Author: ನ್ಯೂಸ್ ಬ್ಯೂರೋ

ಕತಾರ್ ಕರ್ನಾಟಕ ಸಂಘದಿಂದ ಇಂಜಿನೀಯರ್ಸ್ ಡೇ ಆಚರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ.ದೋಹಾ,ಕತಾರ್: ಕರ್ನಾಟಕ ಸಂಘ ಕತಾರ್‌ನಲ್ಲಿ ಶ್ರೀ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 171ನೇ ಜನ್ಮಶತಮಾನೋತ್ಸವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಮುಂಬೈ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾದ ನಾಗೇಶ್ ರಾವ್ ಅವರು ವಿಶ್ವೇಶ್ವರಯ್ಯನವರ ಈ ಮಾತುಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಬಾಬೂರಾಜನ್ ಉಪಸ್ಥಿತರಿದ್ದರು. ಕರ್ನಾಟಕ ಮೂಲದ ಮೂರು ಅಭಿಯಂತರರು, ವಿವಿಧ ತಾಂತ್ರಿಕ ವಿಷಯಗಳ ಕುರಿತು ಭಾಷಣ ನೀಡಿದರು. ಕತಾರ್ ಗೇಸ್ ಸಂಸ್ಥೆಯಲ್ಲಿ ಹಿರಿಯ ರಾಸಾಯನಿಕ ಅಭಿಯಂತರರಾದ ಶಂಕರಸ ಧರ್ಮದಾಸ್ ತಾಂತ್ರಿಕ ವಿಷಯ ‘ಕಂಟ್ರೋಲ್ ವಾಲ್ವ’ ಬಗ್ಗೆ ಪ್ರಸ್ತುತಪಡಿಸಿದರು, ಮೆಹೂಲ್ ಕನ್ಸಲ್ಟಿಂಗ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸೈಯದ್ ಯಾಸೀನ್ ಅವರು ‘ಕತಾರ್ 2022 ಫುಟ್ಬಾಲ್ ಕ್ರೀಡಾಂಗಣಗಳಿಗೆ ಸಾರಿಗೆ ವ್ಯವಸ್ಥೆ’ ಕುರಿತು ಮಾತನಾಡಿದರು, ಸೇವಿಯಸ್ ಕ್ರಾಸ್ತಾ ಅವರು ‘ಸೇತಿವೆ ನಿರ್ಮಾಣದ ಅಚ್ಚುಗಳ’ ಬಗ್ಗೆ ಪ್ರಸ್ತುತಪಡಿಸಿದರು. ಕರ್ನಾಟಕ ಸಂಘ ಕತಾರ್ ಪ್ರತಿ ವರ್ಷದಂತೆ ಈ…

Read More

ಕುಂದಾಪ್ರ ಡಾಟ್ ಕಾ ಸುದ್ದಿ.ಕುಂದಾಪುರ: ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗೌರವ ಡಾಕ್ಟರೇಟ್ ಪದವಿ ಪಡೆದ ಪ್ರಸಿದ್ಧ ಜಾನಪದ ಕಲಾವಿದ ಗಣೇಶ ಗಂಗೊಳ್ಳಿ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಮೇಲ್‌ಗಂಗೊಳ್ಳಿ, ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಣೇಶ ಗಂಗೊಳ್ಳಿ, ಕಲಾವಿದ ಬೆಳೆಯಬೇಕಾದರೆ ಸಂಘ ಸಂಸ್ಥೆಗಳ, ಕಲಾಭಿಮಾನಿಗಳ ಸಹಕಾರ ಪ್ರೋತ್ಸಾಹ ಬೇಕಿದೆ. ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು. ಡಾ. ಬಿ. ಆರ್. ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಅಕ್ಷಯ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಅಮೃತಾ ಯುವತಿ ಮಂಡಲದ ಅಧ್ಯಕ್ಷೆ ವೇದಾವತಿ ಉಪಸ್ಥಿತರಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವತಿ ಮಂಡಲದ ಕಾರ್ಯದರ್ಶಿ ಅನಿತಾ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಕಾರ್ಯದರ್ಶಿ ಸಹನಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಾತೃಭೂಮಿ ಮಹಿಳಾ ಸಹಕಾರ ಸಂಘ ನಿ. ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಇಲ್ಲಿನ ರೋಟರಿ ಭವನದಲ್ಲಿ ಜರುಗಿತು. ಸಂಸ್ಥೆಯ ಅಧ್ಯಕ್ಷರಾದ ಅನುಸೂಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ, ಜಮಾ ಖರ್ಚು, ಆಸ್ತಿ ಜವಾಬ್ಧಾರಿ ವರದಿ ಮಂಡಿಸಿದರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ಆಶಾ, ನಿರ್ದೇಶಕರಾದ ಲಕ್ಷ್ಮೀ ಬೈಂದೂರು, ಗೀತಾ. ಎಸ್, ಸರಳಾ, ಅಂಬಿಕಾ, ಸಾವಿತ್ರಿ, ನೇತ್ರಾವತಿ, ಮಾಲತಿ, ಗಿರಿಜಾ, ಶ್ಯಾಮಲಾ, ಆಲಿಯಾ ನಾಜ್, ಪ್ರೇಮ, ಸಂಸ್ಥೆಯ ಸಿಬ್ಬಂದಿಗಳಾದ ಶಶಿಕುಮಾರ್, ನಾಗಶ್ರೀ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಯಕಿ ಅಕ್ಷತಾ ಗಂಗೊಳ್ಳಿ ಭಕ್ತಿಗೀತೆ, ಚಿತ್ರಗೀತೆ ಹಾಡಿದರು, ಆಶಾ ಕಿಶೋರ್ ಪ್ರಾರ್ಥಿಸಿದರು, ಸಂಸ್ಥೆಯ ಸಿಬ್ಬಂದಿ ಪ್ರಫುಲ್ಲ ಸ್ವಾಗತಿಸಿದರು. ಪತ್ರಕರ್ತ ಅಂದುಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Read More

ಕುಂದಾಪ್ರ ಡಾಟ್ ಕಾಂ ಸುಸದ್ದಿ.ಬೈಂದೂರು: ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾರ್ಮಿಕರ ಸಂಘ ಕೊಯಾನಗರ ಘಟಕದ ಸವ೯ಸದಸ್ಯರ ಸಭೆಯು ಸ್ಥಳೀಯ ಮೆಸ್ಕಾಂ ಕಚೇರಿ ಬಳಿ ಜರಗಿತು. ಕಾಮಿ೯ಕ ಸಂಘದ ರಾಜ್ಯ ಸಮಿತಿ ಸದಸ್ಯರಾದ ಕಾರ್ಮಿಕ ಮುಖಂಡ ರೊನಾಲ್ಡ್ ರಾಜೇಶ್ ಕ್ವಾಡ್ರಸ್ಕಾರ್ಮಿಕ ಇಲಾಖೆಯಿಂದ ಕೊಡಮಾಡಿದ ಸುರಕ್ಷಾ ಕಿಟ್ ಮತ್ತು ಪ್ರತಿರಕ್ಷಣಾ ಕಿಟ್ ಗಳನ್ನು ಕಾರ್ಮಿಕರಿಗೆ ವಿತರಿಸಿದರು, ಕಿಟ್ ವಿತರಿಸಿ ಮಾತನಾಡಿದಕಾರ್ಮಿಕ ಮುಖಂಡ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಕಾರ್ಮಿಕ ಸಂಘದ ಮೂಲಕವೇ ಅಹಾರ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಮಾಡಿದ ಹೋರಾಟದ ಫಲವಾಗಿ ಇಂದು ನಮ್ಮ ಸಂಘಟನೆಯಿಂದ ಈ ಕಿಟ್ ಗಳನ್ನು ವಿತರಿಸಲು ಸಾಧ್ಯವಾಯಿತು. ಇದು ನಮ್ಮ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು. ಕಾಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ಇತ್ತೀಚೆಗೆ ಜರಗಿದ ‘ಕಾಮಿ೯ಕ ಅದಾಲತ್’ ಸಭೆಯಲ್ಲಿ ಸಲ್ಲಿಸಿದ ಕಾರ್ಮಿಕರ ವಿವಿಧ ಸೌಲಭ್ಯಗಳ ಬಾಕಿ ನಿಂತಿರುವ ಅಜಿ೯ಗಳಿಗೆ ಈ ಕೂಡಲೆ ಹಣ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಅಂಪಾರು ರೋಟರಿ ಕ್ಲಬ್‌ನಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಸುಭಾಸ್ ಶೆಟ್ಟಿ ಕೊಡ್ಲಾಡಿ ಮಾತನಾಡಿ, ಶಿಕ್ಷಕರು ಒಂದು ರಾಷ್ಟ್ರದಲ್ಲಿ ಅಲ್ಲಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳ ಮೂಲಕ ಭವಿಷ್ಯಕ್ಕೆ ಕೊಂಡೊಯ್ಯುವ ರಾಯಭಾರಿಗಳು ಎಂದರು. ನಿವೃತ್ತ ಶಿಕ್ಷಕರಾದ ನರಸಿಂಹ ನಾಯಕ್ ಮೂಡುಬಗೆ, ನಿವೃತ್ತ ಮುಖ್ಯೋಪಾಧ್ಯಾಯರಾದ ನರಸಿಂಹ ನಾಯಕ್ ಮೂಡುಬಗೆ, ಜ್ಞಾನಸುಧಾ ಪದವಿಪೂರ್ವ ಕಾಲೇಜ್ ಕಾರ್ಕಳ ಇಲ್ಲಿನ ಉಪನ್ಯಾಸಕ ಎಂ. ರವಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಅಂಪಾರು ರೋಟರಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ವಹಿಸಿದ್ದರು. ರೋಟರಿ 3182 ವಲಯ 2ರ ಅಸಿಸ್ಟೆಂಟ್ ಗವರ್ನರ್ ಧನಂಜಯ ಪ್ರಭು ಉಪಸ್ಥಿತರಿದ್ದರು. ಆನಂದ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭುಜಂಗ ಶೆಟ್ಟಿ ಉಪಸ್ಥಿತರಿದ್ದರು. ಎಂ.ಎನ್ ಸಿಂಹ ಪ್ರಾರ್ಥಿಸಿದರು. ಕಾರ್ಯದರ್ಶಿ ಗುರುರಾಜ್ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಎಸ್‌ಸಿ ಮೋರ್ಚಾದ ಕಾರ್ಯಕಾರಿಣಿ ಸಭೆ ಬೈಂದೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಎಸ್ ಸಿ ಮೋರ್ಚಾ ಬಲಿಷ್ಠವಾಗುತ್ತದೆ ಇನ್ನು ಬಲಿಷ್ಠವಾಗಿ ನಾವೆಲ್ಲರೂ ಸೇರಿ ಪಕ್ಷವನ್ನು ಬೆಳೆಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್‌ಸಿ ಮೋರ್ಚಾದ ಅಧ್ಯಕ್ಷರಾದ ಚಂದ್ರ ಪಂಚವಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ನಾಯಕ್ ಕುಯಿಲಾಡಿ, ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಉಪಾಧ್ಯಕ್ಷರಾದ ಆನಂದ್ ಖಾರ್ವಿ, ಎಸ್‌ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಗೋಪಾಲ ಕಳಂಜೆ, ಉಪಾಧ್ಯಕ್ಷರಾದ ನಾರಾಯಣ ಗುಜ್ಜಾಡಿ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಸದಾನಂದ ಕೈಪುಂಜಾಲು, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಕೋಡಿ ಕಡಲತೀರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ ಇವತ್ತಿನ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳೆಂದರೆ ಮಕ್ಕಳು, ಅವರು ಕೈಗೊಂಡ ಈ ಕೆಲಸ ದೇವರ ಕೆಲಸ. ಯಾವುದು ಪರಿಸರದ ಹೊರಗಡೆ ಇದೆಯೋ ಅವೆಲ್ಲವೂ ನಮ್ಮ ದೇಹದ ಒಳಗಡೆ ಸೇರುತ್ತದೆ. ಪರಿಸರ ಕಲುಷಿತಗೊಂಡರೆ ಗಾಳಿ, ನೀರು, ಆಹಾರ ಸೇವನೆಯಿಂದ ನಮ್ಮ ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ನಂತಹ ವಸ್ತುಗಳ ಬಳಕೆಯನ್ನು ತಡೆಯುವುದು, ಪರಿಸರ ಸ್ನೇಹಿ ವಸ್ತುಗಳನ್ನು ಮರುಬಳಕೆಗೆ ಒಳಪಡಿಸುವುದು ಈ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡಬಹುದು ಎಂದು ಹೇಳಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯ್ಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ ” ಕೋಡಿ ಕಡಲತೀರ ಸ್ವಚ್ಛತೆ, ಹಸಿರು ಕೋಡಿ ಯೋಜನೆಯಿಂದ ವಿಶ್ವದಲ್ಲಿ ಕೋಡಿ ಪರಿಸರವು ವಿಶೇಷವಾಗಿ ಗುರುತಿಸಲ್ಪಡುವಂತಾಗಬೇಕೆಂಬ ಆಕಾಂಕ್ಷೆಯನ್ನು ವ್ಯಕ್ತಪಡಿಸಿ ಸ್ವಚ್ಛತಾ ಅಭಿಯಾನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪೌಷ್ಟಿಕ ಆಹಾರದ ಕೊರತೆಯಿಂದ ಸಂಭವಿಸುವ ಮಹಿಳೆಯರ ಮತ್ತು ಮಕ್ಕಳ ಸಾವನ್ನು ತಡೆಯುವ ಮತ್ತು ಅವರ ಆರೋಗ್ಯ ವೃದ್ಧಿಗೆ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2018ರಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಆರಂಭವಾಯಿತು. ಸಂಬಂಧಿಸಿದವರು ಇದರ ಪ್ರಯೋಜನ ಪಡೆಯಬೇಕು ಎಂದು ಕಾಲ್ತೋಡು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕಾರಂತ ಹೇಳಿದರು. ಮರವಂತೆ ಗ್ರಾಮ ಪಂಚಾಯಿತಿ, ಶಿಶು ಆಭಿವೃದ್ದಿ ಇಲಾಖೆ ಹಾಗೂ ಮರವಂತೆ ವಲಯದ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಗರ್ಬಿಣಿಯರು ಮತ್ತು ಕಿಶೋರಿಯರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದರೆ ತಮ್ಮ ದಿನನಿತ್ಯದ ಆಹಾರ ಪದ್ದತಿಯನ್ನು ಮತ್ತು ಆಹಾರ ತಯಾರಿ ವಿಧಾನವನ್ನು ಬದಲಿಸಿಕೊಳ್ಳಬೇಕು, ಹೆಚ್ಚಾಗಿ ಮನೆಯಲ್ಲಿಯೇ ಬೆಳೆಸಿದ ತರಕಾರಿಗಳನ್ನು ಉಪಯೋಗಿಸಬೇಕು. ರಕ್ತಹೀನತೆ ತಡೆಗೆ ಮತ್ತು ಗರ್ಭದ ಬೆಳವಣಿಗೆಗೆ ಹೆಚ್ಚು ಹಸಿರು ತರಕಾರಿ ಬಳಸಬೇಕು. ಅಗತ್ಯವಿದ್ದಾಗ ವೈದ್ಯರು ಸೂಚಿಸುವ ಔಷಧವನ್ನು ತಪ್ಪದೆ ಸೇವಿಸಬೇಕು ಎಂದು ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಮೇರಿಕಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ನಲ್ಲಿದ್ದ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಅವರ ಆತಿಥ್ಯದ ನೇತೃತ್ವವನ್ನು ತಾಲೂಕಿನ ಆಲೂರು ಮೂಲದ ಹೋಟೆಲ್ ಉದ್ಯಮಿ ಅನಂದ ಪೂಜಾರಿ ಅವರು ವಹಿಸಿದ್ದರು. ಆಲೂರು ಗ್ರಾಮದ ಕಲ್ಲಂಗಡಿ ಮನೆ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಗಳ ಪುತ್ರರಾದ ಆನಂದ ಪೂಜಾರಿ ಅವರು ಪತ್ನಿ ಸುಮಿತಾ ಅವರೊಂದಿಗೆ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ 35 ವರ್ಷಗಳಿಂದ ನೆಲೆಸಿದ್ದು, 25 ವರ್ಷಗಳಿಂದ ವುಡ್‌ಲ್ಯಾಂಡ್ಸ್ ಹೋಟೆಲ್‌ನ್ನು ನಡೆಸುತ್ತಿದ್ದಾರೆ. ಅನಿವಾಸಿ ಭಾರತೀಯ ಆನಂದ ಪೂಜಾರಿ ಹಾಗೂ ಸುಮಿತಾ ದಂಪತಿಗಳು ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶ ಪಡೆದಿದ್ದರು. ಭಾರತದಿಂದ ಅಮೇರಿಕಾಕ್ಕೆ ಕೇಂದ್ರ ಸಚಿವರು ಸಹಿತ ಗಣ್ಯರು ಭೇಟಿ ನೀಡಿದರೆ ಅವರಿಗೆ ಆನಂದ ಪೂಜಾರಿ ಅವರ ಹೋಟೆಲ್ ಮೂಲಕವೇ ಆತಿಥ್ಯ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಮೂರನೇ ಭಾರಿಗೆ ಆತಿಥ್ಯ ನೀಡಲಾಗುತ್ತಿದ್ದು, ನಾಲ್ಕನೇ ಭಾರಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತಿದ್ದಾರೆ.…

Read More