Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಶತಮಾನದಿಂದ ಊರಿನ ಮಕ್ಕಳಿಗೆ ವಿದ್ಯಾದಾನ ಮಾಡುತ್ತ ಬಂದಿದೆ. ಅಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಮನ್ವಯದ ದುಡಿಮೆಯಿಂದ ಈಚಿನ ದಿನಗಳಲ್ಲಿ ವಿದ್ಯಾರ್ಥಿ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನೆರೆಯೂರುಗಳ ಮಕ್ಕಳನ್ನೂ ಆಕರ್ಷಿಸುವಂತಾಗಲಿ. ಶಾಲೆಯ ಎಲ್ಲ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಹೇಳಿದರು. ಶಾಲೆಯಲ್ಲಿ ರೂ ೧೨ ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ತರಗತಿ ಕೊಠಡಿ ನಿರ್ಮಾಣ ಕಾಮಗಾರಿಗೆ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಶಾಲೆಯ ಹಿರಿಯ ಹಳೆವಿದ್ಯಾರ್ಥಿ ಎಸ್. ಜನಾರ್ದನ ಮರವಂತೆ ಶಾಲೆಯ ತಕ್ಷಣದ ಅಗತ್ಯಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಅನಿತಾ ಆರ್. ಕೆ ವಂದಿಸಿದರು. ಅರ್ಚಕ ಪರಮೇಶ್ವರ ಅಡಿಗ ಭೂಮಿಪೂಜೆ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಾರಾಧನೆ ಮತ್ತು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರನ್ನು ಗೌರವಿಸಲಾಯಿತು. ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷ ಡಾ. ಎನ್.ಕೆ. ಬಿಲ್ಲವ ಗೌರವಿಸಿ ಮಾತನಾಡಿ “ನಾವುಂದ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಹಲವಾರುಬಾರಿ ಆಗಮಿಸಿ, ವಾಸ್ತುವಿನ್ಯಾಸ, ಪಾರಂಪರಿಕ ವಿಚಾರಗಳ ಕುರಿತು ಸಲಹೆ ನೀಡಿದ್ದನ್ನು ನೆನಪಿಸಿಕೊಂಡು, ಅಮೀನರದು ನಿಜವಾದ ಅರ್ಥದಲ್ಲಿ ಹೋರಾಟದ ಬದುಕು, ಹಲವು ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಬೆರಗು ಹುಟ್ಟಸುವಂತಹದ್ದು, ಮುಂಬೈಯಲ್ಲಿ ನನ್ನ ನಿಕಟವರ್ತಿಗಳಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಶ್ರದ್ಧೆ, ಕುತೂಹಲ,ಆಸಕ್ತಿ, ನಿರಂತರ ಶ್ರಮ ಮತ್ತು ಸಂಸ್ಕೃತಿ ಪ್ರೀತಿಯಿಂದ ಹೇಗೆ ಅ¸Áಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂಬುದಕ್ಕೆ ಬನ್ನಂಜೆ ಬಾಬು ಅಮೀನರ ಜೀವನ ನಮಗೆಲ್ಲ ಮಾದರಿ ಎಂದರು”. ಬಿ.ಎ.