Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ 2019-20 ನೇ ಸಾಲಿನಲ್ಲಿ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ (Innovation), ತಾರ್ಕಿಕ (Scholastic) ಸಾಧನೆಗಳು, ಕ್ರೀಡೆ, ಸಾಂಸ್ಕೃತಿಕ, ಕಲೆ, ಸಂಗೀತ ಕ್ಷೇತ್ರಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿ ಪ್ರತಿಭಾ ಕ್ಷೇತ್ರದಿಂದ ಇಬ್ಬರಂತೆ ಒಟ್ಟು 8 ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಪ್ರತಿ ಮಗುವಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಮಕ್ಕಳ ವಯಸ್ಸು 5 ರಿಂದ 18 ವರ್ಷದೊಳಗಿರಬೇಕು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಮತ್ತೆ ಪ್ರಶಸ್ತಿ ನೀಡಲು ಅವಕಾಶವಿಲ್ಲ. ಪ್ರಶಸ್ತಿಗೆ ಆಯ್ಕೆಯಾಗುವ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಸಾಧನೆ ಅಸಾಧಾರಣವೆಂದು ಸಮರ್ಥಿಸಲು ಪೂರಕ ದಾಖಲೆಗಳನ್ನು ಒದಗಿಸಬೇಕು. ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿಗೆ ಅಕ್ಟೋಬರ್ 31…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೋಡಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಸೌಹಾರ್ದ ೨೦೧೯ರ ಸಮಾರೋಪ ಸಮಾರಂಭ ಕುಂದಾಪುರದ ಗಾಂಧಿ ಮೈದಾನದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಇಂದಿನ ಕ್ರೀಡಾಕೂಟದಲ್ಲಿ ಹಲವರು ಗೆದ್ದಿದಾರೆ, ಹಲವರು ಸೋತಿದ್ದಾರೆ. ಸೋತ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮುಂದಿನ ದಿನ ತಾವೆಲ್ಲರೂ ದೊಡ್ಡ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಎನ್ನುವುದರ ಮೂಲಕ, ಸೊಲೇ ಗೆಲುವಿನ ಸೋಪಾನ ಎಂದು ಸ್ಪೂರ್ತಿಯ ಮಾತುಗಳನ್ನು ನುಡಿದರು. ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಶ್ರೀಯುತ ಕೆ.ಎಮ್. ಅಬ್ದುಲ್ ರೆಹಮಾನ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ, ಕೋಡಿ ವಹಿಸಿಕೊಂಡಿದ್ದರು. ಹಾಗೆಯೇ ಮುಖ್ಯ ಅತಿಥಿಗಳಾಗಿ ಯಶಪಾಲ್ ಸುವರ್ಣ, ಅಧ್ಯಕ್ಷರು, ಜಿಲ್ಲಾ ಮೀನುಗಾರರ ಸಹಕಾರ ಸಂಘ, ಗಣೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಡವಿನಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಪೂರ್ಣಿಮಾ ಕೆ. ಎಸ್ ಅವರು ಶಾಲೆಗೆ ನೀಡಿರುವ ಸುದೀರ್ಘ ಅವಧಿಯ ಸೇವೆಯನ್ನು ಗುರುತಿಸಿ ಗೌರವಿಸಿ ಬೀಳ್ಕೊಟ್ಟರು. ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ಸಮುದಾಯ ಮತ್ತು ಶಾಲಾ ಎಸ್.ಡಿ.