Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇವರ ಸಾಮಿಪ್ಯ ಸಾಧಿಸಲು ಅನುಸರಿಸುವ ನವವಿಧ ಭಕ್ತಿಮಾರ್ಗಗಳಲ್ಲಿ ಭಜನೆಯೂ ಒಂದು. ಅನ್ಯ ಮಾರ್ಗಗಳ ಅನುಸರಣೆ ಸಾಮಾನ್ಯರಿಗೆ ಕಷ್ಟವೆನಿಸುವುದರಿಂದ ಭಜನೆ ಸುಲಭದ ಮಾರ್ಗವೆನಿಸಿ, ನಮ್ಮ ಕಾಲಕ್ಕೆ ತುಂಬ ಪ್ರಶಸ್ತವೆನಿಸಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಹೇರಂಜಾಲು ಗ್ರಾಮದ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಅಖಂಡ ಭಜನಾ ಸಪ್ತಾಹದ ನಡುವೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಂದಾಜು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ರಾಜಗೋಪುರ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿ ಕೀರ್ತನೆಯ ಮೂಲಕ ದೇವರನ್ನು ಒಲಿಸಿಕೊಂಡ ಹಲವು ದೃಷ್ಟಾಂತಗಳಿವೆ. ಅದು ಸಾಧ್ಯವಾಗಬೇಕಾದರೆ ದುಶ್ಚಟಗಳಿಂದ ದೂರರಾಗಿ, ದೀಕ್ಷಾಬದ್ಧರಾಗಿ ಅದನ್ನು ಅನುಸರಿಸಬೇಕು. ದೇವರನ್ನು ತನ್ನೊಳಗೆ ಆಹ್ವಾನಿಸಿಕೊಳ್ಳಬೇಕು ಎಂದರು. ಭಜನೆಯ ಮಹತ್ವ ಅರಿತ ಕಾರಣ ಧರ್ಮಸ್ಥಳ ಕ್ಷೇತ್ರ ಸಾಮೂಹಿಕ ಭಜನೆಗೆ ತರಬೇತಿಯ ಮೂಲಕ ಜನರನ್ನು ಅಣಿಗೊಳಿಸುತ್ತಿದೆ. ಭಜನೆಯಲ್ಲಿ ಎಲ್ಲ ವರ್ಗದ ಜನರು ಭೇದ ಮರೆತು ಒಂದಾಗುತ್ತಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ನಾಕಟ್ಟೆಯಿಂದ ಯಡ್ತರೆ ಜಕ್ಷನ್ ಮೂಲಕ ಹೊರಟ ಶ್ರೀನಿವಾಸ ಪದ್ಮಾವತಿಯರ ಮದುವೆ ದಿಬ್ಬಣ ವತ್ತಿನಕಟ್ಟೆ ಕಲಾಣ್ಯೋತ್ಸವ ಸ್ಥಳಕ್ಕೆ ಆಗಮಿಸಿದ ಬಳಿಕ ಕಲ್ಯಾಣೋತ್ಸವದ ಪ್ರಕ್ರಿಯೆಗಳು ಆರಂಭಗೊಂಡವು. ಆರಂಭದಲ್ಲಿ ದೀಪಿಕಾ ಪಾಂಡುರಂಗಿ ಅವರ ದಾಸರ ಪದಗಳ ಗಾಯನ ಜರುಗಿತು. ತಿರುಪತಿ ಆಚಾರ್ಯರು, ದಾಸ ಶೈಲಿಯಲ್ಲಿ ಬೆಂಗಳೂರಿನ ಶ್ರೀ ವಾರಿ ಫೌಂಡೇಶನ್ ನಿರೂಪಣೆಯಲ್ಲಿ ಕಲ್ಯಾಣೋತ್ಸವವನ್ನು ನಡೆಸಿದರು. ಸಂಪೂರ್ಣ ಕಾರ್ಯಕ್ರಮದ ವೀಡಿಯೋ ನೋಡಿ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿಯ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ, ದೊಟ್ಟಯ್ಯ ಪೂಜಾರಿ, ನಾಗರಾಜ ಗಾಣಿಗ ಬಂಕೇಶ್ವರ, ಕೃಷ್ಣಯ್ಯ ಮದ್ದೋಡಿ, ರವೀಂದ್ರ ಶ್ಯಾನುಭಾಗ್, ಉದಯ ಆಚಾರ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಗ್ ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ತಮ್ಮ ಗೆಲುವಿನ ಬಳಿಕ ಹುಟ್ಟೂರು ಆರ್ಡಿಯಲ್ಲಿರುವ ಚಿಕ್ಕಪ್ಪ ಗುಣಕರ ಶೆಟ್ಟಿ ನಿವಾಸಕ್ಕೆ ಮೊದಲ ಬಾರಿಗೆ ಆಗಮಿಸಿ, ಕುಟುಂಬಿಕರು ಹಾಗೂ ಸ್ಥಳೀಯರೊಂದಿಗೆ ಗೆಲುವಿನ ಖುಷಿಯನ್ನು ಹಂಚಿಕೊಂಡರು. ಈ ಸಂದರ್ಭ ಶೈನ್ ಮಾತನಾಡಿ, ಪ್ರತಿಭೆಗೆ ಗ್ರಾಮೀಣ, ನಗರ ಎಂಬ ಭೇದವಿಲ್ಲ. ಎಲ್ಲರೂ ಒಂದೇ. ಆದರೆ ಪರಿಶ್ರಮ ಅಗತ್ಯ. ಬಿಗ್‌ಬಾಸ್ ಗೆಲುವಿನ ಹಿಂದೆ ಒಂಬತ್ತು ವರ್ಷಗಳ ಪರಿಶ್ರವಿದೆ. ಜೊತೆಗೆ ಜನರ ಪ್ರೀತಿ ದೊರೆತಿದ್ದರಿಂದ ಗೆಲುವು ಸಾಧ್ಯವಾಯಿತು. ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ್ದರೆ ಜನರ ಖಂಡಿತ ಗುರುತಿಸುತ್ತಾರೆ. ಕರಾವಳಿಯ ಹೆಮ್ಮೆ ಎಂದು ಪ್ರೀತಿಯಿಂದ ಹೇಳುತ್ತಿದ್ದವರಿಗೆ ಹೆಮ್ಮ ಪಡುವ ಕೆಲಸವನ್ನು ಮಾಡಿ ತೋರಿಸಿದ್ದೇನೆ. ನಮ್ಮವರಿಗೆ ಸ್ವಲ್ಪ ಗತ್ತು ಜಾಸ್ತಿ. ಗತ್ತಿರಲಿ ಆದರೆ ಗತ್ತು ನಮ್ಮನ್ನು ನುಂಗದಿರಲಿ ಎಂದರು. ಶೈನ್ ಶೆಟ್ಟಿ ಅವರೊಂದಿಗೆ ಯುವಕರು ಸೆಲ್ಪಿ ತೆಗೆದುಕೊಂಡು, ಆಟೋಗ್ರಾಫ್ ಪಡೆದು ಖುಷಿಪಟ್ಟರು. ಹಿಲಿಯಾಣದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ಕರುಣಾಕರ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೊವಾಡಿಯ ಹಿರಿಯ ಪ್ರಾಥಮಿಕ ಶಾಲೆಯ 1997-98 ರ ಸಾಲಿನ ವಿದ್ಯಾರ್ಥಿಗಳು ಕೊಡಮಾಡಿದ ಎರಡು ಕಂಪ್ಯೂಟರ್‌ಗಳನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅನಂತ ಮೊವಾಡಿ ಮಾತನಾಡಿ ಶಾಲೆಯ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಹಳೆ ವಿದ್ಯಾರ್ಥಿಗಳ ಈ ತೆರನಾದ ಕೊಡುಗೆ ಎಲ್ಲರಿಗೂ ಮಾದರಿಯಾಗಿರಲಿ‌‌‌. ಸಮಾಹದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗುವಂತಾಗಲಿ ಎಂದು ಹೇಳಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರಾದ ಸಂಧ್ಯಾ ಕಾರಂತ ಅಧ್ಯಕ್ಷ ತೆ ವಹಿಸಿದ್ದರು. ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶೇಖರ ಗಾಣಿಗ, ಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ಐತಾಳ್, ಹಕಲೆ ವಿದ್ಯಾರ್ಥಿಗಳ ಪರವಾಗಿ ಮೆಸ್ಕಾಂನ ಎ.ಇ. ಶಶಿರಾಜ್, ಭರತ್ ಆಚಾರ್ಯ ಎಸ್ ಡಿ ಎಮ್ ಸಿ ಸದಸ್ಯರು, ಶಿಕ್ಷಕರು , 1997-98 ಸಾಲಿನ ಹಳೆ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶರಾವತಿ ವಂದಿಸಿದರು. ಸಹಶಿಕ್ಷಕ ದೇವದಾಸ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿ, ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣ ಅತ್ಯವಶ್ಯವಾಗಿದೆ. ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದ ಕಾಣುವಂತಾಗಬೇಕು. ಇದು ಭಜನೆಯಿಂದ ಮಾತ್ರ ಸಾಧ್ಯ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಬೈಂದೂರು ವತ್ತಿನೆಣೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಅಷ್ಟಬಂಧ ಪುನಃಪ್ರತಿಷ್ಠೆ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಅಖಂಡ ಭಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಹಿಂದು ಧರ್ಮದಲ್ಲಿ ಭಜನೆಗೆ ಹೆಚ್ಚಿನ ಮಹತ್ವವಿದೆ. ಅನೇಕ ದಾಸವರೇಣ್ಯರು ಕೂಡ ಭಜನೆ ಮೂಲಕ ಸದ್ಗತಿ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ವಿವಿಧ ರೀತಿಯಲ್ಲಿ ದೇವರ ಸ್ಮರಣೆ ಮಾಡುತ್ತಿರಬೇಕು. ದೇವರ ಸೇವೆ, ಭಜನೆಯನ್ನು ಭಕ್ತಿಯಿಂದ ಮಾಡಿದರೆ ಫಲ ಪ್ರಾಪ್ತಿಯಾಗುತ್ತದೆ. ದೇವರ ವಿಸ್ತಾರವನ್ನು ಅರಿತುಕೊಂಡು ಹಾಗೂ ಉಪಕರಣಗಳ ಜತೆಗೆ ಅಂತಃಕರಣದಿಂದ ಭಜಿಸಿದಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 2020-25ರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ, ಪಡುಕೋಣೆ ಆಯ್ಕೆಯಾದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.೧೫ರಂದು ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಬಸ್ರೂರು, ಜೇಕಬ್ ಡಿ’ಸೋಜ, ಕುಂದಾಪುರ, ವಿನೋದ್ ಕ್ರಾಸ್ಟೊ, ಕುಂದಾಪುರ, ಬ್ಯಾಪ್ಟಿಸ್ಟ್ ಡಾಯಸ್, ಸಂತೆಕಟ್ಟೆ, ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ, ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ, ಶಾಂತಿ ಡಾಯಸ್, ಬೈಂದೂರು, ಪ್ರಕಾಶ್ ಲೋಬೊ, ಗಂಗೊಳ್ಳಿ, ವಿಲ್ಸನ್ ಡಿ’ಸೋಜ, ಶಿರ್ವಾ, ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಕಾರ್ಕಳ, ಓಝ್ಲಿನ್ ರೆಬೆಲ್ಲೊ, ತಲ್ಲೂರು, ವಿಲ್ಫ್ರೇಡ್ ಮಿನೇಜಸ್, ಹಂಗಳೂರು, ತಿಯೋದರ್ ಒಲಿವೆರಾ, ಕೋಟಾ, ಟೆರೆನ್ಸ್ ಸುವಾರಿಸ್, ಉಡುಪಿ, ಡೆರಿಕ್ ಡಿ’ಸೋಜ, ಸಾಸ್ತಾನ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ. ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಗುರುಪ್ರಸಾದ ರಾಜ್ಯ ಸರಕಾರಿ ನೌಕರರಿಗಾಗಿ ಎರ್ಪಡಿಸಿದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಾದ್ಯಸಂಗೀತದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಗಿರುತ್ತಾರೆ ಹಾಗೂ ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ವಿದ್ವಾನ್ ಅಲೆವೂರು ಸುಂದರ ಸೇರಿಗಾರ್ ಅವರ ಶಿಷ್ಯರಾಗಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಮನೆ ಹಂತದಲ್ಲಿ ತ್ಯಾಜ್ಯ ವಿಂಗಡನೆ ಹಾಗೂ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ನನ್ನ ಕಸ ನನ್ನ ಜವಾಬ್ದಾರಿ ಅಥವಾ ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ ಎಂಬ ವಿಷಯದ ಕುರಿತು ಸ್ವಚ್ಛ ಭಾರತ-ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಬಂಧನೆಗಳು: ಸ್ವಚ್ಛ ಭಾರತ್- ಕಿರುಚಿತ್ರ ಸ್ಪರ್ಧೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಇವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಆಸಕ್ತರಿಗೆ ಮುಕ್ತ ಅವಕಾಶವಿದೆ. ಕಿರುಚಿತ್ರವನ್ನು