ಹಂಝಾ ನಾವುಂದ, ರಮೇಶ್ ಎಮ್. ಹುಬ್ಳಿ ಆಲೂರು, ಆಡಳಿತ ಮಂಡಳಿಯ ಸದಸ್ಯರು,ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆನ್ಲೈನ್ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್ ಮತ್ತು ಇಂಟರ್ನಾಷನಲ್ ವರ್ಕ್ಶಾಪ್ ನಡೆಸಿದ ಫೈಸ್ಟಾರ್ ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್ ಇದರಲ್ಲಿ ಧನ್ವಿ ಮರವಂತೆಗೆ ಪ್ರಥಮ ಸ್ಥಾನ ದೊರೆತಿದೆ. ತ್ರಾಸಿಯ ಡಾನ್ ಬೊಸ್ಕೋ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಧನ್ವಿ, ಜ್ಯೋತಿ ಚಂದ್ರಶೇಖರ್ ಇವರ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬಾರಕೂರು ಚೌಳಿ ಕೆರೆಯ ಸಮೀಪದ ಶ್ರೀ ಗೌರೀಶ್ವರ ದೇವಸ್ಥಾನದ ಸ್ವಚ್ಛತಾ ಕಾರ್ಯ ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಭಾನುವಾರ ನಡೆಯಿತು. ಕ್ರಿ.ಶ.11ನೇ ಶತಮಾನದ್ದೆಂದು ಹೇಳಲಾಗುತ್ತಿರುವ ಶ್ರೀ ಗೌರೀಶ್ವರ ದೇವಸ್ಥಾನ ಹಿಂದೆ ವೈಭವದಿಂದ ಮೆರೆದ ದೇಗುಲವಾಗಿದೆ. ಇಲ್ಲಿಯ ಮಿಥುನ ನಾಗ ಶಿಲ್ಪ, ಅವಳೀ ನಾಗ ಶಿಲ್ಪ, ಬಿಳಿಯ ಶಿಲೆಯಿಂದ ಶ್ರೀ ಗೌರೀಶ್ವರ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಶೈವ ಹಾಗೂ ವೈಷ್ಣವ ದೇವಾಲಯ ಇರುವ ಅಪರೂಪದ ಸಂಗಮ ಸ್ಥಳದಂತಿದೆ ಈ ದೇಗುಲ. ಶಾಸನ ಉಲ್ಲೇಖದಂತೆ ಬಾರಕನ್ಯಾಪುರವೆಂದು ಕರೆಯಲ್ಪಡುವ ಈ ಊರು ಪ್ರವಾಸಿಗರ ನೆಚ್ಚಿನ ಕೇಂದ್ರದ ಸ್ಥಳದಂತೆ ಕಾಣಲ್ಪಟ್ಟಿದೆ. ಹಾಗಾಗಿ ಈ ಸಂದಭ೯ದಲ್ಲಿ ಯುವಾ ಬ್ರಿಗೇಡ್ ನ ನಿರಂಜನ್ ಶೆಟ್ಟಿ ತಲ್ಲೂರು, ಪ್ರಮೋದ್, ಪ್ರದೀಪ, ಶಶಿ ,ಸುಬ್ರಹ್ಮಣ್ಯ, ಇತಿಹಾಸ ಉಪನ್ಯಾಸಕರು ಆಗಿರುವ ಅರುಣ್ ಕುಮಾರ್, ಸತೀಶ್ ಗುಂಡ್ಮಿ,ಭರತ್ ಗುಡಿಗಾರ್,ಪ್ರಶಾಂತ್ ಖಾವಿ೯ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಪತ್ರಿಕೋದ್ಯಮ ಎನ್ನುವುದು ಅಭೂತಪೂರ್ವ ಶಕ್ತಿ. ಮಾಧ್ಯಮದ ವಿದ್ಯಾರ್ಥಿಗಳು ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ, ತಾವು ವಾಸಿಸುವ ಪರಿಸರದಲ್ಲಿ ನಡೆಯುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಮನೋಭಾವವನ್ನು ಎಳವೆಯಲ್ಲಿಯೇ ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ. ಜಿ. ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆಯ ವತಿಯಿಂದ ’ಆಳ್ವಾಸ್ ನ್ಯೂಸ್ ಇನ್ ಕ್ಯಾಪ್ಸೂಲ್’ ವ?