯಾರ್, ಕಾರ್ಯದರ್ಶಿ ಹರ್ಷವರ್ಧನ್ ಶೆಟ್ಟಿ, ಖಜಾಂಚಿ ಕಿಶೋರ್ ಕುಮಾರ್ ಶೆಟ್ಟಿ, ಲಿಯೋ ಅಧ್ಯಕ್ಷ ಮೋಹನ್ ರಾಜ್ ಮುದಲಿಯಾರ್,…

Read More