ಎಮ್.ಸಿ. ಯ ಪದಾಧಿಕಾರಿಗಳೊಂದಿಗೆ ಶಾಲಾ ಹಳೆವಿದ್ಯಾರ್ಥಿ ಸಂಘ ಹಾಗೂ ಪಾಲಕ ಬಂಧುಗಳು ಮತ್ತು ಅಂಗನವಾಡಿ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳೊಂದಾಗಿ ಅರಶಿಣ ಕುಂಕುಮವಿಟ್ಟು ನೆನಪಿನ ಕಾಣಿಕೆ ನೀಡಿ ದಂಪತಿಗಳಿಗೆ ಗೌರವಿಸಿ ಅವಿಸ್ಮರಣೀಯ ಬೀಳ್ಕೋಡುಗೆ ನೀಡಿದರು. ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಯ ಅಧ್ಯಕ್ಷೆ ಸುಜಾತ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯೆ ಗೌರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಕೃಷ್ಣ ಶೇರುಗಾರ್, ಹ.ವಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೂಡಬಿದಿರೆಯ ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕ ಡಾ. ಎಂ. ಮೋಹನ ಆಳ್ವ ಅವರನ್ನು ಪ್ರಸಕ್ತ ಸಾಲಿನ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಹಾಗೂ ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಹೇಳಿದರು. ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. ಅ.26ರ ಸಂಜೆ 3:30ಕ್ಕೆ ಇಲ್ಲಿನ ಕೊಲ್ಲೂರು ರಸ್ತೆಯಲ್ಲಿರುವ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ. ಜಗನ್ನಾಥ ಶೆಟ್ಟಿ ಸಭಾಭವನದಲ್ಲಿ ನಡೆಯುವ ಮಂಜಯ್ಯ ಶೆಟ್ಟಿ 106ನೆ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ಗಣ್ಯರನೇಕರು ಉಪಸ್ಥಿತರಿರುವರು. ಇದೇ ಸಮಾರಂಭದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕೋಟ: ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಕಾರಂತ ಟ್ರಸ್ಟ್(ರಿ) ಕೋಟ ಇವರ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯುತ್ತಿರುವ ಡಾ|| ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಡಾ|| ಕಾರಂತ ಜನ್ಮ ದಿನೋತ್ಸವ ಸಂಭ್ರಮ ಸಾಹಿತ್ಯಿಕ-ಸಾಂಸ್ಕೃತಿಕ ಸುಗ್ಗಿ ಪುನರ್ವಸು-2019 (ಮಳೆಬಿಲ್ಲಿನ ಕನವರಿಕೆ) ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ಹಾಗೂ ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ(ರಿ) ಕೋಟ ಇವರು ತರಬೇತಿ ನೀಡಿರುವ ಒಟ್ಟು 200 ವಿದ್ಯಾರ್ಥಿಗಳು ರಚಿಸಿದ ಬೇಸಿಕ್ ಆರ್ಟ್, ಈಝಿ ಫ್ರೀ ಹ್ಯಾಂಡ್ ಸ್ಕೆಚ್ ಮತ್ತು ಆರ್ಟ್, ಪೆನ್ಸಿಲ್ ಆರ್ಟ್ ಮತ್ತು ಶೇಡಿಂಗ್ ಆರ್ಟ್, ಲ್ಯಾಂಡ್ ಸ್ಕೇಪ್ (ಪ್ರಕೃತಿ ಚಿತ್ರಣ), ಕ್ರಾಫ್ಟ್ ವರ್ಕ್ಸ್ ಮತ್ತು ಮಾಡೆಲ್ ಆರ್ಟ್, ಮಾಡರ್ನ್ ಆರ್ಟ್ ಮತ್ತು ಕ್ಯಾನ್‌ವಾಸ್ ಪೈಂಟಿಂಗ್ ಕಲಾತ್ಮಕ ವಿವಿಧ ಕಲಾಚಿತ್ರಗಳು ಪ್ರದರ್ಶನಕ್ಕೆ ಇದೆ. ಬಣ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ನೇತೃತ್ವದಲ್ಲಿ ನಡೆದ ಪ್ರಸಕ್ತ ಬ್ಯಾಂಕುಗಳ ಸನ್ನಿವೇಶ ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸ್ತುತ ಬ್ಯಾಂಕಿನ ವ್ಯವಹಾರದ ಬಗ್ಗೆ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಬ್ಯಾಂಕುಗಳ ಸ್ಥಾಪನೆ, ಅದರ ಕಾರ್ಯನಿರ್ವಹಣೆ, ಇತ್ತೀಚೆಗೆ ಸರ್ಕಾರಿ ಬ್ಯಾಂಕುಗಳ ವಿಲೀನಗೊಳಿಸಿದ್ದರ ಬಗ್ಗೆ ಅಭಿಪ್ರಾಯವನ್ನು ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ವೆಂಕಟರಮಣ ಹೆಗ್ಡೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಾಕರ್ ಪಿ. ಸ್ವಾಗತಿಸಿದರು. ವಿದ್ಯಾರ್ಥಿನಿ ಸುಜಾತ ಖಾರ್ವಿ ಪ್ರಾರ್ಥಿಸಿ, ಆಯಿಷಾ ನಮಿರಾ ಅತಿಥಿಗಳನ್ನು ಪರಿಚಯಿಸಿ, ಮೆಲಿಟಾ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಜ್ಯೋತಿ ಮೊಗವೀರ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲೇಷ್ಯಾ ಎಸ್‌ಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಫೌಂಡೇಶನ್ ಕಾಲೇಜ್ &ರಿಸರ್ಚ್ ಸೆಂಟರ್‌ನಲ್ಲಿ ನಡೆದ ಟ್ರ್ಯಾಕ್ಸ್ ಇಂಟರ್‌ನ್ಯಾಶನಲ್ ಯೋಗದಲ್ಲಿ ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದು ಮರಳಿದ ಮರವಂತೆ ಧನ್ವಿ ಪೂಜಾರಿಗೆ ಗುರುವಾರ ಕುಂದಾಪುರ ತಾಲೂಕು ಬಿಲ್ಲವ ಸಂಘ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಧನ್ವಿ ಪೂಜಾರಿಗೆ ಅದ್ದೂರಿ ಸ್ವಾಗತ ನೀಡಿ ತೆರದ ವಾಹನದಲ್ಲಿ ಮರವಂತೆಯವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು. ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಬಿಲ್ಲವ ಮುಖಂಡರಾದ ಮಂಜು ಬಿಲ್ಲವ, ಭಾಸ್ಕರ ಬಿಲ್ಲವ, ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ನಾರಾಯಣಗುರು ಯುವಕ ಮಂಡಲ, ಮೈಲಾರೇಶ್ವರ ಯುವಕ ಮಂಡಲ, ರಾಯಲ್ ಕ್ಲಬ್, ಕುಂದಾಪುರ ಜೆಸಿಐ, ಸಂಗಮ್ ಫ್ರೆಂಡ್ಸ್ ಕುಂದಾಪುರ, ಕುಂದಾಪುರ ಪುರಸಭೆಯ ಸದಸ್ಯರುಗಳು, ಮಿರಾಕಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕಂಬದಕೋಣೆ ಗ್ರಾಮದ ಎಡಮಾವಿನಹೊಳೆ ಬೊಬ್ಬರ್ಯಗುಂಡಿ ಹೊಳೆಯಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ದಾರುಣ ಘಟನೆ ನಡೆದಿದೆ. ಕಂಬದಕೋಣೆಯ ದೊಡ್ಮನೆ ಹಳಗೇರಿ ನಿವಾಸಿ ವೆಂಕಪ್ಪ ಶೆಟ್ಟಿ ಅವರ ಪುತ್ರ ವಂಶಿತ್ ಶೆಟ್ಟಿ (12) ಹಾಗೂ ಹಳಗೇರಿ ಪಟೇಲರಮನೆ ನಿವಾಸಿ ರತ್ನಾಕರ ಶೆಟ್ಟಿ ಅವರ ಪುತ್ರ ರಿತೇಶ್ ಶೆಟ್ಟಿ (12) ನೀರುಪಾಲದ ದುರ್ದೈವಿ ಬಾಲಕರು. ಕಂಬದಕೋಣೆ ಸಂದೀಪನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ೭ ತರಗತಿ ಕಲಿಯುತ್ತಿರುವ ಈರ್ವರು ಶಾಲೆಗೆ ರಜೆ ಇದ್ದ ಕಾರಣ ಆಟವಾಡಲು ಗೆಳೆಯರೊಂದಿಗೆ ತೆರಳಿದ್ದರು. ಈ ವೇಳೆ ಕಾಲು ತೊಳೆಯಲು ಹೊಳೆಯ ನೀರಿಗಿಳಿದ ಓರ್ವನ ಕಾಲು ಜಾರಿ ನದಿಯಲ್ಲಿ ಮುಳುಗಿದ್ದು, ಇದೇ ಸಂದರ್ಭ ಆತನ ರಕ್ಷಣೆಗೆ ಬಂದ ಇನ್ನೊರ್ವನೂ ಮುಳುಗಿದ್ದಾನೆ. ಸಂಜೆಯ ತನಕ ಶೋಧಕಾರ್ಯ ನಡೆಸಿ ವಂಶಿಕ್ ಶೆಟ್ಟಿಯ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ನಾಪತ್ತೆಯಾಗಿರುವ ಇನ್ನೊರ್ವನಿಗಾಗಿ ಶೋಧಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಆಗಮಿಸಿ ಘಟನೆಯ ಬಗೆಗೆ ಮಾಹಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಹತ್ತಿರದ ಸುಂಕದಗುಂಡಿ ಸೇತುವೆ ಸಮೀಪ ಗುರುವಾರ ನಡೆದ ಲಾರಿ ಹಾಗೂ ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ್ದು, ಸಹ ಪ್ರಯಾಣಿಕ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಸಾವಿಗೀಡಾದ ಚಾಲಕನನ್ನು ವಂಡ್ಸೆ ನಿವಾಸಿ ನಿತೇಶ್ ಮೊಗವೀರ(23) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಸಂತೋಷ ಶೆಟ್ಟಿ (20 )ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವರ್ಷದಿಂದ ಬಾಗಲಕೋಟೆಯಲ್ಲಿ ಹೊಟೇಲ್‌ ನಡೆಸುತ್ತಿದ್ದು, ಮನೆಯಲ್ಲಿ ಪೂಜೆ ಇದ್ದ ಕಾರಣ ಊರಿಗೆ ಬರುತಿದ್ದರು. ಈ ಸಮಯದಲ್ಲಿ ಸ್ನೇಹಿತ ಸಂತೋಷ ಶೆಟ್ಟಿ ಕೂಡ ಜತೆಯಲ್ಲಿ ಹೊರಟಿದ್ದರು. ಸಂಜೆ ವೇಳೆಗೆ ವಿಪರೀತ ಮಳೆ ಬಂದ ಕಾರಣ ತಿರುವಿನಲ್ಲಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾದುದು ಸರಕಾರದ ಕರ್ತವ್ಯ. ಶಾಲಾ ಕೊಠಡಿಗಳಿಲ್ಲದ ಶಾಲೆಗಳಿಗೆ ಸರಕಾರದ ವಿವಿಧ ಯೋಜನೆಗಳ ಮೂಲಕ ಅನುದಾನ ಒದಗಿಸಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ನೂತನ ತರಗತಿ ಕೋಣೆ ನಿರ್ಮಿಸಲು ಅನುದಾನ ಒದಗಿಸಲಾಗಿದ್ದು, ಶಾಲಾ ಕಟ್ಟಡದ ದುರಸ್ಥಿಗೂ ಅನುದಾನ ನೀಡಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಸರಕಾರದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ತರಗತಿ ಕೋಣೆಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಲೂಕು ಪಂಚಾಯತ್ ಸದಸ್ಯರಾದ ನಾರಾಯಣ ಕೆ.ಗುಜ್ಜಾಡಿ, ರಾಜು ದೇವಾಡಿಗ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ ಮೇಸ್ತ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಮಾಜಿ…

Read More