ಚರಣೆ ಸಂಭ್ರಮವನ್ನು ನೆರವೇರಿಸಲಾಯಿತು. ಕಾಲೇಜಿನಲ್ಲಿ ಈಗಾಗಲೇ ಪತ್ರಿಕೋದ್ಯಮ ವಿಭಾಗ ಸಾಕಷ್ಟು ಹೆಗ್ಗಳಿಕೆಯನ್ನು ಪಡೆದಿದೆ. ನಿರಂತರ ಚಟುವಟಿಕೆಯಿಂದ ವಿದ್ಯಾರ್ಥಿಗಳು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಇದು ಹೀಗೆ ಮುಂದುವರೆದು, ಅಭಿವ್ಯಕ್ತಿ ವೇದಿಕೆ ಮುಖಾಂತರ ಇನ್ನ? ಕಾರ‍್ಯಕ್ರಮಗಳು ಮೂಡಿ ಬರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ಎಸ್ಸಿ. ಆನಿಮೇಶನ್ ವಿಭಾಗದ ಮುಖ್ಯಸ್ಥ ರವಿ ಮೂಡುಕೊಣಾಜೆ ಮಾತಾನಾಡಿ, “ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ, ಆಗ ಮಾತ್ರ ಹೊಸತನ ಮೂಡಲು ಸಾಧ್ಯ” ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ‍್ಯಕ್ರಮದ ಅಧ್ಯಕ್ಷತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿಜಾಬ್- ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ರೂಟ್ ಮಾರ್ಚ್ ನಡೆಸಿದರು. ಗಂಗೊಳ್ಳಿ ಗ್ರಾಮದ ಮೇಲ್ ಗಂಗೊಳ್ಳಿ, ಜಾಮಿಯಾ ಮೊಹಲ್ಲಾ, ಸುಲ್ತಾನ್ ಮೊಹಲ್ಲಾ, ಚರ್ಚ್ ರೋಡ್, ಎಸ್. ವಿ ಕಾಲೇಜು ರಸ್ತೆ, ಬಂದರು ರಸ್ತೆಯಲ್ಲಿ ಶನಿವಾರ ಪೊಲೀಸ್ ಪಥ ಸಂಚಲನ ನಡೆಸಿದರು. ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್, ಬೈಂದೂರು ಠಾಣೆ ಪಿಎಸ್ಐ ಪವನ್ ನಾಯ್ಕ್, ಕೊಲ್ಲೂರು ಠಾಣೆ ಪಿಎಸ್ಐ ಹೀರಣ್ಣ ಶಿರಗುಂಟೆ, ಟ್ರಾಫಿಕ್ ಠಾಣೆ ಪಿಎಸ್ಐ ಸುಧಾಪ್ರಭು ಸೇರಿದಂತೆ ಪೊಲೀಸ್ ಸಹಾಯಕ ಉಪನಿರೀಕ್ಷಕರುಗಳು, ಸಿಬ್ಬಂದಿಗಳು, ಕೆ.ಎಸ್.ಆರ್.ಪಿ ಮಹಿಳಾ ವಿಭಾಗದ ಪೊಲೀಸರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ:► ಕುಂದಾಪುರ: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಂದ ರೂಟ್ ಮಾರ್ಚ್ – https://kundapraa.com/?p=57377 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐವತ್ತೆರಡು ಅಡಿ ಎತ್ತರದ ಬಲೂನು ನಿರ್ಮಿತ ಶಿವಲಿಂಗ ಪ್ರದರ್ಶನ ಹಾಗೂ ಈಶ್ವರೀಯ ಸಂದೇಶ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಅಪ್ಪಣ್ಣ ಹೆಗ್ಡೆ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಿ.ಕೆ. ವಾದಿರಾಜ ಭಟ್ ಸ್ವಾಗತಿಸಿ, ಸಂಚಾಲಕಿ ಬಿ. ಕೆ. ಗೀತ ಈಶ್ವರೀಯ ಕಾಣಿಕೆ ನೀಡಿ ವಂದಿಸಿದರು. ಬಿ.ಕೆ .