ತುಳು, ಕನ್ನಡ ಅಥವಾ ಆಂಗ್ಲಬಾಷೆಯಲ್ಲಿ ಮಾಡಬಹುದು. ಕಿರುಚಿತ್ರದ ಗರಿಷ್ಟ ಅವಧಿಯು ೩ ನಿಮಿಷಗಳಾಗಿದ್ದು, ಕಿರುಚಿತ್ರವನ್ನು ಮಾರ್ಚ್ ೧ ಒಳಗಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಿಲ್ಲಾ ಪಂಚಾಯತ್, ಉಡುಪಿ ರಜತಾದ್ರಿ, ಮಣಿಪಾಲ ಇಲ್ಲಿಗೆ (ಡಿವಿಡಿ/ ಯುಎಸ್‌ಬಿ ಡ್ರೈವ್ ಓನ್ಲೀ) ಸಲ್ಲಿಸಬೇಕು, ನಂತರ ಬಂದ ಕಿರುಚಿತ್ರಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಭಾಸ್ಕರ್ ಅಮೀನ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಭಿವೃದ್ಧಿಯ ಅವಶ್ಯಕತೆಯ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ರಾಜೇಂದ್ರ ನಾಯಕ್ ಮಾತನಾಡಿ ವರು ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿರುವ ಉದ್ಯೋಗವಕಾಶಗಳು ಮತ್ತು ಉದ್ಯೋಗ ಸಾಮರ್ಥ್ಯದ ನಡುವಿನ ಅಂತರವನ್ನು ಕಡಿಮೆ ಮಾಡಿ ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕಾದರೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಗತ್, ಆಪ್ತ ಸಮಾಲೋಚಕರು ಮತ್ತು ತರಬೇತುದಾರರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಸ್.ಡಬ್ಲ್ಯೂ.ಒ ಡಾ. ಉಷಾದೇವಿ ಜೆ.ಎಸ್, ಐ.ಕ್ಯು.ಎ.ಸಿ ಸಂಚಾಲಕರಾದ ಗಣೇಶ ಪೈ ಎಂ., ಉದ್ಯೋಗ ಮಾರ್ಗದರ್ಶನ ಅಧಿಕಾರಿಗಳಾದ ಡಾ ಸುಬ್ರಮಣ್ಯ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಪೋರೇಟ್ ಕಂಪೆನಿಗಳು ದೇಶದ ಕೃಷಿ ಕ್ಷೇತ್ರವನ್ನು ಆಳುತ್ತಿವೆ. ಆಧೂ ಕೃಷಿಯ ಬೀಜ, ಗೊಬ್ಬರ, ನೀರು, ಮಾರುಕಟ್ಟೆ, ಸಾರಿಗೆ ಹೀಗೆ ಎಲ್ಲದರ ಹಿಡಿತ ಸಾಧಿಸಿದ್ದು, ರೈತನ ಶ್ರಮಕ್ಕೆ ತಕ್ಕಂತೆ ಬೆಲೆ ನಿರ್ಧರಿಸುವ ಹಕ್ಕನ್ನೇ ಕಸಿದುಕೊಂಡಿವೆ ಎಂದು ಮ್ಯಾಗ್ಸೇಸೆ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು. ಅವರು ಕುಂದಾಪುರದ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಸಮುದಾಯ ಕುಂದಾಪುರದ ಆಶ್ರಯದಲ್ಲಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ’ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ ರೈತರಿಗಾಗಿ ಇರಬೇಕಾದ ಕೃಷಿ ವಿಶ್ವವಿದ್ಯಾಲಯಗಳು ಇಂದು ಬಂಡವಾಳ ನೀಡುವ ಕಾರ್ಪೋರೇಟ್ ವಲಯದ ಪರವಾಗಿರುವುದರಿಂದಾಗಿ ವಿಶ್ವವಿದ್ಯಾಲಯಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದರು. ದೇಶದಲ್ಲಿ ಉದಾರೀಕರಣ ನೀತಿಯ ಬಳಿಕ ರೈತಾಪಿ ವರ್ಗದ ಸ್ಥಿತಿ ದೈನಸಿ ಸ್ಥಿತಿ ಬಂದು ನಿಂತಿದೆ. ರೈತಾಪಿ ವರ್ಗ ಪರಿಸ್ಥಿತಿಯ ಒತ್ತಡದಿಂದಾಗಿ ಪರಾವಿಲಂಭಿಗಳಾಗುತ್ತಿದ್ದಾರೆ. ಬೀಜ, ರಸಗೊಬ್ಬರ, ವಿದ್ಯುತ್, ನೀರು ಸೇರಿದಂತೆ ಕೃಷಿಕರ ಅಗತ್ಯತೆಗಳ ಬೆಲೆ…

Read More