ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಚಲಿಸುವ ಬಸ್‌ನಲ್ಲಿಯೇ ವಿಷ ಕುಡಿದು ಗಂಭೀರ ಸ್ಥಿತಿಯಲ್ಲಿ ಇದ್ದ ದಂಪತಿ ಪ್ರಾಣ ಉಳಿಸುವ ಯತ್ನ ನಡೆಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಇಬ್ಬರು ಸರ್ಕಾರಿ ಆಸ್ಪತ್ರೆಗೆ ಬಸ್ ತಂದಿರುವ ಘಟನೆ ಗುರುವಾರ ನಡೆಯಿತು. ಘಟನೆ ವಿವರ : ಕೊಲ್ಲೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ತಮಿಳುನಾಡು ಮೂಲದ ರಾಜ್‌ಕುಮಾರ್ ಹಾಗೂ ಸಂಗೀತಾ ದಂಪತಿ ತಮ್ಮ ಒಂದೂವರೆ ವರ್ಷದ ಗಂಡು ಮಗುವಿನ ಜತೆಗೆ ಪ್ರಯಾಣ ಮಾಡುತ್ತಿದ್ದರು. ಬಸ್ ಹೆಮ್ಮಾಡಿ ಸಮೀಪದ ಕಟ್‌ಬೇಲ್ತೂರು ಬಳಿ ಬರುತ್ತಿದ್ದಂತೆ ದಂಪತಿ ಬಸ್‌ನಲ್ಲಿ ಬಿದ್ದು ನರಳುತ್ತಿದ್ದರು. ದಂಪತಿ ಸ್ಥಿತಿ ಕಂಡ ಸಹ ಪ್ರಯಾಣಿಕರು ಬಸ್‌ನ ನಿರ್ವಾಹಕ ಸತೀಶ್ ಅವರ ಗಮನಕ್ಕೆ ತಂದು, ಅವರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಅವಲೋಕಿಸಿದ ನಿರ್ವಾಹಕ ಹಾಗೂ ಚಾಲಕ ಇಕ್ಬಾಲ್ ಬಸ್‌ನ್ನು ನೇರವಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ತಂದು ನಿಲ್ಲಿಸಿದರು. ಕಟ್‌ಬೇಲ್ತೂರಿನಿಂದ ಕುಂದಾಪುರದವರೆಗೆ ಎಲ್ಲಿಯೂ ನಿಲುಗಡೆ ಮಾಡದೇ ಪ್ರಯಾಣಿಕರನ್ನು ಬಸ್‌ನಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪುಣೆಯಿಂದ ಕೇರಳಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಬೈಂದೂರು ತಾಲೂಕಿನ ಬಿಜೂರು ರೈಲು ನಿಲ್ದಾಣದ ಬಳಿ ಪಾಸಿಂಗ್ ಸಮಯದಲ್ಲಿ ನಿಂತುಕೊಂಡಿದ್ದು. ಈ ವೇಳೆಯಲ್ಲಿ ಧಿಡೀರನ್ ಇಂಧನ ಸೋರುತ್ತಿರುವುದನ್ನು ಕಂಡ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಗಂಟೆಗಳ ರೈಲನ್ನು ನಿಲ್ಲಿಸಿ ದೋಷವನ್ನು ಸರಿಪಡಿಸಿದರು. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಒಂದು ಗಂಟೆ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಓರ್ವ ಕ್ರೀಡಾಪಟುವಿನ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಆತ ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ತನ್ನ ಗುರಿಯನ್ನು ತಲುಪುತ್ತಾನೆ. ಕ್ರೀಡಾಪಟು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬದುಕಬಲ್ಲ ಎಂದು ರಾಜ್ಯ ಮಟ್ಟದ ಮಾಜಿ ವಾಲಿಬಾಲ್‌ಪಟು ರಾಜೇಶ್ ಕಾವೇರಿ ಹೇಳಿದರು. ಅವರು ಭಾನುವಾರ ಸಂಜೆ ಹೆಮ್ಮಾಡಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫ್ರೆಂಡ್ಸ್ ಹೆಮ್ಮಾಡಿಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಹೆಮ್ಮಾಡಿ ಪ್ರೀಮಿಯರ್ ಲೀಗ್-2020ರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾದ ವಿಚಾರಗಳ ಬಗ್ಗೆ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಎಲ್ಲಾ ಯುವಕರನ್ನು ಕ್ರೀಡೆಯತ್ತ ಸೆಳೆಯಲು ಅವಕಾಶ ಮಾಡಿಕೊಟ್ಟ ಫ್ರೆಂಡ್ಸ್ ಹೆಮ್ಮಾಡಿಯ ವಿಭಿನ್ನ ಪ್ರಯತ್ನ ಶ್ಲಾಘನೀಯ ಎಂದರು. ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹರೀಶ್ ಭಂಡಾರಿ, ಉದಯ್ ಕುಮಾರ್ ಹಟ್ಟಿಯಂಗಡಿ, ಶಿವಾನಂದ ಗಂಗೊಳ್ಳಿ, ರಾಘವೇಂದ್ರ ದೇವಾಡಿಗ ಹೊಸ್ಕಳಿ, ಶ್ರೀಕಾಂತ ಹೆಮ್ಮಾಡಿ ಮುಖ್ಯ ಅತಿಥಿಗಳಾಗಿ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ಸರ್ಕಾರಗಳ ತಪ್ಪು ನೀತಿಗಳ ಫಲವಾಗಿ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಇನ್ನೊಂದೆಡೆ ಕಾರ್ಮಿಕ ಕಾನೂನುಗಳ ತಿದ್ದುಪಡಿಯ ಮೂಲಕ ದುಡಿವ ಜನರ ಸೌಲಭ್ಯ ಕಸಿಯಲಾಗುತ್ತಿದೆ. ವಿರೋಧಿಸಿ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಧುರೀಣ ವೆಂಕಟೇಶ ಕೋಣಿ ಹೇಳಿದರು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯಂತೆ ಬೈಂದೂರು ತಾಲ್ಲೂಕು ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ ಮುಷ್ಕರದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಕೇಂದ್ರ ಸರ್ಕಾರದ ದುರಾಡಳಿತದ ಫಲವಾಗಿ ಜಿಡಿಪಿ ಕುಸಿಯುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಜನರ ಆದಾಯ ಇಳಿಮುಖ ವಾಗುತ್ತಿರುವ ಕಾರಣ ಬಡತನ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅವರು ದೂರಿದರು. ಆರ್ಥಿಕ ಸಂಕಷ್ಟದಿಂದ ತೊಂದರೆ ಗೊಳಗಾಗಿರುವ ಕಾರ್ಮಿಕರ ಹಿತಕಾಯಬೇಕಾದ ಸರ್ಕಾರ ಬಂಡವಾಳದಾರರ ರಕ್ಷಣೆಗೆ ನಿಂತಿದೆ. ಅದು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ನೀತಿಯನ್ನು ವಿರೋಧಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಎಲ್ಲ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ 18 ಬಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಲ್ಲವರ ವಿರುದ್ಧ ನೇರವಾಗಿ ಕೀಳು ಮಟ್ಟದ ಪದ ಪ್ರಯೋಗಿಸಿ ವ್ಯಂಗ್ಯವಾಡಿರುವ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಒಂದು ವಾರದ ಒಳಗೆ ಬಹಿರಂಗವಾಗಿ ಕ್ಷೇಮ ಕೇಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುವುದಲ್ಲದೇ ಪ್ರತಿಭಟನೆ ನಡೆಸುವುದಾಗಿ ಕರ್ಕಿಯ ಪ್ರಶಾಂತ ಪೂಜಾರಿ ತಿಳಿಸಿದ್ದಾರೆ. ಅವರು ಕುಂದಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇತ್ತಿಚಿಗೆ ಬ್ರಾಹ್ಮಣ ಮಹಾಸಭಾದ ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್ ಉದ್ಯಮಿ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವ ಸಮಾಜವನ್ನು ಅವಹೇಳನ ಮಾಡಿ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಈ ಬಗ್ಗೆ ಈಗಾಗಲೇ ಕಿರಣ್ ಎನ್ನುವವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಬಿಲ್ಲವ ಸಮಾಜಕ್ಕಾದ ಅವಮಾನವನ್ನು ಕುಂದಾಪುರ ಬಿಲ್ಲವ ಸಂಘಟನೆ ಖಂಡಿಸದೇ, ಬೇರೆವುದೋ ಸಮಾವೇಶದ ಬಗ್ಗೆ ಖಂಡನೆ ವ್ಯಕ್ತಪಡಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಒಂದು ವಾರದೊಳಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಜ.8: ಹೃದಯಾಘಾತದಿಂದ ನಿಧನರಾದ ಪತ್ರಕರ್ತ ರವಿರಾಜ್ ಒಳಲಂಬೆ ಅವರಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ನುಡಿನಮನ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ರವಿರಾಜ್ ಅವರ ಕುರಿತು ಮಾತನಾಡಿದರು. ಸದಸ್ಯರು ಒಂದು ನಿಮಿಷ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಯುವಜನತೆ ಉದ್ಯೋಗ ಕೇಳುತ್ತಿದ್ದಾರೆ, ಚಾಲಕರು ಪೆಟ್ರೋಲ್, ಡೀಸೆಲ್ ದರ ಹೆಚ್ಚಿರುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೆಲಸದ ಭದ್ರತೆ ನೀಡಿ ಎನ್ನುತ್ತಿದ್ದಾರೆ. ಜನಸಾಮಾನ್ಯರು ದಿನನಿತ್ಯದ ವಸ್ತುಗಳು, ಇನ್ಸೂರೆನ್ಸ್ ಪ್ರೀಮಿಯಂ ದರ, ಟ್ಯಾಕ್ಸ್ ದುಪ್ಪಟ್ಟು ಮಾಡಿದ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಆದರೆ ದೇಶದಲ್ಲಿ ಎನ್‌ಆರ್‌ಸಿ, ಸಿಎಬಿ ಜಾರಿಯಾಗಬೇಕೆಂದು ಎಲ್ಲಾದರೂ ಪ್ರತಿಭಟನೆ ನಡೆದಿತ್ತೆ ಯಾರಿಂದಲೂ ಬೇಡಿಕೆ ಇತ್ತೆ ಎಂದು ಹೋರಾಟಗಾರ, ವಾಗ್ಮಿ ಸುಧೀರ್ ಕುಮಾರ್ ಮುರೋಳಿ ಪ್ರಶ್ನಿಸಿದರು. ಅವರು ಸೋಮವಾರ ಸಂಜೆ ಕುಂದಾಪುರದ ಶಾಸ್ತ್ರಿಸರ್ಕಲ್ ಸಮೀಪ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಆಯೋಜಿಸಲಾದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಜನರ ಬದುಕು ಕಟ್ಟಿಕೊಡುವ ಬದಲು ಉದ್ದೇಶಪೂರ್ವಕವಾಗಿ ಈ ಕಾಯಿದೆಗಳನ್ನು ಜಾರಿಗೆ ತರುವುದರ ಹಿಂದೆ ಕೇಂದ್ರ ಸರಕಾರದ ವೈಫಲ್ಯಗಳನ್ನು ಮರೆಮಾಚುವ ತಂತ್ರ ಅಡಗಿದೆ. ಬ್ರೀಟಿಷರ ಪಳೆಯುಳಿಕೆಯಂತೆ ಅವರು ಬಿಟ್ಟು ಹೋದ ಹಿಂದೂ-ಮುಸ್ಲಿಂಮರನ್ನು ಒಡೆದು ಆಳುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಅವಧೂತ ಶ್ರೀ ವಿನಯ ಗುರೂಜಿ ಭೇಟಿ ನೀಡಿ, ನೆರೆದಿದ್ದವರನ್ನು ಆಶೀರ್ವದಿಸಿದರು. ಈ ಸಂದರ್ಭ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀ ವಿನಯ ಗುರೂಜಿ ಅವರನ್ನು ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ವೆಂಕಟ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲಿತ್ಲು, ಕಾರ್ಯದರ್ಶಿ ಶಿವರಾಮ ಪೂಜಾರಿ ಮೊದಲಾದವರು ಬರಮಾಡಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಜ.5: ಮರಳು ತುಂಬಿಸಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೈಂದೂರು ರಾಷ್ಟ್ರೀಯ ಹೆದ್ದಾರಿ ಬದಿಯ ಡಾಬಾ/ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬೈಂದೂರು ಹೊಸ ಬಸ್ ನಿಲ್ದಾಣದ ಎದುರು ಇರುವ ಅಂಗಡಿಗಳು ಜಖಂ ಆಗಿದ್ದು, ಅಲ್ಲಿದ್ದ ಜನರು ಪ್ರಾಣಾಪಾಯಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಲಾರಿಗೆ ಬೈಂದೂರು ರೈಲ್ವೆ ನಿಲ್ದಾಣ ರಸ್ತೆಯಿಂದ ಟಿಪ್ಪರ್ ಒಂದು ಎದುರು ಬಂದಿದ್ದರಿಂದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಲಾರಿಯನ್ನು ನುಗ್ಗಿಸಿದ್ದಾನೆ. ಲಾರಿ ಹಾದಿ ತಪ್ಪಿರುವುದನ್ನು ಗಮನಿಸಿದ ಡಾಬಾ ಎದುರು ನಿಂತಿದ್ದ ಜನರು ತಪ್ಪಿಸಿಕೊಂಡಿದ್ದರಿಂದ ಲಾರಿ ಸೀದಾ ಡಾಬಾ ಒಳಕ್ಕೆ ನುಗ್ಗಿ ನಿಂತಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸ್ಥಳೀಯರು ಲಾರಿಯನ್ನು ಪರೀಕ್ಷಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲೇ ಒಂದೇ ಲಾರಿಯಲ್ಲಿ ಮೂರು ನಂಬರ್ ಪ್ಲೇಟ್ ಇರುವುದು ಅಕ್ರಮ ಸಾಗಾಟವನ್ನು ದೃಢಪಡಿಸುವಂತಿದೆ. ಟೋಲ್‌ಗೇಟ್, ಚೆಕ್‌ಪೋಸ್ಟ್‌ಗಳಿರುವುದು ತಿಳಿದು ರಾಜಾರೋಷವಾಗಿ ಹಗಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಚಿಂತನೆ ಹಾಗೂ ವಿವೇಚನೆ ಇಲ್ಲದೇ ಉಪದೇಶಗಳನ್ನು ಅನುಸರಿಸಿ ನಡೆಯುವ ಮಕ್ಕಳು ಸಮಾಜ ಘಾತುಕ ಶಕ್ತಿಗಳಾಗಿ ಬೆಳೆಯುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಅಂಕ ಗಳಿಕೆಯ ಮೆಷಿನ್‌ಗಳನ್ನಾಗಿ ನೋಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಬದುಕನ್ನು ಎದುರಿಸಲಾಗದ ಹೇಡಿಗಳನ್ನಾಗಿ ರೂಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಕಳವಳ ವ್ಯಕ್ತಪಡಿಸಿದರು. ಅವರು ಶನಿವಾರ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಧಾನ ಭಾಷಣ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿಯೇ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡಬೇಕು. ಮೊಬೈಲ್ ಆಪರೇಟ್ ಮಾಡುವ ಮಗುವು ಅದರಲ್ಲಿ ಏನು ನೋಡುತ್ತಿದೆ ಎಂಬುದರ ಅರಿವು, ತಮ್ಮ ಮಗುವಿನ ವಿಕಾಸಕ್ಕೆ ಪೂರಕವಾದ ವಾತಾರವಣ ನಿರ್ಮಿಸುವ ಜವಾಬ್ದಾರಿ ಎರಡೂ ಪೋಷಕರ ಮೇಲಿದೆ. ಮೊಬೈಲ್ ಹಾಗೂ ಟಿ.ವಿ ಧಾರಾವಾಹಿಗಳ ಅಡಿಕ್ಷನ್‌ಗಳಿಂದ ಅಂತರ ಕಾಯ್ದುಕೊಂಡರೆ ಬಹುಪಾಲು ಸುಧಾರಣೆ ಸಾಧ್ಯವಾಗುತ್ತದೆ ಎಂದರು. ರತ್ತೂಬಾಯಿ ಜನತಾ ಪ್ರೌಢಶಾಲೆಯ ಇತಿಹಾಸವನ್ನು ಅವಲೋಕಿಸಿದಾಗ ಆರಂಭದಲ್ಲಿ ಮಹಿಳೆ ಸಶಕ್ತೀಕರಣ…