ಜಯಶ್ರೀ ಈಶ್ವರೀಯ ಸಂದೇಶ ನೀಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಾ. ರಘು ನಾಯ್ಕ್ ಅವರನ್ನು ಆಯ್ಕೆಮಾಡಲಾಗಿದೆ. ಬೈಂದೂರು ತಾಲೂಕಿನ ಗೋಳಿಹೊಳೆಯವರಾದ ಡಾ. ರಘು ನಾಯ್ಕ್ ಅವರು ಪ್ರಸ್ತುತ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಐಡಿಯಲ್ ಪ್ಲೇ ಅಬಾಕಸ ಇಂಡಿಯಾ ಪೈವೇಟ್ ಲಿಮಿಟೆಡ್ ಚೆನೈ ವತಿಯಿಂದ ಇತ್ತೀಚೆಗೆ ನಡೆದ 16ನೇ ರಾಜ್ಯಮಟ್ಟದ ಆನ್ಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್ ಅಬಾಕಸ್ ವಿದ್ಯಾರ್ಥಿಗಳು ವಿಜೇತರಾಗಿ ಆಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ದ್ವಿತೀಯ ಸ್ಥಾನ ಪಡೆದ ಲಿಖಿತ್, ತೃತೀಯ ಸ್ಥಾನ ಪಡೆದ ರಿತ್ವೀಕಾ , ಐದನೇ ಸ್ಥಾನ ಪಡೆದ ಪ್ರಥ್ವಿ, ಹಾಗೂ ವರಪ್ರಸಾದ ಇತರೇ ಬಹುಮಾನ ಪಡೆದುಕೊಂಡರು. ಇವರಿಗೆ ಬೈಂದೂರು ಸೆಂಟರ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಛತ್ರಪತಿ ಶಿವಾಜಿ ಬಸ್ರೂರಿಗೆ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಟ್ಟಿಲ್ಲ. ಪೋರ್ಚುಗೀಸರು ತೊಲಗಲು ಅಡಿಗಲ್ಲು ಹಾಕಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾಪುರುಷ ಶಿವಾಜಿ ನೆನಪಿನಲ್ಲಿ ಬಸ್ರೂರಲ್ಲಿ ಕಳೆದ 9 ವರ್ಷಗಳಿಂದ ಕಾರ‍್ಯಕ್ರಮ ನಡೆಯುತ್ತಿರುವುದು ಗಮನಾರ್ಹ ವಿಷಯ. ಇತಿಹಾಸದಲ್ಲಿ ಬಸ್ರೂರಿಗೆ ಹೆಚ್ಚು ಪ್ರಾಮುಖ್ಯತೆಯಿದೆ ಎಂದು ಭಾರತೀಯ ಸಂತಸಭಾದ ಸಂಘಟನಾ ಪ್ರಧಾನ ಕಾರ‍್ಯದರ್ಶಿ ಡಾ. ಸಂದೀಪ್ ರಾಜ್ ಮಹದೇವ ರಾವ್ ಮಹಿಂದ್ ಪುಣೆ ಹೇಳಿದರು. ಛತ್ರಪತಿ ಶಿವಾಜಿ 1665ರ ಫೆ. 13 ಪೋರ್ಚುಗೀಸರ ವಿರುದ್ಧ ಪ್ರಥಮ ನೌಕಾಯಾನ ಕೈಗೊಂಡು, ಬಸ್ರೂರಲ್ಲಿ ವಿಜಯ ಪತಾಕೆ ಹಾರಿಸಿದ ದಿನವಾಗಿದ್ದು, ಬಸ್ರೂರು ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಆಶ್ರಯದಲ್ಲಿ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಭಾನುವಾರ ಅದರ ಸವಿನೆನಪಿಗಾಗಿ ಬಸ್ರೂರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು. ಭಾರತೀಯ ಇತಿಹಾಸ ಸಂಕಲನ ಸಮಿತಿ ಮಹಿಳಾ ಪ್ರಮುಖ್ ಡಾ. ಸೀಮಾ ಉಪಾಧ್ಯಾಯ,ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಸೀಮಿತರಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು. ದುರ್ಗಾವಾಹಿನಿಯ ಚೈತ್ರ ಕುಂದಾಪುರ…

Read More